".

Header Ads

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ ವಜ್ರಮಹೋತ್ಸವ ಸಂಭ್ರಮದ ಸಮಾರೋಪ ಸಮಾರಂಭ


(ಚಿತ್ರ : ಧನಂಜಯ ಪೂಜಾರಿ/ ವರದಿ : ಇನ್ನಂಜೆ ಜಯರಾಮ್)

ಕಲ್ಯಾಣ್ ಪರಿಸರದ ಪ್ರಮುಖ ಧಾರ್ಮಿಕ ಸಂಸ್ಥೆ ಗಳಲ್ಲಿ ಒಂದಾದ ಶಹಾಡ್ ಬಿರ್ಲಾ ಗೆಟ್ ನ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ ವಜ್ರಮಹೋತ್ಸವ 60 ರ ಸಂಭ್ರಮ  ದ ಸಮಾರೋಪ ಸಮಾರಂಭವು ಜನವರಿ 29 ರಂದು  ಉಲ್ಲಾಸ್ ನಗರದ ಟೌನ್ ಹಾಲ್ ನ ಶಶಿಧರ್ ಶೆಟ್ಟಿ ಬರೋಡ ನವಶಕ್ತಿ ವೇದಿಕೆಯಲ್ಲಿ ಅದ್ದೂರಿಯಾಗಿ ಜರುಗಿತು. '

ದೇವಸ್ಥಾನದ ತಂತ್ರಿ ಶಂಕರ್ ನಾರಾಯಣ್ ತಂತ್ರಿ ಯವರ ಮಾರ್ಗದರ್ಶನದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. 

 60 ಜನ ಸುಮಂಗಲೆಯರು ಪೂರ್ಣ ಕುಂಭ ಕಳಸ ದೊಂದಿಗೆ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. 

ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಜ್ರಮೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಜೆ ಶೆಟ್ಟಿ ಯವರ ಮುಂದಾಳತ್ವ ದಲ್ಲಿ ಸಮಾರೋಪ ಸಮಾರಂಭದ ಉದ್ಘಾಟನಾ ಕಾರ್ಯಕ್ರಮಕ್ಕೆ ವೇದಿಕೆಯ ಗಣ್ಯರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಗೌರವ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಬೇಳಂಜೆ ಸ್ವಾಗತಿಸಿದರೆ, ಅಧ್ಯಕ್ಷ ರಾಜೇಶ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮಂದಿರದ ತಂತ್ರಿ ಬ್ರಹ್ಮಶ್ರೀ ಶಂಕರ್ ನಾರಾಯಣ್ ತಂತ್ರಿ ಆಶೀರ್ವಚನ ನೀಡಿದರು. 

ಈ ಸಂದರ್ಭದಲ್ಲಿ ಮಂದಿರದ ಹಿರಿಯ ಸದಸ್ಯರುಗಳನ್ನು ಸನ್ಮಾನಿಸಲಾಯಿತು. 

ಸಮಾರಂಭದಲ್ಲಿ ಉಪಸ್ಥಿತರಿದ್ದ ಸ್ಥಳೀಯ ನಗರ ಸೇವಕ ಸಂಜಯ್ ಹರಿಬಾವ್ ಪಾಟೀಲ್, ಬಿ ಜೆ ಪಿ ಉಲ್ಲಾಸ್ ನಗರದ ಅಧ್ಯಕ್ಷ ಜಮುನು ಭಾಯ್ ಪುರುಸ್ವಾನಿ, ಸ್ಥಳೀಯ ಶಾಸಕ ಕುಮಾರ್ ಐಲಾನಿ, ಶಿವ ಸೇನಾ ಉಲ್ಲಾಸ್ ನಗರ್ ಸಹಾರ್ ಪ್ರಮುಖ್ ದಿಲೀಪ್ ಗಾಯಕ್ವಾಡ್  ಮಂದಿರದ ಬಗ್ಗೆ, ಪರಿಸರದ ತುಳು ಕನ್ನಡಿಗರ ಬಗೆಗಿನ  ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ವಿಶೇಷ ವಾಗಿ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.

ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ನ ಗೌರವ ಅಧ್ಯಕ್ಷೆ ಚಿತ್ರ ಆರ್ ಶೆಟ್ಟಿ, ಕುಲಾಲ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ದೇವದಾಸ್ ಕುಲಾಲ್, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಂಡಳಿಯು ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು.

ಮಂದಿರದ ಅಧ್ಯಕ್ಷ ಕರುಣಾಕರ್ ಶೆಟ್ಟಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. 

ವೇದಿಕೆಯಲ್ಲಿ ಸಮಿತಿಯ ಪದಾಧಿಕಾರಿಗಳು, ವಿಶ್ವಸ್ಥರು, ಸಲಹೆಗಾರರು ಉಪಸ್ಥಿತರಿದ್ದರು.

ನಂತರ ನೃತ್ಯ ಸ್ಪರ್ಧೆ ಆರಂಭಗೊಂಡಿತು .

ಒಟ್ಟು 14 ತಂಡಗಳು ಈ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದವು.


ಜಾನಪದ ಹಾಗೂ ಶಾಸ್ತ್ರೀಯ ಕಲಾ ಪ್ರಕಾರಗಳು ನೆರೆದಿದ್ದ ಸಭಿಕರ ಮನ ಸೂರೆ ಗೊಂಡಿತು.

ನಂತರ ಮಂದಿರದ ಗೌರವ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಬೇಳಂಜೆ ಯವರ ದಿಗ್ದರ್ಶನ, ನಿರ್ಮಾಣ, ನಿರ್ವಹಣೆಯಲ್ಲಿ ಮಂದಿರವು ಸ್ಥಾಪನೆಯಾಗಿ ನಡೆದುಬಂದ ದಾರಿಯ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. 

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಯವರ ಅದ್ಯಕ್ಷತೆಯಲ್ಲಿ 

ಸಂಜೆ ನಡೆದ ಸಮಾರೋಪ ಸಮಾರಂಭಕ್ಕೆ   ಗಣ್ಯರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ವಜ್ರ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷ ಮೂಡುಶೆಡ್ಡೆ ವಿಶ್ವನಾಥ ಎಸ್ ಶೆಟ್ಟಿ ಪ್ರಸ್ತಾವಿಕ ಭಾಷಣ ಗೈದರು.

ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಜೆ ಶೆಟ್ಟಿ ದೇವಸ್ಥಾನ ನಡೆದು ಬಂದ ದಾರಿಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ತುಳು ಸಂಘ ಬರೊಡ ಇದರ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೊಡ ,  ಹಿರಿಯ ಮಾರ್ಗದರ್ಶಕಿ ಶಾಂಭವಿ ಶೆಟ್ಟಿ ಪರಿವಾರ ಚಂದ್ರಕಾಂತ ಶೆಟ್ಟಿ, ಅನಿಲ್ ಶೆಟ್ಟಿ, ಅವರನ್ನು ಸನ್ಮಾನಿಸಲಾಯಿತು.

ವಿಶೇಷ ವೃತ್ತಿ ಸೇವೆಗಾಗಿ ಡಾಕ್ಟರ್ ಸೂರಜ್ ನಾಯರ್ ಅವರನ್ನು ಗೌರವಿಸಲಾಯಿತು..

ನಂತರ ಜೀರ್ಣೋದ್ಧಾರ ಸಮಿತಿಯ ಕಾರ್ಯದ್ಯಕ್ಷ ಮೂಡುಶೆಡ್ಡೆ ವಿಶ್ವನಾಥ್ ಎಸ್ ಶೆಟ್ಟಿ, ಅಧ್ಯಕ್ಷ ದಯಾ ಶಂಕರ್ ಶೆಟ್ಟಿ,  ಸಲಹೆಗಾರ ಚಂದ್ರಹಾಸ್ ಶೆಟ್ಟಿ, ದೇವಸ್ಥಾನದ ಮಾಜಿ ಅಧ್ಯಕ್ಷ ಕೃಷ್ಣ ಜಿ ಪೂಜಾರಿ. ವಜ್ರಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ನಿರಂತರ ಶ್ರಮಿಸಿದ, ಕಾರ್ಯಕ್ರಮದ ರುವಾರಿಗಳಾದ ಮಂದಿರದ ಅಧ್ಯಕ್ಷ ಕರುಣಾಕರ ಶೆಟ್ಟಿ, ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಶೆಟ್ಟಿ, ಗೌರವ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಬೆಳಿಂಜೆ ಯವರನ್ನು ಪರಿವಾರ ಸಮೇತ ಸನ್ಮಾನಿಸಲಾಯಿತು

ನಂತರ ಗೌರವ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಬೆಳ್ಳಂಜೆ ಗತ ವರ್ಷದ ವರದಿ ವಾಚಿಸಿದರು.

ಈ ಸಂದರ್ಭದಲ್ಲಿ ಶ್ರೀ ನಿತ್ಯಾ ಅಂಬಿಕಾ ವಜ್ರ ಮಹೋತ್ಸವ ಸ್ಮರಣ ಸಂಚಿಕೆ ಯನ್ನು ವೇದಿಕೆಯ ಗಣ್ಯರು ಲೋಕಾರ್ಪಣೆ ಗೊಳಿಸಿದರು.

ನಂತರ ಮಹಾ ದಾನಿ ಗಳು, ಮಹಾ ಪೋಷಕರು, ಹಾಗೂ ಕಾರ್ಯಕ್ರಮ ಕ್ಕೆ ಸಹಕರಿಸಿದ  ಭಾಸ್ಕರ್ ಶೆಟ್ಟಿ ಗುರುದೇವ್. ಸದಾಶಿವ ಸುವರ್ಣ,ಯುವರಾಜ್ ಪೂಜಾರಿ, ಜಗದೀಶ್ ರಾಮ್ ಬಂಜನ್, ಸತೀಶ್ ಎನ್ ಶೆಟ್ಟಿ, ಶ್ರೀಮತಿ ಸುಬ್ಬಯ್ಯ ಶೆಟ್ಟಿ ಚಂದ್ರಕಾಂತ ಶೆಟ್ಟಿ, ದಯಾನಂದ ಶೆಟ್ಟಿ, ಉದಯ ಶೆಟ್ಟಿ, ಹಿರಿಯಣ್ಣ ಶೆಟ್ಟಿ, ಸೋಮನಾಥ್ ಶೆಟ್ಟಿ, ಸುದಾನ್ ಶೆಟ್ಟಿ, ಮಂಜುನಾಥ್ ಶೆಟ್ಟಿ, ವಿಶಾಲ್ ಶೆಟ್ಟಿ ಬರೊಡ, ಶತೀಶ್ ಶೆಟ್ಟಿ, ಜಗನ್ನಾಥ ಶೆಟ್ಟಿ, ರವಿ ರಾಜ್ ಶೆಟ್ಟಿ ಗೋಪಾಲ್ ಕೃಷ್ಣ ಶೆಟ್ಟಿ ಪರಿವಾರ, ಕರ್ನೂರ್ ಮೋಹನ್ ರೈ, ಅಶೋಕ್ ಪಕ್ಕಳ, ರವಿ ಅಂಚನ್, ಮತ್ತಿತರರನ್ನು  ಸನ್ಮಾನಿಸಲಾಯಿತು. 

ಗೌರವ ಅತಿಥಿ ಗಳಗಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಮಾಜಿ 

 ಕಾರ್ಯಾಧ್ಯಕ್ಷೆ ಆಶಾ ಮನೋಹರ್ ಹೆಗ್ಡೆ, ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ , ಉಪಾಧ್ಯಕ್ಷ  ಮುಂಡ್ಕೂರ್ ರತ್ನಾಕರ ಶೆಟ್ಟಿ, ಥಾಣೆ ಬಂಟ್ಸ್ ಅಸ್ಸೋಸಿಯಶನ್ ನ ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ವೇಣುಗೋಪಾಲ ಎಲ್. ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಉಲ್ತುರ್ ಮೋಹನ್ ದಾಸ್ ಶೆಟ್ಟಿ, ಥಾಣೆ ಜಿಲ್ಲಾ ಬಿ ಜೆ. ಪಿ. ಅಧ್ಯಕ್ಷ ಸಂತೋಷ್ ಶೆಟ್ಟಿ ಬಂಟರ ಸಂಘ ಮುಂಬಯಿ ಯ ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ 60 ವರ್ಷಗಳ ಮಂದಿರದ ಸಾಧನೆಯನ್ನು ಶ್ಲಾಘಿಸಿದರು.

ಮಂದಿರಕ್ಕೆ, ಹಾಗೂ ಕಾರ್ಯಕ್ರಮ ಕ್ಕೆ ಸಹಕರಿಸಿ ದವರನ್ನು ಗೌರವಿಸಲಾಯಿತು.

ಗೌರವ ಅತಿಥಿ ಯಾಗಿ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ ತುಳು ಸಂಘ ಬರೊಡ ಇದರ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೊಡ ಮಾತನಾಡುತ್ತ ಈ ಸಮಿತಿಯು ಮಾಡುತ್ತಿರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಯವರು ಅಧ್ಯಕ್ಷೀಯ ನುಡಿಗಳನ್ನಾಡುತ್ತ ಮಂದಿರವು 60 ವರ್ಷಗಳಿಂದ ಎಲ್ಲರನ್ನೂ ಒಗ್ಗಟ್ಟಾಗಿ ಇರಿಸಿ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿದೆ. ನಾವು ಧಾನಿ ಗಳಿಂದ ತೆಗೆದುಕೊಂಡು ಸಮಾಜದ ಅಶಕ್ತ ವರ್ಗದವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಹಣ ಇದ್ದರಷ್ಟೆ ಸಾಲದು ಧಾನ ಮಾಡುವ ಮನಸ್ಸು ಬೇಕು, ಆಗಿದ್ದಲ್ಲಿ ಸಮಾಜ ಸಮತೋಲನ ದಿಂದ ನಡೆಯಲು ಸಾಧ್ಯ ಎಂದರು.

ಅಶೋಕ್ ಪಕ್ಕಳ, ಕರ್ನೂರು ಮೋಹನ್ ರೈ, ಸಭಾ ಕಾರ್ಯಕ್ರಮ ನಿರೂಪಿಸಿದರೆ,

ಉದಿತ ಅರುಣ್ ಶೆಟ್ಟಿ ಹಾಗೂ ನಾಗ ಕಿರಣ್ ಶೆಟ್ಟಿ ಸಾಂಸ್ಕೃತಿಕ ಹಾಗೂ ನೃತ್ಯ ಕಾರ್ಯಕ್ರಮ ನಿರ್ವಹಿಸಿದರು.

ವೇದಿಕೆಯಲ್ಲಿ ಥಾಣೆ ಯ ಮಾಜಿ ಮೇಯರ್ ಮೀನಾಕ್ಷಿ ಶಿಂದೆ, ನಗರ ಸೇವಕ ದಯಾ ಶಂಕರ್ ಶೆಟ್ಟಿ, ಬಂಟರ ಸಂಘ ಬಿವಂಡಿ ಬದ್ಲಾಪುರ ದ ಕಾರ್ಯದ್ಯಕ್ಷ ರವೀಂದ್ರ ವೈ ಶೆಟ್ಟಿ, ಬಿಲ್ಲವರ ಅಸ್ಸೋಸಿಯಶನ್ ಕಲ್ಯಾಣ್ ಸ್ಥಳೀಯ ಸಮಿತಿಯ ಕಾರ್ಯದ್ಯಕ್ಷ ಸದಾಶಿವ ಸುವರ್ಣ, .. ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಬಂಟರ ಸಂಘ ಬಿವಂಡಿ ಬದ್ಲಾಪುರ, ದ್ವಿತೀಯ ಶ್ರೀ ಅಯ್ಯಪ್ಪ ಮಿತ್ರ ಮಂಡಳಿ ಡೊಂಬಿವಲಿ, ತ್ರಿತಿಯ ನವೋದಯ ಕನ್ನಡ ಸಂಘ ಥಾಣೆ ಇವರು ನಗದು ಹಾಗೂ ಪ್ರಶಸ್ತಿ ಫಲಕ ಪಡೆದರು.

ಗೌರವ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಬೆಳಿಂಜೆ ಧನ್ಯವಾದ ಸಮರ್ಪಿಸಿದರು.

ಮಹಾರಾಷ್ಟ್ರದ ಮರಾಠಿ ಮಣ್ಣಿನಲ್ಲಿ ಕಳೆದ 60 ವರ್ಷಗಳಿಂದ ಧಾರ್ಮಿಕ ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತ  ಕಳೆದ ವರ್ಷ ವಜ್ರಮಹೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ನಡೆಸಿ ನಂತರ ವಜ್ರಮಹೋತ್ಸವ ನಿಮಿತ್ತ ಹಲವಾರು ವೈವಿಧ್ಯಮಯ ಕಾರ್ಯಕ್ರಮ ನಡೆಸಿ, ಮಂದಿರ ಸಮಿತಿಯ ಕಾರ್ಯದ್ಯಕ್ಷ ಚಂದ್ರಕಾಂತ ಎಸ್ ಶೆಟ್ಟಿ ಪಾಂಗಳ, ಅಧ್ಯಕ್ಷ ಕರುಣಾಕರ ಜೆ ಶೆಟ್ಟಿ, ವಜ್ರಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷ ಮೂಡುಶೆಡ್ಡೆ ವಿಶ್ವನಾಥ್ ಎಸ್ ಶೆಟ್ಟಿ, ಅಧ್ಯಕ್ಷ ರಾಜೇಶ್ ಜೆ ಶೆಟ್ಟಿ, ಉಪಾಧ್ಯಕ್ಷರುಗಳಾದ ಅನಿಲ್ ಎಸ್ ಶೆಟ್ಟಿ ಐರೋಲಿ, ಸಂತೋಷ್ ಎಚ್ ಶೆಟ್ಟಿ, ಜಯರಾಮ್ ಹೆಗ್ಡೆ, ಕಾರ್ಯದರ್ಶಿ ಜಗದೀಶ್ ಎಮ್. ಶೆಟ್ಟಿ ಬೆಳಿಂಜೆ, ಕೋಶಾಧಿಕಾರಿ ಯುವರಾಜ್ ಕೆ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರವೀಣಾ ಪಿ ಶೆಟ್ಟಿ, ಯುವ ವಿಭಾಗದ ಕಾರ್ಯದ್ಯಕ್ಷ ದೀಪಕ್ ಎಸ್ ಬಂಗೇರ,  ಮತ್ತು ಎಲ್ಲ ಹಿರಿಯ ಕಿರಿಯ ಕಾರ್ಯಕರ್ತರ ಸಹಕಾರದಿಂದ ವಜ್ರಮಹೋತ್ಸವ ದ ಸಮಾರೋಪ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಿಕೊಂಡಿತು.

Powered by Blogger.