".

Header Ads

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ), ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಮುಂಬಯಿ, "ದ್ವಾದಶ ವಾರ್ಷಿಕೋತ್ಸವ"



ದೇವರನ್ನು ಸ್ಮರಿಸುವ ಭಜನೆ ಎಲ್ಲಿ ನಡೆಯುತ್ತದೆ ಅಲ್ಲಿ ದೇವರು ಇರುತ್ತಾನೆ : ಸದಾನಂದ ಆಚಾರ್ಯ

ತೆನ ವಿನಾ ತೃಣಮಪಿ ನ ಚಲತಿ " ಎಂಬ ಶ್ಲೋಕದ ಅನುಸಾರವಾಗಿ ಈ ಕಲಿಯುಗದಲ್ಲಿ ಭಗವಂತನ ಅನುಗ್ರಹವಿಲ್ಲದೆ ಹುಲ್ಲು ಕಡ್ಡಿ ಅಲುಗಾಡಲೂ ಅಸಾಧ್ಯ ಎನ್ನುವ ಮಾತಿನಂತೆ ನಾವು ಕ್ಷಣ ಕ್ಷಣಕ್ಕೂ ಭಗವಂತನ ಚಿಂತನೆ, ಉಪಾಸನೆ ,ಭಜನೆ,ಜಪ, ತಪ, ಪೂಜೆ, ಪುನಸ್ಕಾರ ಮಾಡುವುದರಿಂದ ಭಗವಂತನನ್ನು ಒಲಿಸಲು ಸಾಧ್ಯ. ಈ ಕಲಿಯುಗದಲ್ಲಿ ಭಗವಂತನು ಭಜನೆಗೆ ಬೇಗನೆ ಒಲಿಯುತ್ತಾನೆ. ಹಾಗೆಯೇ ನಾವು  ಮನಃಪೂರ್ವಕವಾಗಿ ದೇವರಿಗೆ ನೀಡುವ ಸೇವೆ ಅಂದರೆ ಭಜನೆ ಮಾತ್ರ.ಅದಕ್ಕಿಂತ ದೊಡ್ಡ ಹರಕೆ ಬೇರೊಂದಿಲ್ಲ.ಕನಕದಾಸರು, ಪುರಂದರ ದಾಸರಂತ ದಾಸವರೇಣ್ಯರು ಭಜನೆಯಿಂದಲೇ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೆ ಎನ್ನುವ ಈ ನಿಟ್ಟಿನಲ್ಲಿ "ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿ"ಯ ಸದಸ್ಯೆಯರೆಲ್ಲ ಸೇರಿಕೊಂಡು ಕಳೆದ ಹನ್ನೊಂದು ವರುಷದಿಂದ ತಿಂಗಳಿಗೊಮ್ಮೆ ಸದಸ್ಯರ ಮನೆ,ಮನೆಯಲ್ಲಿ ಭಜನಾ ಸೇವೆ ನೀಡಿ ಈ ದ್ವಾದಶ ವರುಷದ ಭಜನಾ ಮಹೋತ್ಸವವನ್ನು "ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ " ಮುಂಬಯಿ ಇಲ್ಲಿಯ "ಪ್ರಿಯ ವಿಶ್ವಕರ್ಮ ಭವನ " ನಿವೇಶನದಲ್ಲಿ ದಿನಾಂಕ 15-1-23 ನೇ ಭಾನುವಾರ ಬಹಳ ವಿಜೃಂಭಣೆಯಿಂದ ನೆರವೇರಿತು.


ವಾರ್ಷಿಕೋತ್ಸವದ ಅಂಗವಾಗಿ ಪ್ರಪ್ರಥಮವಾಗಿ ದೇವರ ಎದುರಿಗೆ ಮುತ್ತೈದೆಯರು ಜ್ಯೋತಿ ಬೆಳಗಿಸಿ  ಕಾರ್ಯಕ್ರಮವು ಸಾಂಗವಾಗಿ ಜರುಗಲಿ ಎಂದು ಪ್ರಾರ್ಥನೆ ಸಲ್ಲಿಸಿ ಶ್ರೀಮತಿ ಭಾರತಿ ಸುರೇಂದ್ರ ಆಚಾರ್ಯ ಹಾಗೂ ಸದಸ್ಯೆಯರ ಪುಟಾಣಿ ಮಕ್ಕಳಿಂದ ಗಣಪತಿ ಸ್ತುತಿ ಮುಖೇನ ಭಜನೆಗೆ ಚಾಲನೆ ಕೊಟ್ಟರು. ವಿಶ್ವಕರ್ಮ, ಕಾಳಿಕಾಂಬ ಸ್ತೋತ್ರ ಪಠಣೆ, ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಮುಂಬಯಿ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗ, ವಿಶ್ವಕರ್ಮ ಮಹಿಳಾ ವಿಭಾಗ ಡೊಂಬಿವಲಿ, ಶ್ರೀ ಕಾಳಿಕಾಂಬ ವಿನಾಯಕ ಮಹಿಳಾ ವಿಭಾಗ ಪನ್ವೆಲ್ ಇವರಿಂದ ಭಜನೆ ತದನಂತರ ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಮುಂಬಯಿ ಇವರಿಂದ ಕುಣಿತ ಭಜನಾ ಸೇವೆ ಜರುಗಿತು.ಮಂಗಳಾರತಿಯ ನಂತರ ಭಕ್ತರೆಲ್ಲರೂ ತೀರ್ಥ ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನದ ಭೋಜನ ಮುಗಿದ ನಂತರ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಅಧ್ಯಕ್ಷರು ಸದಾನಂದ. ಎನ್.ಆಚಾರ್ಯರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮವು ಶ್ರೀಮತಿ ವೀಣಾ ಸುಧೀರ್ ಆಚಾರ್ಯ, ಶ್ರೀಮತಿ ಪ್ರತಿಭಾ ರಾಜೇಶ್ ಆಚಾರ್ಯ ಮತ್ತು ಶ್ರೀಮತಿ ಪೂರ್ಣಿಮಾ ಕುಸುಮಾಕರ್ ಆಚಾರ್ಯ ಇವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮುಖ್ಯ ಅತಿಥಿಯಾಗಿ ಶ್ರೀಮತಿ ಮೀನಾಕ್ಷಿ ಪದ್ಮನಾಭ ಆಚಾರ್ಯ (ಬಿ. ಕಾಮ್. ಎಲ್. ಎಲ್. ಬಿ ),ಗೌರವ ಅತಿಥಿಗಳಾಗಿ ಶ್ರೀಮತಿ ಶುಭ ಸುನಿಲ್ ಆಚಾರ್ಯ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮಹಿಳಾ ವಿಭಾಗ ಮುಂಬಯಿಯ ಕಾರ್ಯಧ್ಯಕ್ಷೆ,ಇನ್ನೋರ್ವ ಗೌರವ ಅತಿಥಿ ಕಾಳಿಕಾಂಬ ವಿನಾಯಕ ಮಹಿಳಾ ವಿಭಾಗ ಪನ್ವೆಲ್ ಇದರ  ಕಾರ್ಯಾದಕ್ಷೆ ಶ್ರೀಮತಿ ಅನ್ನಪೂರ್ಣ ಶ್ರೀಧರ್ ಆಚಾರ್ಯ, ಮಂಡಳಿಯ ಸ್ಥಾಪಕ ಸದಸ್ಯೆಯರಾದ ಶ್ರೀಮತಿ ಶೋಭ ಸನಾತನ ಆಚಾರ್ಯ ಗೊರೆಗಾಂವ್ ಹಾಗೂ ಶ್ರೀಮತಿ ಕುಮರೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾಗತ ಭಾಷಣವನ್ನು ಶ್ರೀಮತಿ ಶೋಭ ಸನಾತನ ಆಚಾರ್ಯ, ಪ್ರಾಸ್ತಾವಿಕ ಭಾಷಣವನ್ನು ಶ್ರೀಮತಿ ಕುಮರೇಶ್ ಆಚಾರ್ಯರು ನಿರೂಪಿಸಿದರು. ಮಂಡಳಿಯ ಹಿರಿಯ ಸದಸ್ಯೆಯರಾದ ಪುಷ್ಪ ಜನಾರ್ದನ ಆಚಾರ್ಯ ಮತ್ತು ಸುಜಾತ ರಮೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಗೌರವ ಅತಿಥಿಗಳು ತಮ್ಮ ಅನಿಸಿಕೆಗಳನ್ನು ತಿಳಿಸಿದರು.


ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ ಸದಸ್ಯೆ ಶ್ರೀಮತಿ ಜ್ಯೋತಿ ದಿನೇಶ್ ಆಚಾರ್ಯ ಇವರು  ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತವಾಗಿ ತಮ್ಮ ಭಾವನೆಯನ್ನು ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ಆಚಾರ್ಯ ದಾನಿಗಳನ್ನು ಸನ್ಮಾನಿಸಿ ಬಳಿಕ ಮಾತನಾಡುತ್ತಾ ಮನೆ ಮಂತ್ರಾಲಯದಂತೆ ಆಗಬೇಕಿದ್ದರೆ ಗ್ರಹಿಣಿ ಇಂದ ಮಾತ್ರ ಸಾಧ್ಯ ಆಕೆ ಸಾಮ ದಾನ ದಿಂದ ಮನೆಯ ಎಲ್ಲಾ ಸೇವೆಗಳನ್ನು ಮಾಡುತ್ತಾ ಸ್ಮರಣೆಯನ್ನು ಮಾಡುವ ನಿಟ್ಟಿನಲ್ಲಿ ಭಜನೆಯನ್ನು ನಡೆಸಿದರೆ , ಭಜನೆ ನಡೆಯುವ ಸ್ಥಳ ದೇವಸ್ಥಾನ ಇದ್ದಂತೆ ಅಲ್ಲಿ ದೇವರಿರುತ್ತಾನೆ,
ಭಜನೆಯ ಪರಿಣಾಮವನ್ನು ಜೈ ವಿಶ್ವಕರ್ಮ ಭಜನಾ ತಂಡ ಸಮರ್ಥವಾಗಿ ನಿರ್ವಹಿಸುತ್ತಿದೆ ವಿಶ್ವಕರ್ಮ ಸಮಾಜದ ಮಹಿಳೆಯರಿಗೆ ದರ್ಶಕರಾಗಿದ್ದಾರೆ ಎಂದು ನುಡಿದರು



ಕೊನೆಯಲ್ಲಿ ಶೋಭ ಸನಾತನ ಆಚಾರ್ಯರು ಧನ್ಯವಾದಗೈದರು.


ಸಭಾಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಮೊದಲಿಗೆ ಶಿವಾನಿ ಹರೀಶ್ಚಂದ್ರ ಆಚಾರ್ಯ ಮತ್ತು ರೋಶನಿ ರಾಜೇಶ್ ಆಚಾರ್ಯರವರಿಂದ ಗಣಪತಿ ಸ್ತುತಿ ನೃತ್ಯ, ಪುಟಾಣಿಗಳಿಂದ ಯಕ್ಷಗಾನ ನೃತ್ಯರೂಪಕ ಹಾಗೂ ಮಂಡಳಿಯ ಸದಸ್ಯೆಯರಿಂದ ನೃತ್ಯ ನೆರವೇರಿತು. ಕೊನೆಯದಾಗಿ ಮುತ್ತೈದೆಯರ ಮಾಂಗಲ್ಯ ಪ್ರತೀಕವಾದ ಅರಸಿನ ಕುಂಕುಮ ಕಾರ್ಯಕ್ರಮ ಜರುಗಿತು.ಅರಸಿನ ಕುಂಕುಮದ ಮಹತ್ವವನ್ನು ಶ್ರೀಮತಿ ಸುಜಾತ ಗೋಪಾಲ ಆಚಾರ್ಯರು ತಿಳಿಸಿದರು.ಸಭಾಕಾರ್ಯಕ್ರಮದ ನಿರೂಪಣೆಯನ್ನು ವೀಣಾ ಸುಧೀರ್ ಆಚಾರ್ಯರು ನಿರೂಪಿಸಿದರು. ಅಂದಿನ ಅನ್ನಸಂತರ್ಪಣೆಯ ಜವಾಬ್ದಾರಿಯನ್ನು  ಕುಮರೇಶ್ ಆಚಾರ್ಯ ಮಲಾಡ್ ಇವರು ವಹಿಸಿಕೊಂಡಿದ್ದರು.ಕರ್ನಾಟಕ ವಿಶ್ವಕರ್ಮ ಅಸೋಶಿಯೆಶನ್ ಮುಂಬಯಿ ಇದರ ಬೆಂಬಲದಿಂದ ಜೈ ಶ್ರೀ ವಿಶ್ವಕರ್ಮ ಮಂಡಳಿಯ ಸದಸ್ಯೆಯರಾದಂತಹ 
 ಪ್ರಮೀಳಾ ಹರೀಶ್  ಆಚಾರ್ಯ ಗೊರೆಗಾಂವ್ ,ಮಲ್ಲಿಕ ಬಾಬು  ಆಚಾರ್ಯ  ಮಲಾಡ್, ಮಾಲತಿ  ಜನಾರ್ದನ  ಆಚಾರ್ಯ  ಕಾಂದಿವಲಿ,ರತ್ನ  ದಾಮೋದರ  ಆಚಾರ್ಯ  ಡೊಂಬಿವಲಿ,ಮಮತ  ಹರಿಶ್ಚಂದ್ರ  ಆಚಾರ್ಯ  ಬೊರಿವಲಿ , ಪುಷ್ಪ  ರಾಘವ  ಆಚಾರ್ಯ  ಮಲಾಡ್, ಪ್ರೇಮ ಶ್ರೀನಿವಾಸ  ಆಚಾರ್ಯ ಗೊರೆಗಾಂವ್ , ಭಾನುಮತಿ  ಮಾಧವ  ಆಚಾರ್ಯ  ಮಲಾಡ್, ಸುನೀತ  ಕೃಷ್ಣ  ಆಚಾರ್ಯ  ಬೊರಿವಲಿ , ಜಯಲಕ್ಷ್ಮಿ ಈಶ್ವರ  ಆಚಾರ್ಯ  ಮಲಾಡ್, ಶಕುಂತಲ ಸತೀಶ್  ಆಚಾರ್ಯ , ವಿದ್ಯಾ ದಿನೇಶ್ ಆಚಾರ್ಯ ಗೊರೆಗಾಂವ್, ಶಶಿಕಲ ಜನಾರ್ದನ  ಆಚಾರ್ಯ ನಾಲಸೋಪಾರ,ಯೋಗಿನಿ ರಾಘವ  ಆಚಾರ್ಯ  ಕಾಂದಿವಲಿ , ಜಯಮಾಲ  ಭೋಜ  ಆಚಾರ್ಯ ಗೊರೆಗಾಂವ್,  ಶ್ರೀದೇವಿ ದಿನೇಶ್  ಆಚಾರ್ಯ  ಮಲಾಡ್, ಪ್ರೇಮ ಮೋಹನ  ಆಚಾರ್ಯ  ಮಲಾಡ್, ಉಷಾ  ಶಂಕರ  ಆಚಾರ್ಯ  ಬೊರಿವಲಿ , ಇಂದಿರಾ ರಾಮಚಂದ್ರ  ಆಚಾರ್ಯ  ವಿರಾರ್ , ಪೂಜಾ  ಅಶ್ವಿನ್ ಆಚಾರ್ಯ  ಬೊರಿವಲಿ ಇವರೆಲ್ಲರ ಸಹಕಾರದಿಂದ ಕಾರ್ಯಕ್ರಮವು ಸಾಂಗವಾಗಿ  ವಿಜೃಂಭಣೆಯಿಂದ ನೆರವೇರಿತು.
Powered by Blogger.