ನೇಪಾಳ ಸೇನಾ ವಕ್ತಾರ ಕೃಷ್ಣ ಪ್ರಸಾದ್ ಭಂಡಾರಿ, ಭಾನುವಾರದ ವಿಮಾನ ದುರಂತ ಸ್ಥಳದಿಂದ ಜೀವಂತವಾಗಿ ಯಾರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಆ ಮೂಲಕ ವಿಮಾನದಲ್ಲಿದ್ದ ಐವರು ಭಾರತೀಯರು ಸೇರಿದಂತೆ 72 ಮಂದಿಯೂ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಪೊಖಾರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಂದರ್ಭದಲ್ಲಿ ಯೇತಿ ಏರ್ಲೈನ್ಸ್ ವಿಮಾನ ಭಾನುವಾರ ಪತನಗೊಂಡಿತ್ತು. ಅಪಘಾತ ನಡೆಯಲು ಕಾರಣಗಳನ್ನು ಪರಿಶೀಲಿಸಲು ಹಾಗೂ ತನಿಖೆಗಾಗಿ ನೇಪಾಳ ಅಧಿಕಾರಿಗಳ ವಿಶೇಷ ಆಯೋಗ ರಚಿಸಲಾಗಿದೆ ಎಂದು ತಿಳಿದು ಬಂದಿದೆ.
ನೇಪಾಲ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಐವರು ಭಾರತೀಯರ ಪೈಕಿ ನಾಲ್ವರು ಪ್ರವಾಸಕ್ಕೆಂದು ಹೋಗಿದ್ದವರಾಗಿದ್ದರು. ಪೋಖಾರದ ಪ್ರವಾಸಿ ತಾಣದಲ್ಲಿ ಪ್ಯಾರಾಗ್ಲೈಡಿಂಗ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
ಉತ್ತರ ಪ್ರದೇಶದವರಾದ ಅಭಿಷೇಕ್ ಖುಶ್ವಾಹ, ಬಿಶಾಲ್ ಶರ್ಮಾ, ಅನಿಲ್ ಕುಮಾರ್ ರಾಜ್ಭರ್, ಸೋನು ಜೈಸ್ವಾಲ್ ಮತ್ತು ಸಂಜಯ ಜೈಸ್ವಾಲ್ ಮೃತಪಟ್ಟ ಭಾರತೀಯ ಪ್ರಜೆಗಳು ಎಂದು ಗುರುತಿಸಲಾಗಿದೆ. ಇನ್ನು ದುರಂತದಲ್ಲಿ ಮಡಿದ ಭಾರತೀಯ ಪ್ರಜೆಗಳ ಮೃತದೇಹಗಳನ್ನು ಸ್ವದೇಶಕ್ಕೆ ಕಳುಹಿಸಲು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿದು ಬಂದಿದೆ.
join our whatsapp group
ಉಡುಪಿ ನ್ಯೂಸ್ ನಲ್ಲಿ ಜಾಹೀರಾತುಗಾಗಿ ಸಂಪರ್ಕಿಸಿ : ವಾಟ್ಸಪ್ ನಂಬರ್:- 8217755156
Post a Comment