ಸೀನ ಜಿ. ಮೂಲ್ಯ ನಿಧನ
ಬೊರಿವಲಿ ಪೂರ್ವದಲ್ಲಿ ವಾಸವಿದ್ದು ಕುಲಾಲ ಸಂಘದ ಮುಂಬೈಯ ಹಿರಿಯ ಸಕ್ರಿಯ ಸದಸ್ಯ, ಭಜನಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸೀನ ಜಿ ಮೂಲ್ಯ, ಬೊರಿವಲಿ ಅವರು ಅಲ್ಪಕಾಲದ ಅಸೌಖ್ಯದಿಂದ ಜ 16 ರಂದು ನಿಧನರಾದರು.
ಮೃತರು ಮೂಲತಃ ಕೃಷ್ಣಪುರದವರಾಗಿದ್ದು ಮುಂಬೈಯಲ್ಲಿ ಸ್ವಂತ ಉದ್ಯಮವನ್ನು ನಡೆಸುತ್ತಾ ಕುಲಾಲ ಸಮಾಜದ ಸೇವಾ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳುತ್ತಿದ್ದರು.
ಸೀನ ಜಿ. ಮೂಲ್ಯ, ಮೂಲ್ಯರ ಪತ್ನಿ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, ಮತ್ತು ಪದಾಧಿಕಾರಿಗಳು ಚರ್ಚ್ಗೇಟ್ -ದಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಗೋಪಾಲ್ ಬಂಗೇರ್ ಮತ್ತು ಪದಾಧಿಕಾರಿಗಳು, ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಮಾಜಿ ಕಾರ್ಯಾಧ್ಯಕ್ಷ ಎನ್ ಜಿ ಮೂಲ್ಯ ಮತ್ತು. ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲಿಯಾನ್ ದುಃಖ ಸಂತಾಪ ಸೂಚಿಸಿರುವರು.

Post a Comment