ಜನವರಿ 14 ರಂದು ದಿ| ಜಯ ಸಿ. ಸುವರ್ಣರ ಗೋರೆಗಾಂವ್ ಪೂರ್ವನಿವಾಸ ದಲ್ಲಿ ಶ್ರೀ ಶನೀಶ್ವರ ಗ್ರಂಥ ಪಾರಾಯಣ
ಬಿಲ್ಲವ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಭಾರತ್ ಬ್ಯಾಂಕಿನ ಅಭಿವೃದ್ಧಿಯ ರೂವಾರಿ ದಿ| ಜಯ ಸಿ. ಸುವರ್ಣರ ಗೋರೆಗಾಂವ್ ಪೂರ್ವನಿವಾಸದಲ್ಲಿ ಕಳೆದ 35 ವರ್ಷಗಳಿಂದ ಶ್ರೀ ಶನೀಶ್ವರ ಗ್ರಂಥ ಪಾರಾಯಣವನ್ನು ಅವರ ನಿವಾಸ ಕಟ್ಟಡ, ಸಮಂತವಾಡಿ, ದಿವಂಗತ ಜಯ ಸಿ. ಸುವರ್ಣ ರಸ್ತೆ, ಗೋರೆಗಾಂವ್ ಪೂರ್ವ, ಮುಂಬೈ ಇಲ್ಲಿ ಆಯೋಜಿಸಿಕೊಂಡು ಬರುತ್ತಿದ್ದು ಈ ವರ್ಷವೂ ಜ. 14 ಶನಿವಾರ ಮಧ್ಯಾಹ್ನ 2.30 ರಿಂದ ರಾತ್ರಿ 8.30 ರವರೆಗೆ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಆಯೋಜಿಸಲಾಗಿದೆ.
ಪ್ರತಿ ವರ್ಷ ಈ ದಿನದಂದು 2000 ಕ್ಕೂ ಹೆಚ್ಚು ಭಕ್ತರು ಜಯ ಸುವರ್ಣರ ಅಭಿಮಾನಿಗಳು ಬಿಲ್ಲವ ಸಮಾಜದ ಮುಖಂಡರುಗಳು ನೀಲಗಿರಿಗೆ ಆಗಮಿಸುತ್ತಿದ್ದು. ಶನಿ ದೇವರ ಪ್ರಸಾದವನ್ನು ಸ್ವೀಕರಿಸುತ್ತಿದ್ದರು.
ಈ ವರ್ಷ ಕೂಡ ನಡೆಯುವ ಈ ಪುಣ್ಯ ಕಾರ್ಯದಲ್ಲಿ ಶನಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಶನಿದೇವರ ಆಶೀರ್ವಾದ ಮತ್ತು ಪ್ರಸಾದವನ್ನು ಅನ್ನಸಂತರ್ಪಣೆ ಸ್ವೀಕರಿಸಬೇಕಾಗಿ
ಲೀಲಾವತಿ ಜಯ ಸುವರ್ಣ, ಸೂರ್ಯಕಾಂತ್ ಜಯ ಸುವರ್ಣ, ಸುಭಾಷ್ ಜಯ ಸುವರ್ಣ, ದಿನೇಶ್ ಜಯ ಸುವರ್ಣ, ಯೋಗೀಶ್ ಜಯ ಸುವರ್ಣ, ಸೊಸೆ, ಮೊಮ್ಮಕ್ಕಳು ಮತ್ತು ಕುಟುಂಬದ ಸದಸ್ಯರು ವಿನಂತಿಸಿಕೊಂಡಿದ್ದಾರೆ.


Post a Comment