ಪ್ರಧಾನಿ ಮೋದಿ ಸರ್ಕಾರದ ವಿರುದ್ಧ 'ಚಾರ್ಜ್ ಶೀಟ್' ಬಿಡುಗಡೆ ಮಾಡಿದ ಕಾಂಗ್ರೆಸ್ ಕಾರ್ಯದರ್ಶಿ
ಚುನಾವಣೆ ಹತ್ತಿರ ಬಂದಂತೆ ಪ್ರತಿವಾದ ನಡೆಯುವುದೋ ಸಾಮಾನ್ಯ ಹಾಗೆ ಕೇಂದ್ರ ಸರ್ಕಾರ ವಿರುದ್ಧ ಆರೋಪ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದರು. ಮೋದಿ ಸರಕಾರದ ಆಡಳಿತ ನೀತಿಗಳನ್ನು ಸಾರುವ ಎರಡು ಪುಟಗಳ ಚಾರ್ಜ್‌ಶೀಟ್ ಅನ್ನು ಕಾಂಗ್ರೆಸ್ ಶನಿವಾರ ದಿಲ್ಲಿಯಲ್ಲಿ ಬಿಡುಗಡೆ ಮಾಡಿದೆ. ಜನವರಿ 26ರ ಬಳಿಕ ದೇಶಾದ್ಯಂತ ಮನೆ ಮನೆಗೂ ಆರೋಪ ಪಟ್ಟಿಯನ್ನು ತಲುಪಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷದ ನೀತಿಗಳ ಕಾರಣದಿಂದಾಗಿ ದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ರಾಷ್ಟ್ರ ಮಟ್ಟದಲ್ಲಿ ನಾವು ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗಳು ಬಿಜೆಪಿ ಅಥವಾ ಇತರೆ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದನ್ನು ಮನೆ ಮನೆಗೆ ತಲುಪಿಸಲಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಆರೋಪ ಪಟ್ಟಿ :-
* ಬಿಜೆಪಿಯೆಂದರೆ ಭ್ರಷ್ಟ ಜುಮ್ಲಾ ಪಾರ್ಟಿ, ಆಯ್ದ ಕೆಲವರೊಂದಿಗೆ ಮಾತ್ರ ಇದೆ. ಎಲ್ಲರಿಗೂ ಮೋಸ ಮಾಡುವ ಮೂಲಕ ತನ್ನ ಸ್ವಂತ ಲಾಭಕ್ಕಾಗಿ ಕೆಲಸಗಳನ್ನು ಮಾಡುತ್ತಿದೆ.
* ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮೋದಿ ಉದ್ಯಮಿಯೊಬ್ಬರ ಖಾಸಗಿ ಜೆಟ್‌ನಲ್ಲಿ ದಿಲ್ಲಿಗೆ ತೆರಳಿದ್ದರು. ಈ ಆಪ್ತ ಸ್ನೇಹಿತನಿಗೆ ದೇಶದ ಬಂದರುಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಮತ್ತು ಕಲ್ಲಿದ್ದಲು ಘಟಕಗಳ ನಿರ್ವಹಣೆಯ 30% ಒಪ್ಪಿಸಲಾಗಿದೆ.
*ಮೋದಿ ಅವರ ಸ್ನೇಹಿತರು ತೆಗೆದುಕೊಂಡ 72,000 ಕೋಟಿ ರೂ. ಸಾಲವನ್ನು ಸರಕಾರ ಮನ್ನಾ ಮಾಡಿದೆ. ಆದರೆ, ಒಬ್ಬ ರೈತನ ಸಾಲ ಮನ್ನಾ ಮಾಡಿಲ್ಲ.
* ಕುಟುಂಬ ರಾಜಕಾರಣದ ಬಗ್ಗೆ ಆರೋಪಿಸುವ ಬಿಜೆಪಿಯೂ ಅದನ್ನೇ ಮಾಡುತ್ತಿದೆ. 20 ಸಚಿವರು, 14 ಸಂಸದರು ಮತ್ತು 31 ಶಾಸಕರು ಸೇರಿದಂತೆ 65 ಫಲಾನುಭವಿಗಳೊಂದಿಗೆ ಭಾಯಿ-ಭತಿಜಾ ಪಕ್ಷವಾಗಿ ಮಾರ್ಪಟ್ಟಿದೆ
* ಗಂಗಾ ನದಿ ಕೋವಿಡ್ -19 ಸಂತ್ರಸ್ತರ ಶವಗಳಿಂದ ತುಂಬಿದ್ದರೆ, ಮೋದಿ ಚುನಾವಣಾ ಜಾಥಾದಲ್ಲಿ ನಿರತರಾಗಿದ್ದರು. ಬಿಜೆಪಿ 300ಕ್ಕೂ ಹೆಚ್ಚು ಶಾಸಕರು, ಸಂಸದರನ್ನು ಖರೀದಿಸಿತ್ತು ಮತ್ತು ಜನರ ಆದೇಶಗಳನ್ನು ರದ್ದುಗೊಳಿಸಲು ಏಳು ರಾಜ್ಯ ಸರಕಾರಗಳನ್ನು ಉರುಳಿಸಿತು.
* ಬಿಜೆಪಿ ಮಂತ್ರ ಸಭ್ ಕಾ ಸಾತ್, ಸಭ್ ಕಾ ವಿಕಾಸ್ ಅಲ್ಲ, ಬದಲಿಗೆ ಕುಚ್ ಕಾ ಸಾಥ್, ಖುದ್ ಕಾ ವಿಕಾಸ್, ಸಬ್ಕೆ ಸಾಥ್ ವಿಶ್ವಾಸ್ ಘಾತ್ ಎಂಬುದು ಬಿಜೆಪಿಯ ಮಂತ್ರ.

Post a Comment