ಹಕ್ಕಿ ಜ್ವರ ಪತ್ತೆ: ಕೋಯಿಕ್ಕೋಡ್ ಜಿಲ್ಲೆಯಲ್ಲಿ1,800 ಕೋಳಿ ಸಾವು
ಕಳೆದ ತಿಂಗಳು ಕೇರಳದ ಕೊಟ್ಟಾಯಂನಲ್ಲಿ ಕಾಣಿಸಿಕೊಂಡಿದ್ದ ಹಕ್ಕಿಜ್ವರ, ಈಗ ಕೋಯಿಕ್ಕೋಡ್ ಜಿಲ್ಲೆಗೂ ವ್ಯಾಪಿಸಿದ್ದು, ಸರ್ಕಾರ ನಡೆಸುತ್ತಿರುವ ಕೋಳಿ ಫಾರಂನಲ್ಲಿ 1,800 ಕೋಳಿಗಳು ಮೃತಪಟ್ಟಿವೆ. ಕೋಯಿಕ್ಕೋಡ್ ಜಿಲ್ಲಾಪಂಚಾಯಿತಿ ನಿರ್ವಹಿಸುತ್ತಿರುವ ಸ್ಥಳೀಯ ಫಾರಂನಲ್ಲಿ ರೂಪಾಂತರಿ ಎಚ್5 ಎನ್1 ಕಾಣಿಸಿಕೊಂಡಿದೆ ಎಂದು ದೃಢಪಟ್ಟಿದೆ.
ಹಕ್ಕಿ ಜ್ವರ ತಡೆಗಟ್ಟುವ ಸಲುವಾಗಿ ಜಿಲ್ಲೆಯ ನಾನಾ ಅಧಿಕಾರಿಗಳೊಂ ದಿಗೆ ಚರ್ಚಿಸಿ ಕ್ರಮ ಕೈಗೊಳ್ಳುಲು ಕೇರಳ ಸರ್ಕಾರ ಮುಂದಾಗಿದೆ.2022ರ ಡಿಸೆಂಬರ್ ಅಂತ್ಯದಲ್ಲಿಕೇರಳದ ಕೊಟ್ಟಾಯಂನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, 6000 ಕೋಳಿಗಳನ್ನು ಕೊಲ್ಲಲಾಗಿತ್ತು. ಈಗ ಮತ್ತೆ ಕೋಯಿಕಕ್ಕೋಡ್ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಕೋಳಿ ಸಾಕಾಣಿಕೆ ಮಾಡುವವರಲ್ಲಿ ಆತಂಕ ಉಂಟುಮಾಡಿದೆ.`ರೋಗ ತಡೆಗೆ ಕೇಂದ್ರದ ಮಾರ್ಗಸೂಚಿಯ ಪ್ರಕಾರ ತುರ್ತು ಕ್ರಮವನ್ನು ಕೈಗೊಳ್ಳಬೇಕೆಂದು ಕೇರಳದ ಪಶುಸಂಗೋಪನೆ ಸಚಿವ ಜೆ ಚಿಂಚು ರಾಣಿ ಅವರು ಸೂಚನೆ ನೀಡಿದ್ದಾರೆ. ಪ್ರಾಥಮಿಕ ಪರೀಕ್ಷೆಯಲ್ಲಿ ಹಕ್ಕಿ ಜ್ವರ ಎಂದು ತಿಳಿದು ಬಂದಿರುವುದರಿಂದ ರೋಗ ಪತ್ತೆ ಹಚ್ಚಲು ಹೆಚ್ಚಿನ ಪರೀಕ್ಷೆಗಾಗಿ ಭೋಪಾಲ್ನ ಪ್ರಯೋಗಾಲಯಕ್ಕೆ ಮಾದರಿಯನ್ನು ಸರ್ಕಾರ ಕಳುಹಿಸಿದೆ.ಫಾರಂನಲ್ಲಿ 5,000ಕ್ಕೂ ಹೆಚ್ಚು ಕೋಳಿಗಳಿದ್ದು, ಸೋಂ ಕಿನಿಂದ 1,800 ಕೋಳಿಗಳು ಮೃತಪಟ್ಟಿವೆ.`
Post a Comment