".

Header Ads

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮ

ತುಳು ಸಾಂಸ್ಕೃತಿಯನ್ನು ಜೀವಂತವಾಗಿರಿಸುವಲ್ಲಿ ಕ್ರೀಯಾಶೀಲರಾಗೋಣ - ಕರುಣಾಕರ ಎಂ. ಶೆಟ್ಟಿ

ಮುಂಬಯಿ : ತುಳು ಸಂಘ ಬೊರಿವಲಿ ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಜ. 28 ರಂದು ಮಹಿಷ ಮರ್ಧಿನಿ ದೇವಸ್ಥಾನಜಯರಾಜ್ ನಗರಬೊರಿವಲಿ(ಪ)ಇಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತುಳು ಸಂಘ ಬೊರಿವಲಿ ಯ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿ ಯವರು ಇಂದು ನಾವು 12ನೇ ವರ್ಷದ ಕಾರ್ಯಕ್ರಮವನ್ನು ನಡೆಸುತ್ತಿದ್ದು 2020 ರಲ್ಲಿ ಕೊರೋನಾ ದಿಂದಾಗಿ ನಮಗೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗಲಿಲ್ಲ. ಸಂಘದ ಮಹಿಳಾ ವಿಭಾಗ ಮತ್ತು ಸಾಂಸ್ಕೃತಿಕ ಸಮಿತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ನಮ್ಮೆಲ್ಲರನ್ನು ಒಂದೆಡೆ ಸೇರಿಸುದರೊಂದಿಗೆ ನಮ್ಮ ನಾಡಿನ ಸಾಂಸ್ಕೃತಿಯನ್ನು ಇಲ್ಲಿ ಜೀವಂತವಾಗಿರಿಸುವಲ್ಲಿ ಸಹಕರಿಸುತ್ತಿದೆ. ನಮ್ಮ ನಾಡಿನ ಶ್ರೀಮಂತ ಸಾಂಸ್ಕೃತಿಯನ್ನು ಇಲ್ಲಿ ಉಳಿಸಿ ಬೆಳೆಸಲು ಅಧಿಕ ಸಂಖ್ಯೆಯಲ್ಲಿ ನಮ್ಮವರು ಸಂಘದಲ್ಲಿ ಕ್ರೀಯಾಶೀಲಾರಾಗಬೇಕು ಹಾಗೂ ಯುವ ಜನಾಂಗವು ನಮ್ಮೊಂದಿಗೆ ಹೆಚ್ಚಾಗಿ ಸಹಕರಿಸಬೇಕು ಎಂದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯ ಎಲ್ಲರನ್ನು ಸ್ವಾಗತಿಸಿ ಮಹಿಳಾ ವಿಭಾಗದ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಲೀಖಕಿಸಮಾಜ ಸೇವಕಿ ಸುಶೀಲಾ ಅಮೀನ್ ಆಗಮಿಸಿದ್ದು ಹಳದಿ ಕುಂಕುಮದ ಮಹತ್ವ ಹಾಗೂ ತುಳು ಸಂಸ್ಕೃತಿಯ ಬಗ್ಗೆ ಸೂಕ್ತ ಮಾಹಿತಿಯಿತ್ತರು.

ಗೌರವ ಅತಿಥಿಗಳಾಗಿ ಮಹಿಷ ಮರ್ಧಿನಿ ದೇವಸ್ಥಾನದ ಕಾರ್ಯನಿರ್ವಾಹಕ ಟ್ರಷ್ಟಿ ಪ್ರದೀಪ್ ಎಸ್. ಶೆಟ್ಟಿ ದಂಪತಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಹಿರಿಯ ಸಾಹಿತಿ ಸೀಮಂತೂರು ಚಂದ್ರಹಾಸ ಸುವರ್ಣರು ತುಳು ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾ

ಹಳದಿ ಕುಂಕುಮದಂತಹ ಕಾರ್ಯಕ್ರಮಗಳೊಂದಿಗೆ ನಮ್ಮ ನಾಡಿನ ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲವು ಕಾರ್ಯಗಳು ತುಳು ಸಂಘದಿಂದ ನಡೆಯಲಿ ವಿವರಿಸಿದರು.

ಸಂಘದ ಸ್ಥಾಪಕ ಹಾಗೂ ಮಾಜಿ ಅಧ್ಯಕ್ಷರೂ ಆದ ವಾಸು ಪುತ್ರನ್ ಮಾತನಾಡಿ ಸಂಘದ ಬೆಳವಣಿಗೆಗೆಸಂಘಕ್ಕೆ ಕೆಲವು ಉಪಯುಕ್ತವಾದ ಮಾಹಿತಿಯಿತ್ತರು.

ಉಪಸ್ಥಿತರಿದ್ದ ಎಲ್ಲಾ ಮಹಿಳೆಯರು ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಬಾಗವಹಿಸಿದರು. ತುಳು ಸಂಘದ ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣಸದಸ್ಯರ ನೋಂದಣಿ ಸಮಿತಿಯ  ಕಾರ್ಯಾಧ್ಯಕ್ಷೆ ಜಯಂತಿ ಶೆಟ್ಟಿಸಾಂಸ್ಕೃತಿಕ ಸಮಿತಿಯ ಉಪಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿಹಾಗೂ ಸಮಿತಿಯ ಮತ್ತು ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ವೇದ್ ಶೆಟ್ಟಿ ಮತ್ತು ವೇದ್ ಪೂಜಾರಿಯವರ ಪ್ರಾರ್ಥನೆಯೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.

ಅತಿಥಿಗಳನ್ನು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಕುಸುಮಾ ಶೆಟ್ಟಿಯವರು ಪರಿಚಯಿಸಿದರು. ಕಸ್ತೂರಿ ಶೆಟ್ಟಿಯವರು ಕೊನೇಗೆ ಧನ್ಯವಾದವಿತ್ತರು.

Powered by Blogger.