ಬಿಲ್ಲವರ ಅಸೋಸಿಯೇಶನ್ ಮುಂಬೈ: ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ 74ನೇ ಪ್ರಜಾಪ್ರಭುತ್ವ ದಿನಾಚರಣೆ
ಬಿಲ್ಲವರ ಅಸೋಸಿಯೇಶನ್, ಮುಂಬೈಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದೇಶದ 74ನೇ ಪ್ರಜಾಪ್ರಭುತ್ವ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಪ್ರಾರಂಬದಲ್ಲಿ ಪುರೋಹಿತರಾದ ಐತ್ತಪ್ಪ ಸುವರ್ಣ ರವರು ಗುರು ಪೂಜೆ ಮಾಡಿ ಪ್ರಾರ್ಥನೆ ಮಾಡಿದರು. ಸಭಾಗ್ರಹದಲ್ಲಿ ನೆರೆದಿದ್ದ ಗಣ್ಯರು, ಮಹಿಳೆಯರು , ಯುವಬ್ಯೂದಯ ಸಮಿತಿ ಸದಸ್ಯರು, ಮಕ್ಕಳು ದೇಶದ ಪ್ರಗತಿಗಾಗಿ ಗುರು ಸನ್ನಿಧಿಯಲ್ಲಿ ಪ್ರಾರ್ಥಿಸಿದರು.
74ನೇ ಪ್ರಜಾಪ್ರಭುತ್ವ ದಿನಾಚರಣೆ ಯ ಮುಖ್ಯ ಅತಿಥಿಯಾಗಿ ಆಗಮಿಸದಂತಹ ಶ್ರೀ ಜೈ ಭವಾನಿ ಶೈನೇಶ್ವರ ಮಂದಿರ ಡೊಂಬಿವಲಿ ಪೂರ್ವ ಇದರ ಅಧ್ಯಕ್ಷರಾದ ಶ್ರೀಯುತ ರವಿ ಸುವರ್ಣ ದ್ವಜಾರೋಹಣಗೈದರು. ನೆರದ ಎಲ್ಲರೂ ರಾಷ್ಟ್ರಗೀತೆ ಹಾಡಿ ದ್ವಜಕ್ಕೆ ವಂದನೆ ಸಲ್ಲಿಸಿದರು.
ತದನಂತರ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಚಂದ್ರಹಾಸ್ ಪಾಲನ್ ರವರ ಅದ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನೆಡೆಯಿತು ಹಾಗು ಮುಖ್ಯ ಅತಿಥಿಯಾಗಿ ಶ್ರೀ ಜೈ ಭವಾನಿ ಶೈನೇಶ್ವರ ಮಂದಿರ ಡೊಂಬಿವಲಿ ಪೂರ್ವ ಇದರ ಅಧ್ಯಕ್ಷರಾದ ರವಿ ಸುವರ್ಣ , ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಜೊತೆ ಕಾರ್ಯದರ್ಶಿ ರವಿ ಯಸ್. ಸನಿಲ್, ಗೌರವ ಕಾರ್ಯಾಧ್ಯಕ್ಷ ರಾದ ದೇವರಾಜ್ ಪೂಜಾರಿ, ಉಪಾದ್ಯಕ್ಷರುಗಳಾದ ಶ್ರೀಧರ್ ಅಮೀನ್, ಉಪ ಕಾರ್ಯದರ್ಶಿ ಕೃಷ್ಣ ಪೂಜಾರಿ, ಗೌ. ಕೋಶಾಧಿಕಾರಿ ಆನಂದ್ ಪೂಜಾರಿರವರು ವೇದಿಕೆಯಲ್ಲಿ ಉಪಸ್ತಿಥರಿದ್ದರು. ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಜೊತೆ ಕಾರ್ಯದರ್ಶಿ ರವಿ ಯಸ್. ಸನಿಲ್ ಯವರು ಎಲ್ಲರನ್ನು ಸ್ವಾಗತಿಸುತ್ತಾ ವೇದಿಕೆಯಲ್ಲಿದ್ದ ಗಣ್ಯರ ಪರಿಚಯ ನೀಡಿದರು.
ರಾಮಚಂದ್ರ ಬಂಗೇರ , ಆನಂದ್ ಪೂಜಾರಿ ಪ್ರಜಾಪ್ರಭುತ್ವ ದಿನಾಚರಣೆಯ ಬಗ್ಗೆ ಸಮಯೋಚಿತವಾಗಿ ಮಾತನಾಡಿದರು. ಮಾಜಿ ಕಾರ್ಯಾಧ್ಯಕ್ಷ ಹಾಗು ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಜೊತೆ ಕಾರ್ಯದರ್ಶಿ ರವಿ ಎಸ್ ಸನಿಲ್ ರವರು ಪ್ರಜಾಪ್ರಭುತ್ವದ ಹಾಗು ನಮ್ಮ ಸಮಾಜದ ಬಗ್ಗೆ ಮಾತನಾಡಿದರು.
ಅತಿಥಿಯಾಗಿ ಆಗಮಿಸದಂತಹ ಶ್ರೀ ಜೈ ಭವಾನಿ ಶೈನೇಶ್ವರ ಮಂದಿರ ಡೊಂಬಿವಲಿ ಪೂರ್ವ ಇದರ ಅಧ್ಯಕ್ಷರಾದ ರವಿ ಸುವರ್ಣ ಮಾತನಾಡುತ್ತ ಪ್ರಜಾ ಪ್ರಭುತ್ವ ದ ಬಗ್ಗೆ ಸಂಕ್ಷಿಪ್ತವಾಗಿ ವಿವರದೊಂದಿಗೆ ಮಾತನಾಡಿದರು ಹಾಗು ನಮ್ಮ ಸಮಾಜದ ಯುವಕರು ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಸದಸ್ಯೆತನವನ್ನು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವಂತೆ ಕರೆ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಚಂದ್ರಹಾಸ್ ಪಾಲನ್ ರವರು ನೆರೆದಂತಹ ಸಭಿಕರಿಗೆ ಪ್ರಜಾ ಪ್ರಭುತ್ವದ ಶುಭಾಶಯವನ್ನು ನೀಡುತ್ತಾ ಯುವ ವಿಭಾಗದ ಸದಸ್ಯರುಗಳು ಅಚ್ಚು ಕಟ್ಟಾಗಿ ಈ ಕಾರ್ಯಕ್ರಮವನ್ನು ಮಾಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ನೀಡಿದರು.
ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಜೊತೆ ಕಾರ್ಯದರ್ಶಿ ರವಿ ಯಸ್. ಸನಿಲ್ ಹಾಗು ಯುವಬ್ಯುದಯ ಸಮಿತಿಯ ಸದ್ಯಸ್ಯರಾದ ಚಿನ್ಮಯ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು, ಕಾರ್ಯಕ್ರಮದ ಕೊನೆಯಲ್ಲಿ ಉಪ ಕಾರ್ಯದರ್ಶಿ ಕೃಷ್ಣ ಪೂಜಾರಿ ವಂದನಾರ್ಪಣೆ ಸಲ್ಲಿಸಿದ ಬಳಿಕ ಸೇರಿದ್ದ ಎಲ್ಲರಿಗೂ ಸಿಹಿ ತಿಂಡಿ ಹಾಗೂ ಲಘು ಉಪಹಾರ ನೀಡಲಾಯಿತು.










Post a Comment