6 ತಿಂಗಳ ಹಿಂದೆ ಸಾವನ್ನಪ್ಪಿದ ಪ್ರೇಮಿಗಳು; ಪ್ರತಿಮೆ ಮಾಡಿ ಮದುವೆ ಮಾಡಿದ ಕುಟುಂಬ
ಗುಜರಾತ್‌ನ ತಪಿ ಜಿಲ್ಲೆಯಲ್ಲಿ ಇಬ್ಬರು ಪ್ರೇಮಿಗಳು ಆರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಗಣೇಶ್ ಮತ್ತು ರಂಜನಾ ಎಂಬ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು, ಆದರೆ ಅವರಿಬ್ಬರ ಕುಟುಂಬದವರು ಮದುವೆಗೆ ಒಪ್ಪಿರಲಿಲ್ಲ. ಇದರಿಂದ ನೊಂದು ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಅವರಿಬ್ಬರ ಅಗಲಿಕೆಯ ದುಃಖದಿಂದ ನೊಂದ 2 ಕುಟುಂಬಗಳೂ ಭಿನ್ನಾಭಿಪ್ರಾಯ ಮರೆತು ಅವರಿಬ್ಬರ ಪ್ರತಿಮೆಗಳನ್ನು ಮಾಡಿ ಅವುಗಳಿಗೆ ಮದುವೆ ಮಾಡಿಸಿದ್ದಾರೆ.
Post a Comment