ಧೋನಿ, ಕೊಹ್ಲಿ ಪತ್ನಿ, ಪುತ್ರಿಯರಿಗೆ ನಿಂದನೆ : ಎಫ್ಐಆರ್ ದಾಖಲಿಸಲು ಒತ್ತಡ
ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅವರ 7 ವರ್ಷದ ಮಗಳು ಮತ್ತು ಮಾಜಿ ನಾಯಕ ಕೊಹ್ಲಿ ಅವರ ಎರಡು ವರ್ಷದ ಮಗಳನ್ನು ಗುರಿಯಾಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿರುವವರ ವಿರುದ್ಧ ಆಯೋಗವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, 'ಸ್ತ್ರೀ ದ್ವೇಷಿ' ಹೇಳಿಕೆಗಳನ್ನು ನೀಡುವವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ದೆಹಲಿ ಮಹಿಳಾ ಆಯೋಗವು (ಡಿಸಿಡಬ್ಲ್ಯೂ) ನಗರ ಪೊಲೀಸರಿಗೆ ನೋಟಿಸ್ ನೀಡಿದೆ.
''ದೇಶದ ಇಬ್ಬರು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಧೋನಿ ಅವರ ಮಕ್ಕಳ ಚಿತ್ರಗಳನ್ನು ಟ್ವಿಟರ್ನ ಕೆಲವು ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಅಸಭ್ಯವಾಗಿ ಕಾಮೆಂಟ್ ಹಾಕಲಾಗುತ್ತಿದೆ. 7 ವರ್ಷ ಮತ್ತು 2 ವರ್ಷದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಲಾಗುತ್ತಿದೆ. ಎರಡೂ ಮಕ್ಕಳು ಮತ್ತು ಅವರ ತಾಯಿಯಂದಿರ ಕುರಿತಂತೆ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ನಲ್ಲಿ ಹಂಚಿಕೆಯಾಗಿರುವ ಪೋಸ್ಟ್ಗಳು ಅಶ್ಲೀಲ, ಸ್ತ್ರೀದ್ವೇಷಿ ಮತ್ತು ನಿಂದನಾತ್ಮಕವಾಗಿವೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ' ಎಂದು ಆಯೋಗವು ತನ್ನ ನೋಟಿಸ್ನಲ್ಲಿ ತಿಳಿಸಿದೆ.

Post a Comment