ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬೈ; ಅಧ್ಯಕ್ಷರಾಗಿ ಕಲ್ಯಾಣಪುರ ಸದಾನಂದ ಆಚಾರ್ಯ ಪುನರಾಯ್ಕೆ
ಮುಂಬೈಯ ಹಿರಿಯ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಮೀರಾರೋಡಿನಲ್ಲಿರುವ ಸಂಘದ ಸಭಾಗೃಹ 'ಪ್ರಿಯಾ' ಶ್ರೀ ವಿಶ್ವಕರ್ಮ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾಗಿ ಕಲ್ಯಾಣಪುರ ಸದಾನಂದ ಆಚಾರ್ಯ ಅವರು ಪುನರಾಯ್ಕೆಯಾದರು.
ಗತ ವರ್ಷದ ಮಹಾಸಭಾದ ವಾರ್ಷಿಕ ವರದಿ ಮತ್ತು ವಾರ್ಷಿಕ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿ ಮಂಜೂರು ಮಾಡಲಾಯಿತು. ಮುಂದಿನ ವರ್ಷಕ್ಕೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಕಲ್ಯಾಣಪುರ ಸದಾನಂದ ಆಚಾರ್ಯ, ಉಪಾಧ್ಯಕ್ಷರಾಗಿ ರವೀಶ್ ಜಿ. ಆಚಾರ್ಯ, ಕಾರ್ಯದರ್ಶಿಗಳಾಗಿ ಪ್ರಸಾದ್ ಆಚಾರ್ಯ ಮತ್ತು ಶರತ್ ಜಿ. ಆಚಾರ್ಯ, ಕೋಶಾಧಿಕಾರಿಯಾಗಿ ಬಾಬುರಾಜ್ ಎಂ. ಆಚಾರ್ಯ, ಜೊತೆ ಕೋಶಾಧಿಕಾರಿಯಾಗಿ ಸುಧೀರ್ ಆಚಾರ್ಯ ಮತ್ತು ಆಂತರಿಕ ಲೆಕ್ಕ ಪರಿಶೋಧಕರನ್ನಾಗಿ ಅರುಣ್ ಪಿ. ಆಚಾರ್ಯ ಇವರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಸದಸ್ಯರಾಗಿ ನಿಟ್ಟೆ ದಾಮೋದರ ಆಚಾರ್ಯ, ಕೆಪಿ ಚಂದ್ರಯ್ಯ ಆಚಾರ್ಯ, ಉಪೇಂದ್ರ ಆಚಾರ್ಯ, ಪ್ರಭಾಕರ ಆಚಾರ್ಯ, ಗಣೇಶ್ ಕುಮಾರ್, ಹರೀಶ್ ಜಿ ಆಚಾರ್ಯ, ರಮೇಶ್ ಎಸ್ ಆಚಾರ್ಯ, ಮಧುಕರ್ ಡಿ ಆಚಾರ್ಯ ಮತ್ತು ಪ್ರದೀಪ್ ಆರ್ ಆಚಾರ್ಯ ಇವರು ಆಯ್ಕೆಯಾದರು.
ಬಳಿಕ ನಡೆದ ಉಪ ಸಮಿತಿಗಳ ರಚನೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾಗಿ ಶುಭ ಎಸ್ ಆಚಾರ್ಯ, ಉಪಕಾರ್ಯಾಧ್ಯಕ್ಷರಾಗಿ ಉಷಾ ಜಿ. ಆಚಾರ್ಯ, ಸಂಚಾಲಕಿಯರಾಗಿ ಸುಜಾತಾ ಜಿ. ಆಚಾರ್ಯ ಮತ್ತು ಅಮಿತಾ ಡಿ. ಆಚಾರ್ಯ ಆಯ್ಕೆಯಾದರು. ಯುವ ವಿಭಾಗಕ್ಕೆ ಕಾರ್ಯಾಧ್ಯಕ್ಷರಾಗಿ ರಾಜೇಶ್ ಎಸ್. ಆಚಾರ್ಯ ಉಪಕಾರ್ಯಾಧ್ಯಕ್ಷರಾಗಿ ರಾಜೇಶ್ ಎ ಆಚಾರ್ಯ ಸಂಚಾಲಕರಾಗಿ ಸಂದೇಶ ಆಚಾರ್ಯ ಆಯ್ಕೆಯಾದರು.
ಡಾ. ಮೋಹನ್ ಅವರ ಕಾರ್ಯಾಧ್ಯಕ್ಷತೆಯಲ್ಲಿ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯನ್ನು ಪುನಾರಚಿಸಲಾಯಿತು.

Post a Comment