ಮಹಿಳಾ ಆಯೋಗದ ಮುಖ್ಯಸ್ಥೆ' ಸ್ವಾತಿ ಮಲಿವಾಲ್' ಕಾರಿನಲ್ಲಿ ಎಳೆದೊಯ್ದು ಲೈಂಗಿಕ ಕಿರುಕುಳ
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವ್ರನ್ನ ಕಾರೊಂದು ಎಳೆದೊಯ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಡಿದ ಮತ್ತಿನಲ್ಲಿ ಕಾರು ಚಾಲಕ ಕೂಡ ತನಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಸಧ್ಯ 47 ವರ್ಷದ ವ್ಯಕ್ತಿಯನ್ನ ಬಂಧಿಸಲಾಗಿದೆ.
ರಿಯಾಲಿಟಿ ಚೆಕ್'ಗಾಗಿ ದೆಹಲಿಯ ಬೀದಿಗಳಲ್ಲಿದ್ದಾಗ ಮಲಿವಾಲ್ ಅವ್ರನ್ನ ದೆಹಲಿಯ ಏಮ್ಸ್ ಆಸ್ಪತ್ರೆಯ ಬಳಿ ಎಳೆದೊಯ್ದು ಕಿರುಕುಳ ನೀಡಲಾಯಿತು ಎಂದು ಆರೋಪಿಸಲಾಗಿದೆ.
ಮುಂಜಾನೆ 3.11ರ ಸುಮಾರಿಗೆ ಹರೀಶ್ ಚಂದ್ರ ಬಲೆನೊ ಕಾರಿನಲ್ಲಿ ತನ್ನ ಬಳಿಗೆ ಬಂದು ಒಳಗೆ ಹೋಗಲು ಒತ್ತಾಯಿಸಿದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಅವರು ನಿರಾಕರಿಸಿದಾಗ, ಆ ವ್ಯಕ್ತಿ ಕಾರು ಚಲಾಯಿಸಿದ್ದು, ನಂತರ ಯು-ಟರ್ನ್ ತೆಗೆದುಕೊಂಡು ಕಿರಿದಾದ ಸಮಾನಾಂತರ ಲೇನ್ ತೆಗೆದುಕೊಂಡು ಮರಳಿದರ ಎಂದು ಮಲಿವಾಲ್ ಹೇಳಿದರು.

Post a Comment