".

Header Ads

ಡೊಂಬಿವಲಿ ಸಿರಿನಾಡ ವೆಲ್ಪೆರ್ ಅಸೋಷಿಯೇಶನ್ ನಲ್ಲಿ ಗಣರಾಜ್ಯೋತ್ಸವ ದಿನ ಆಚರಣೆ



ಡೊಂಬಿವಲಿ  ಪಶ್ಚಿಮದ   ಪ್ರತಿಷ್ಠಿತ   ಸಾಮಾಜಿಕ   ಸಂಸ್ಥೆ  ಸಿರಿನಾಡ ವೆಲ್ಪೆರ್  ಅಸೋಷಿಯೇಶನ್ ನ  ಕಛೇರಿಯಲ್ಲಿ  ಗಣರಾಜ್ಯೊತ್ಸವ  ದಿನಾಚರಣೆಯನ್ನು  ಆಚರಿಸಲಾಯಿತು,  ಸಂಘದ ಅದ್ಯಕ್ಷ  ಆರ್. ಕೆ. ಸುವರ್ಣ ಇವರು ದ್ವಜಾರೋಹಣಗೈದರು. ದ್ವಜ ವಂದನೆ,  ರಾಷ್ಟ್ರಗೀತೆಯೊಂದಿಗೆ ಸಮಾಪನಗೊಂಡ  ರಾಷ್ಟ್ರೀಯ   ಕಾರ್ಯಕ್ರಮದ  ನಿರೂಪಣೆಯನ್ನು ಕಾರ್ಯದರ್ಶಿ  ದಾಮೋಧರ  ಸುವರ್ಣ  ನೆರವೇರಿಸಿದರು.  

ನಂತರ  ನಡೆದ  ಸಭಾ ಕಾರ್ಯಕ್ರಮದಲ್ಲಿ  ಸಂಘದ  ಅದ್ಯಕ್ಷ  ಆರ್. ಕೆ. ಸುವರ್ಣ   ಇವರು ಮಾತನಾಡಿ  ಸಂಘದಲ್ಲಿ  ನಡೆಯುವ  ಕಾರ್ಯಕ್ರಮದಲ್ಲಿ ಸರ್ವ ಸದಸ್ಯರು  ಸಹಬಾಗಿಯಾಗಿ   ಒಗ್ಗಟ್ಟಿನಿಂದ  ಕಾರ್ಯನಿರ್ವಯಿಸ ಬೇಕೆಂದರಲ್ಲದೆ, ಪೆ 11 ರಂದು ಅಯೋಜಿಸಿರುವ  ಶ್ರೀ ಶನೀಶ್ವರ ಪೂಜೆಯಲ್ಲಿ  ಸರ್ವಸದಸ್ಯರು ಸಹಭಾಗಿಯಾಗಿ  ಸಹಕರಿಸಬೇಕೆಂದರು. 

ಇತ್ತೀಚೇಗೆ  ಕರ್ನಾಟಕ   ಸಂಘ  ಡೊಂಬಿವಲಿ ಇವರು  ಅಯೋಜಿಸಿರುವ  ಕ್ರೀಡಾ  ಕೂಟದಲ್ಲಿ  ಬಹುಮಾನ ವನ್ನು  ಪಡೆದ ಕ್ರೀಡಾಳುಗಳನ್ನು  ಗೌರವಿಸಲಾಯಿತು. ಸಹಬಾಗಿ  ಯಾಗಿ ಸಹಕರಿಸಿದ  ಸದಸ್ಯರನ್ನು  ಅಭಿನಂದಿಸಲಾಯಿತು.  

ಫೆ. 11 ರಂದು  ನೆರವೇರಲಿರುವ  ಶ್ರೀ ಶನಿಪೂಜೆಯ  ಆಮಂತ್ರಣ ಪತ್ರಿಕೆಯನ್ನು ಸಂಘದ  ಪದಾದಿಕಾರಿಗಳು ಬಿಡುಗಡೆಗೊಳಿಸಿದರು.

ಮಹಿಳಾ ವಿಭಾಗದ   ಕಾರ್ಯಾದ್ಯಕ್ಷೆ   ಉದಯ ಶೆಟ್ಟಿ, ಇವರು  ಕರ್ನಾಟಕ   ಸಂಘದ ಕ್ರೀಡಾ ಕೂಟದಲ್ಲಿ ಸಹಬಾಗಿಯಾಗಿ  ಸಹಕರಿಸಿದ  ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಪುಲ್ಲ ಶೆಟ್ಟಿ,  ವಿಠ್ಠಲ್ ಅಮೀನ್,  ಗಣರೋಜ್ಯೊತ್ಷವದ  ಬಗ್ಗೆ  ತನ್ನ  ಅನಿಸಿಕೆಯನ್ನು ವ್ಯಕ್ತ ಪಡಿಸಿದರು.

ಸಂಘದ  ಕಛೇರಿಗೆ  ಕಂಪ್ಯೂಟರ್.ಪ್ರಿಂಟರ್ ಆನ್ನು ನೀಡಿದ  ಸಂಘದ ಕೋಶಾಧಿಕಾರಿ   ಸದಾಶಿವ ಸಾಲಿಯಾನ್ ರವರನ್ನು  ಗೌರವಿಸಲಾಯಿತು.

 ಕಾರ್ಯಕ್ರಮದಲ್ಲಿ  ಸಂಘದ ಉಪಾದ್ಯಕ್ಷ  ಅಜೆಕಾರು ಜಯ ಶೆಟ್ಟಿ, ಕೊಶಾಧಿಕಾರಿ ಸದಾಶಿವ ಸಾಲಿಯಾನ್. ಕಾರ್ಯದರ್ಶಿ ದಾಮೋದರ  ಸುವರ್ಣ. ಜೊತೆಕೋಶಾದಿಕಾರಿ  ಕೆ.ಕೆ.ಸಲ್ಯಾನ್, ಜೊತೆಕಾರ್ಯಧರ್ಶಿ  ರವೀ0ದ್ರ ಶೆಟ್ಟಿ, ಕಾರ್ಯಕಾರಿ ಸಮೀತಿಯ  ಸದಸ್ಯರು,  ಮಹಿಳಾ ವಿಭಾಗದ  ಕಾರ್ಯಾದ್ಯಕ್ಷೆ  ಉದಯ ಜೆ. ಶೆಟ್ಟಿ. ಪದಾದಿಕಾರಿಗಳು. ಯುವವಿಭಾಗದ  ಕಾರ್ಯಾದ್ಯಕ್ಷ  ಸಚೀನ್ ಕೋಟ್ಯಾನ್ ಹಾಗೂ  ಪದಾದಿಕಾರಿಗಳು. ಸಂಘದ  ಸದಸ್ಯರು ಉಪಸ್ಥಿತರಿದ್ದರು. ಮಾಜಿ ಕಾರ್ಯಧರ್ಶಿ ವಿಠ್ಠಲ್ ಅಮೀನ್ ಸಭಾಕಾರ್ಯಕ್ರಮದ  ನಿರೂಪಣೆ ಗೈದು ವ0ದಿಸಿದರು. ಲಘು ಉಪಹಾರ ದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.  

Powered by Blogger.