ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮುಂಬೈ ಘಟಕದ ಚರ್ಚ್ ಗೇಟ್-ಬೊರಿವಲಿ ವಲಯದ ವತಿಯಿಂದ ಭಜನಾ ತರಬೇತಿ ಶಿಬಿರ
ಚಂದ್ರಹಾಸ್ ರೈ ಪುತ್ತೂರು, ಪ್ರಫುಲ್ ಶ್ರೀಯಾನ್, ಶಾಂತರಾಮ್ ಪುತ್ರನ್ ರಿಂದ ತರಬೇತಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮುಂಬೈ ಘಟಕದ ಚರ್ಚ್ಗ್ ಗೇಟ್-ಬೊರಿವಲಿ ವಲಯದ ವತಿಯಿಂದ ಭಜನಾ ತರಬೇತಿ ಶಿಬಿರವು ಜನವರಿ 15 ರಂದು ಅಂಧೇರಿ ಪಶ್ಚಿಮ ವೀರ ದೇಸಾಯಿ ರೋಡ್ ಸಮೀಪದ ಶ್ರೀ ಮದ್ಭಾರತ ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ ಆವರಣದಲ್ಲಿ ಜರಗಿತು.
ಅಂದು ಬೆಳ್ಳಿಗ್ಗೆ ಮೊದಲಿಗೆ ಶ್ರೀ ಮಹಾಲಕ್ಷ್ಮಿ ಬಾಲ ಭಜನಾ ವೃಂದ, ಅಂದೇರೀ, ಇದರ ಮಕ್ಕಳು ಭಜನಾ ಕಾರ್ಯಕ್ರಮ ನೀಡಿದರು. ಬಳಿಕ ತರಬೇತಿ ಶಿಬಿರಕ್ಕೆ ಮುಂಬಯಿ ಘಟಕದ ಅಧ್ಯಕ್ಷ ಧರ್ಮದರ್ಶಿ ದೇವು ಬಿ.ಪೂಜಾರಿ, churchgate-borivali ವಲಯದ ಕಾರ್ಯಧ್ಯಕ್ಷ ಜಗನ್ನಾಥ್ ಪಿ.ಪುತ್ರನ್ , ಮುಖ್ಯ ಅತಿಥಿ ಭಾರತ್ ಬ್ಯಾಂಕ್ ನ ನಿರ್ದೇಶಕ , ನ್ಯಾಯವಾದಿ ಸೋಮನಾಥ್ ಬಿ.ಅಮೀನ್, ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಸುವರ್ಣ ಚಾಲನೆ ನೀಡಿ, ಮಾತನಾಡಿದರು. ಮುಂಬೈ ಘಟಕದ ಉಪಾಧ್ಯಕ್ಷ ನಾಗೇಶ್ ಸುವರ್ಣ ತರಬೇತಿ ಶಿಬಿರದ ಉದ್ದೇಶ ತಿಳಿಸಿದರು.
ಮುಂಬೈ ಘಟಕದ ಗೌರವ ಕಾರ್ಯದರ್ಶಿ ರವೀಂದ್ರ ಶಾಂತಿ, ಶ್ರೀ ಮದ್ಭಾರತ ಮಂಡಳಿಯ ಪದಾಧಿಕಾರಿಗಳು, churchgate-borivali ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಮುಂಬೈ ಘಟಕದ ಕೋಶಾಧಿಕಾರಿ , ಖ್ಯಾತ ಗಾಯಕ ಚಂದ್ರಹಾಸ ರೈ ಪುತ್ತೂರು, ಕೇಂದ್ರ ಸಮಿತಿಯ ಪ್ರತಿನಿಧಿಗಳು, ಭಜನಾ ಗಾಯಕರು ಆಗಿರುವ ಶಾಂತರಾಮ್ ಪುತ್ರನ, ಪ್ರಫುಲ್ ಶ್ರೀಯಾನ್ ಅವರು churchgate ನಿಂದ ಬೋರಿವಲಿ ತನಕದ ಭಜನಾ ಮಂಡಳಿಯ ಸದಸ್ಯರಿಗೆ ಲಯಬದ್ಧವಾಗಿ, ರಾಗ,ತಾಳಕ್ಕೆ ಅನುಗುಣವಾಗಿ ಯಾವ ರೀತಿ ಭಜನೆ ಮಾಡಬೇಕು ಎಂದು ಹಾಡುತ್ತಾ , ವಿವರಿಸಿದರು.
ಮಧ್ಯಾಹ್ನ ಭೋಜನದ ಬಳಿಕ ಮತ್ತೆ ಶಿಬಿರಾರ್ಥಿಗಳಿಗೆ ತರಬೇತಿ ಮುಂದುವರಿಯಿತು. ಕೊನೆಯಲ್ಲಿ ಎಲ್ಲರೂ ಕುಣಿತ ಭಜನೆಯಲ್ಲಿ ಪಾಲ್ಗೊಂಡರು.
ಬಳಿಕ ನಡೆದ ಕಿರು ಸಭಾ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ತಮ್ಮ ಅನಿಸಿಕೆ ತಿಳಿಸಿದರು. ಭಾಗವಹಿಸಿದ ವಿವಿಧ ಮಂಡಳಿಯ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಚಂದ್ರಹಾಸ ರೈ ಅವರನ್ನು ವಲಯದ ವತಿಯಿಂದ ಸನ್ಮಾನಿಸಲಾಯಿತು. ಚಂದ್ರಹಾಸ ರೈ ಕೆಲವು ಉಪಯುಕ್ತ ಸಲಹೇ ನೀಡಿದರು. ವಿಶೇಷ ಅಮಂತ್ರಿತರಾದ ಪುಷ್ಪ ಬಂಗೇರ, ರೇಖಾ ಕರ್ಕೇರ, ಜಯಂತಿ ಬಂಗೇರ ,ತಬಲಾದಲ್ಲಿ ಸಹಕರಿಸಿದ ಸಂಜಯ್ ಜಾಧವ್ ಅವರನ್ನು ಗೌರವಿಸಲಾಯಿತು. ವಲಯದ ಕಾರ್ಯಧ್ಯಕ್ದ ಜಗನ್ನಾಥ್ ಪುತ್ರನ, ಶ್ರೀ ಮದ್ಭಾರತ ಮಂಡಳಿಯ ಪ್ರಧಾನ ಕಾರ್ಯಧರ್ಶಿ ಲೋಕಾನಾಥ್ ಕಾಂಚನ್, ಜತೆ ಕಾರ್ಯಧರ್ಶಿ ಹರಿಶ್ಚಂದ್ರ ಕಾಂಚನ್ ಉಪಸ್ಥಿತರಿದ್ದರು. ವಲಯದ ಜತೆ ಕೋಶಾಧಿಕಾರಿ ಕೇಶವ ಪುತ್ರನ ಕಾರ್ಯಕ್ರಮ ನಿರೂಪಿಸಿದರೆ, ಜತೆ ಕಾರ್ಯಧರ್ಶಿ ಶ್ಯಾಮ ಕೆ.ಪುತ್ರನ ವಂದಿಸಿದರು. ಮುಂಬೈ ಘಟಕದ ಪದಾಧಿಕಾರಿಗಳು, ಶ್ರೀ ಮದ್ಭಾರತ ಮಂಡಳಿಯ ಪದಾಧಿಕಾರಿಗಳು, ವಲಯದ ಕಾರ್ಯಧರ್ಶಿ ದಯವತಿ ಸುವರ್ಣ, ಕೋಶಾಧಿಕಾರಿ ವಿಶ್ವನಾಥ್ ದೇವಂಗ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಜಗನ್ನಾಥ ಕಾಂಚನ್, ಮೋಹನ್ ದಾಸ್ ಮೆಂಡನ್, ದಿವಾಕರ ಪೂಜಾರಿ, ವತ್ಸಲಾ ಪೂಜಾರಿ, ಭಾರತಿ ವಾಗ್ಲೆ, ರೋಹಿಣಿ ಕೋಟ್ಯನ್ ಸಹಕರಿಸಿದರು.
ಚರ್ಚ್ ಗೇಟ್-ಬೋರಿವಲಿ ವಲಯ ಪ್ರಥಮ ಬಾರಿ ಆಯೋಜಿಸಿದ ಭಜನಾ ತರಬೇತಿ ಶಿಬಿರದಲ್ಲಿ ಪಶ್ಚಿಮ ವಲಯದ ಒಟ್ಟು 12 ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು. ಉದ್ಯಮಿಗಳು, ದಾನಿಗಳು, ಧಾರ್ಮಿಕ ಚಿಂತಕರೂ ಆದ ಚಂದ್ರಶೇಖರ್ ಸಾಲ್ಯಾನ್, ಶ್ರೀನಿವಾಸ ಕಾಂಚನ್ ಮತ್ತಿತರ ಗಣ್ಯರು, ಉಪಸ್ಥಿತರಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ - ಮುಂಬಯಿ ಮಹಾನಗರ ಭಜನಾ ಮಂಡಳಿಗಳ ಒಕ್ಕೂಟವಾಗಿದ್ದು, ಮುಂಬೈ ಹಾಗು ಉಪ ನಗರಗಳಲ್ಲಿ ವಿವಿಧ ವಲಯಗಳನ್ನು ರಚಿಸಿ ಭಜನೆಯ ಮೂಲಕ ದಾಸ ಸಾಹಿತ್ಯವನ್ನು ಉಳಿಸಿ ಬೆಳೆಸುವುದರೊಂದಿಗೆ ಭಾರತೀಯ ಸನಾತನ ಸಂಸ್ಕೃತಿಯ ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ, ಈ ನಿಟ್ಟಿನಲ್ಲಿ ಮುಂಬೈಯಲ್ಲಿ ಭಜನಾ ತರಬೇತಿ ಶಿಬಿರವನ್ನು ಅಯೋಜಿಡುತ್ತಿದ್ದು ,ಚರ್ಚ್ ಗೇಟ್ -ಬೋರಿವಲಿ ವಿಭಾಗ ಪ್ರಥಮ ಬಾರಿ ಆಯೋಜಿಸಿದ ಶಿಬಿರ ಘಟಕದ, ವಲಯದ , ಶ್ರೀ ಮಧ್ಬಾರತ ಮಂಡಳಿಯ ಪದಾಧಿಕಾರಿಗಳ, ಸದಸ್ಯರ, ದಾನಿಗಳ ಸಹಕಾರದಿಂದ ಯಶಸ್ವಿಯಾಗಿ ಜರಗಿತು.


.jpeg)

.jpeg)

.jpeg)
Post a Comment