".

Header Ads

ಕಾರ್ಕಳದ ಸಂತ ಮಾರಿ ಖ್ಯಾತಿಯ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ಜಾತ್ರೆ : ಹರಿದು ಬಂದ ಜನಸಾಗರ

 



ಕಾರ್ಕಳದ ಸಂತ ಮಾರಿ ಖ್ಯಾತಿಯ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ಜಾತ್ರೆ ಆರಂಭಗೊಂಡಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಸರಳವಾಗಿ ನಡೆದಿದ್ದ ಜಾತ್ರೆ ಈ ಬಾರಿ ಅದ್ದೂರಿ ಚಾಲನೆ ಸಿಕ್ಕಿದೆ.
 

ಅತ್ತೂರು ಜಾತ್ರೆಗೆ ಜನಸಾಗರವೇ ಹರಿದು ಬಂದಿದ್ದು, ನಾಲ್ಕನೇ ದಿನವೂ ಭಾರೀ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದಾರೆ. ಕಳೆದ  ದಿನಗಳಿಂದ ರಾತ್ರಿ-ಹಗಲೆನ್ನದೆ ಜನತೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.

  ಜನವರಿ 22 ರಿಂದ 26 ರತನಕ ಇಲ್ಲಿ ವಾರ್ಷಿಕ ಉತ್ಸವ ನಡೆಯಲಿದ್ದು ಒಟ್ಟು 35 ಬಲಿಪೂಜೆಗಳು ನಡೆಯಲಿವೆ. ಅತ್ತೂರು ಜಾತ್ರೆ ಆರಂಭಗೊಂಡರೆ ರಾತ್ರಿ ಆಗುವುದಿಲ್ಲ ಎಂಬುದು ಈ ಭಾಗದ ಜನರ ಪ್ರತೀತಿ. ಆ ದಿನಗಳಲ್ಲಿ ಹಗಲು ರಾತ್ರಿಯೆನ್ನದೆ ಜನಸಾಗರವೇ ಜಾತ್ರೆಗೆ ಹರಿದು ಬರುತ್ತದೆ. 
   ವಾರ್ಷಿಕ ಜಾತ್ರೆ ಹಿನ್ನೆಲೆಯಲ್ಲಿ ಸಂತ ಲಾರೆನ್ಸ್‌ ಚರ್ಚ್‌ಗೆ ವಿಶೇಷವಾಗಿ ವಿದ್ಯುತ್‌ ದೀಪ ಅಲಂಕಾರ ಮಾಡಲಾಗಿದೆ. ಇಲ್ಲಿ ಕ್ಯಾಂಡಲ್​ ಹಚ್ಚಿ ಬೇಡಿಕೊಂಡರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಎಲ್ಲ ಧರ್ಮೀಯರಲ್ಲೂ ಇರುವುದು ಗಮನಿಸಬೇಕಾದ ವಿಚಾರ.  ವಿವಿಧ ಬಗೆಯ ತಿಂಡಿ ತಿನುಸುಗಳ ಅಂಗಡಿಗಳು, ಮನೋರಂಜನಾ ಕ್ರೀಡೆಗಳು ಸೇರಿದಂತೆ ಹಲವಾರು ರೀತಿಯ ಇಲ್ಲಿ ಅಂಗಡಿಯನ್ನು ಕಾಣಸಿಗುತ್ತದೆ.




Powered by Blogger.