
ಮೈಕೈ ನೋ ವು ಮತ್ತು ಜ್ವರ ಎಂದು ಸರ್ಜಾಪುರ ಬಳಿಯ ಸೋಂಪುರ ಗೇಟ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಯುವಕ ಇಂದು ಬೆಳಗ್ಗೆಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಕಾಡ ಅಗ್ರಹಾರ-ಸೋಂ ಪುರ ಗೇಟ್ ಮುಖ್ಯರಸ್ತೆಯ ಕೊಮ್ಮಸಂದ್ರ ನಿವಾಸಿ ದೀಪಕ್(19) ಎಂದು ಗುರುತಿಸಲಾಗಿದೆ. ಓವರ್ ಡೋ ಸ್ನಿಂದಾಗಿ ಯುವಕ ಸಾವನ್ನಪ್ಪಿರುವುದಾಗಿ ಯುವಕನ ಪೋಷಕರು ಆರೋ ಪಿಸಿದ್ದಾರೆ. ಕಳೆದ ಡಿಸೆಂಬರ್ 23ರಂದು ದೀಪಕ್ನನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯಲ್ಲಿ ಚೇತರಿಕೆ ಕಾಣದೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ನಿನ್ನೆಯಷ್ಟೇ ಸ್ನೇಹಿತರೊ ಡನೆ ಮೊಬೈಲ್ನಲ್ಲಿ ಮಾತನಾಡಿದ್ದ ದೀಪಕ್, ಆರೋಗ್ಯ ಸುಧಾರಿಸಿದೆ ಚೆನ್ನಾಗಿದ್ದೇನೆ ಎಂದಿದ್ದ. ಇದೀಗ ದೀಪಕ್ ಇಂದು ಸಾವನ್ನಪ್ಪಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
Post a Comment