ಶಿರ್ವದ ಬಂಟಕಲ್ ನಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಮೃತ
ಸಂಜೆ ವೇಳೆಗೆ ಮನೆಯಿಂದ ದಿನಸಿ ಸಾಮಾನು ತರುವ ಸಲುವಾಗಿ ಶಂಕರಪುರ ಪೇಟೆಗೆ ಹೋಗಿ ವಾಪಾಸು ಬಂದು ಬಸ್ಸಿನಿಂದ ಇಳಿದು,ಬಂಟಕಲ್ ಮದ್ವವಾದಿರಾಜ್ ಇಂಜಿನಿಯರಿಂಗ್ ಕಾಲೇಜ್ ಬಳಿ ಮನೆ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಂಟಕಲ್ ಕಡೆಯಿಂದ ಕಟಪಾಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಬೈಕ್ ಸವಾರ ಗುರು ಪ್ರಸಾದ್ ಎಂಬಾತ ಯಲ್ಲಮ್ಮ ಅವರಿಗೆ ಡಿಕ್ಕಿ ಹೊಡೆದು ಮೃತಪಟ್ಟ (ಯಲ್ಲಮ್ಮ (49) ಮೃತಪಟ್ಟವರು.ಘಟನೆ ಶಿರ್ವದ ಬಂಟಕಲ್ ಬಸ್ ನಿಲ್ದಾಣದ ಸಮೀಪ ನಡೆದಿದೆ.
ಪರಿಣಾಮ ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯಗೊಂಡ ಯಲ್ಲಮ್ಮ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮೃತರ ಮಗ ಮಂಜಪ್ಪ ಎಂಬವರು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment