".

Header Ads

ಮಗಳ ಕ್ರಿಕೆಟ್​​​ಗಾಗಿ ಜಮೀನು, ಜಿಮ್​​ ಮಾರಿ ಕೆಲಸವನ್ನೂ ಬಿಟ್ಟ ತಂದೆ; ವಿಶ್ವಕಪ್​​ ಗೆದ್ದು ತನ್ನ ತಂದೆ​​ಗೆ ಗಿಫ್ಟ್​ ಕೊಟ್ಟ ಆಟಗಾರ್ತಿ






ಮೊದಲ ಆವೃತ್ತಿಯ ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಭಾರತದಾದ್ಯಂತ ಟೀಂ ಇಂಡಿಯಾ ಆಟಗಾರರ ಸಾಧನೆಗೆ ಪ್ರಶಂಗೆಗಳ ಸುರಿಮಳೆಯಾಗುತ್ತಿದೆ.
ವಿಶ್ವಕಪ್  ಗೆದ್ದ ತಂಡಕ್ಕೆ ಬಿಸಿಸಿಐ ಭಾರೀ ಬಹುಮಾನವನ್ನು ಘೋಷಣೆ ಮಾಡಿದೆ. ಈ ನಡುವೆ ಟೀಂ ಇಂಡಿಯಾದಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದ ತ್ರಿಷಾ ಹೆಸರು ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ಹೌದು, ಅಂಡರ್ 19 ತಂಡದ ವಿಶ್ವಕಪ್ ನಲ್ಲಿ ಟಾಪ್ ಸ್ಕೋರರ್ ಆಗಿ ಹೊರ ಹೊಮ್ಮಿರುವ ತ್ರಿಷಾ, 17 ವರ್ಷಕ್ಕೆ ತಮ್ಮ ಸಾಮರ್ಥ್ಯವೇನು ಅಂತ ಸಾಬೀತು ಪಡಿಸಿದ್ದಾರೆ.ವಿಶ್ವಕಪ್ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 116 ರನ್ ಗಳಿಸಿ ತ್ರಿಷಾ, ಒಂದು ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದರು. ಅಲ್ಲದೇ ಫೈನಲ್ ಪಂದ್ಯದಲ್ಲಿ ತೀವ್ರ ಒತ್ತಡದ ನಡುವೆಯೂ ಉತ್ತಮ ಪ್ರದರ್ಶನ ಮೂಲಕ ಗಮನ ಸೆಳೆದಿದ್ದರು. ಪಿಚ್ ಅನ್ನು ಉತ್ತಮವಾಗಿ ಆರ್ಥೈಸಿಕೊಂಡು, ತಂಡದ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು.
ವಿಶೇಷ ಎಂದರೆ ವಿಶ್ವಕಪ್ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಇಂಗ್ಲೆಂಡ್ ಕ್ಯಾಪ್ಟನ್ ರನ್ನು ಅತ್ಯುತ್ತಮ ಕ್ಯಾಚ್  ಮೂಲಕ ಫೈನಲ್ ನಲ್ಲಿ ಔಟ್  ಮಾಡುವ ಮೂಲಕ ಪಂದ್ಯಕ್ಕೆ ತಿರುವು ನೀಡಿದ್ದರು ತ್ರಿಷಾ.

 


ಮಗಳ ಕ್ರಿಕೆಟ್ ಮೇಲಿನ ಪ್ರೀತಿ ಕಂಡ ತಂದೆ ರಾಮಿರೆಡ್ಡಿ ಕೂಡ ಆಕೆಯ ಕನಸಿಗೆ ಪ್ರೋತ್ಸಾಹ ನೀಡಿದ್ದರು. ಮಗಳ ಕ್ರಿಕೆಟ್  ವೃತ್ತಿ ಜೀವನಕ್ಕಾಗಿ ಇದ್ದ ಜಮೀನು, ಜಿಮ್  ಸೆಂಟರ್ ಮಾರಾಟ ಮಾಡಿ ಹೈದರಾಬಾದ್ ಗೆ ಶಿಫ್ಟ್ ಆಗಿದ್ದರು. ಅಷ್ಟೇ ಅಲ್ಲದೆ ಮಗಳ ಕ್ರಿಕೆಟ್   ಉತ್ತಮವಾಗಲು ತಮ್ಮ ಕೆಲಸವನ್ನು ಬಿಟ್ಟು ಸಂಪೂರ್ಣ ತಮ್ಮ ಸಮಯವನ್ನು ಮುಡಿಪಾಗಿಟ್ಟಿದ್ದರು. ತಂದೆ ಆಸೆಯಂತೆ ತ್ರಿಷಾ ಕೂಡ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಟೀಂ ಇಂಡಿಯಾ ಕಪ್  ಗೆಲ್ಲುತ್ತಿದ್ದಂತೆ ಮನೆಯಲ್ಲಿ ಕೂತು ಪಂದ್ಯ ವೀಕ್ಷಣೆ ಮಾಡುತ್ತಿದ್ದ ರಾಮಿರೆಡ್ಡಿ ಕೂಡ ಸಖತ್ ಖುಷಿಯಾಗಿದ್ದರು.ಇತ್ತ ಮಾಧ್ಯಮದೊಂದಿಗೆ ಖುಷಿ ಹಂಚಿಕೊಂಡಿರುವ ತ್ರಿಷಾ, ಗೆಲುವಿನ ಕ್ಷಣಗಳು ಖುಷಿಯನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ.
ಗಾಳಿಯಲ್ಲಿ ತೆಲಿದಂತಹ ಅನುಭವ. ಟೂರ್ನಿಯಲ್ಲಿ ನನಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
Powered by Blogger.