".

Header Ads

ಕಾರ್ಕಳ ಕ್ಷೇತ್ರದ ಕಲ್ಯಾ ಗ್ರಾಮ ಪಂಚಾಯತ್ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

 




ಕಲ್ಯಾ ಗ್ರಾ. ಪಂ. ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾನ್ಯ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರು, ಕರ್ನಾಟಕ ಸರ್ಕಾರ ಶ್ರೀ ವಿ. ಸುನಿಲ್‌ ಕುಮಾರ್  ರವರು ಎಲ್ಲರನ್ನೂ ವಂದಿಸುತ್ತ   , ಆಧಾರಿತ ಹಾಗೂ ವಿಕೇಂದ್ರೀಕರಣಕ್ಕೆ ತಕ್ಕಂತೆ ಹೊಸ ಪಂಚಾಯತ್ ಗಳ ರಚನೆ ಅನಿವಾರ್ಯವಾಗುತ್ತದೆ, ಸ್ಥಳಿಯಾಡಳಿತಗಳಲ್ಲಿ ನಿರೀಕ್ಷಿತ ಆದಾಯ, ಸ್ವಂತ ಗಳಿಕೆ ಸಾಧ್ಯತೆ ಕಡಿಮೆಯಾಗಿದ್ದರಿಂದ ಆಗ ಸರಕಾರದ ನೆರವಿಗೆ ಮೊರೆ ಹೋಗಬೇಕಾಗುತ್ತದೆ ಎಂದರು.

ವಜ್ರದೇಹಿ ಶ್ರೀ ರಾಜಶೇಖರಾನಂದ ಶ್ರೀಗಳು ಆಶಿರ್ವಚನ ನೀಡಿ. ಗ್ರಾಮ ಪಂಚಾಯತುಗಳು ಅಭಿವೃದ್ಧಿಯನ್ನು ಜನರಿಗೆ ತಲುಪಿಸುವ ಕೇಂದ್ರವಾಗಿದೆ.

 ನಿರ್ಮಲ ಭಾರತ ಪರಿಕಲ್ಪನೆಯೇ ಸ್ವಚ್ಛತೆ ಭ್ರಷ್ಟಾಚಾರ ರಹಿತವಾದುದು. ಭ್ರಷ್ಟಾಚಾರದಲ್ಲಿ ಎರಡೂ ರೀತಿ ಇದೆ. ಒಂದು ಕೆಲಸ ಆಗಲೇ ಬೇಕು ಎನ್ನುವ ಅನಿವಾರ‌್ಯತೆಗೆ ಬಿದ್ದಾಗ ಹೊಂದಾಣಿಕೆಗೆ ಲಂಚ ಕೊಡವುದು, ಇನ್ನೊಂದು ಅದು ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಆದರೇ ಇವೆರಡು ಆಗಬಾರದು. ಹಣ ಪಡೆಯುವವರಿಗಿಂತ ಕೊಡುವಾತ ಈ ಇದನ್ನು ನಿಲ್ಲಿಸಬೇಕು ಎಂದು ಹಿತವಚನ ನುಡಿದರು.

 
ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಸಂಜೀವ ಶೆಟ್ಟಿ, ಗ್ರಾ.ಪಂ ಉಪಾಧ್ಯಕ್ಷೆ ಸುಪ್ರಿಯಾ , ಗೇರು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಗ್ರಾ.ಪಂ ಸದಸ್ಯ ಹರಿಜೀವನ್ ಶೆಟ್ಟಿ ಪ್ರಸ್ತಾವನೆಗೈದರು, ಸುನಿಲ್ ಕೋಟ್ಯಾನ್ ಸ್ವಾಗತಿಸಿದರು,ಪಿಡಿಒ ರೇವತಿ ವಂದಿಸಿದರು. ಸುಧಾಕರ ಶೆಣೈ ನಿರೂಪಿಸಿದರು. ಸಿಬ್ಬಂದಿಗಳು ,ಗ್ರಾ.ಪಂ. ಸದಸ್ಯರು  ಸಹಕರಿಸಿದರು.












Powered by Blogger.