ಟಾಟಾ ಮುಂಬಯಿ ಮ್ಯಾರಥಾನ್ : ತುಳುನಾಡಿಗೆ ಹೆಮ್ಮೆ ತಂದ ನವೀನಾ ಡಿ. ಶೆಟ್ಟಿ
ಮುಂಬಯಿಯಲ್ಲಿ ಇತ್ತೀಚೆಗೆ ನಡೆದ ಟಾಟಾ ಮುಂಬಯಿ ಮ್ಯಾರಥಾನ್ ನಲ್ಲಿ ಸಾವಿರಾರು ಜನರ ನಡುವೆ ತುಳುನಾಡಿನ ಹೆಮ್ಮೆಯ ನವೀನಾ ಡಿ ಶೆಟ್ಟಿಯವರು ನಿಗದಿತ ದೂರವನ್ನು ಕ್ಲಪ್ತ ಸಮಯದಲ್ಲಿ ಕ್ರಮಿಸಿ ಅತ್ಯುತ್ತಮ ಸಾಧನೆ ಮೆರೆದರು.
2023 ರ ಟಾಟಾ ಮ್ಯಾರಥಾನ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪುರುಷ ಹಾಗೂ ಮಹಿಳೆಯರು ಭಾಗವಹಿಸಿದ್ದರು.
ಉದ್ಯಮಿ ದೇವಾ ಶೆಟ್ಟಿ ಯವರ ಪತ್ನಿಯಾಗಿರುವ ನವೀನಾ ಡಿ. ಶೆಟ್ಟಿ ಈಜು ಸ್ಪರ್ಧೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿ 'ಮೀನಿನ ಮರಿ' ಎಂದೇ ಪ್ರಖ್ಯಾತಿ ಗೊಂಡಿರುವ ಕಪಿಲ್ ಡಿ. ಶೆಟ್ಟಿ ಹಾಗೂ ಸಿದ್ದೇಶ್ ಡಿ. ಶೆಟ್ಟಿಯವರ ತಾಯಿಯಾಗಿದ್ದಾರೆ.

.jpeg)
Post a Comment