ಡಬಲ್ ಇಂಜಿನ್ ಸರ್ಕಾರವೆಂದರೆ ಡಬಲ್ ಕಲ್ಯಾಣ: ಪ್ರಧಾನಿ ಮೋದಿ
ಡಬಲ್ ಇಂಜಿನ್ ಸರ್ಕಾರದಿಂದಲೇ ಡಬಲ್ ಲಾಭ. ಡಬಲ್ ಇಂಜಿನ್ ಸರ್ಕಾರದಿಂದಲೇ ಅಭಿವೃದ್ಧಿ ಸಾಧ್ಯ. ಡಬಲ್ ಇಂಜಿನ್ ಸರ್ಕಾರದ್ದೇ ಅಮೃತ ಕಾಲ ಹೀಗೆ ಡಬಲ್ ಇಂಜಿನ್, ಡಬಲ್ ಇಂಜಿನ್ ಅಂತಾ ಪ್ರಧಾನಿ ಮೋದಿ ಒತ್ತಿ ಒತ್ತಿ ಹೇಳಿದ್ದಾರೆ.
"ನಮ್ಮ ಸರ್ಕಾರದ ಆದ್ಯತೆ ಮತ ಬ್ಯಾಂಕ್ ಅಲ್ಲ, ನಮ್ಮ ಆದ್ಯತೆ ಅಭಿವೃದ್ಧಿ. ಡಬಲ್ ಇಂಜಿನ್ ಸರ್ಕಾರವೆಂದರೆ ಡಬಲ್ ಕಲ್ಯಾಣ. ಇದರಿಂದ ಕರ್ನಾಟಕಕ್ಕೆ ಹೇಗೆ ಲಾಭವಾಗುತ್ತಿದೆ ಎಂಬುದನ್ನು ನೋಡಬಹುದು" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. "ಹೊಲಗಳಲ್ಲಿ ಉತ್ತಮ ಬೆಳೆಗಳು ಮತ್ತು ಕೈಗಾರಿಕೆಗಳು ವಿಸ್ತರಿಸಿದಾಗ ಭಾರತವನ್ನು ಅಭಿವೃದ್ಧಿಪಡಿಸಬಹುದು" ಎಂದು ಪ್ರಧಾನಿ ಹೇಳಿದರು.ಯಾದಗಿರಿಯಲ್ಲಿ ನಾರಾಯಣಪುರ ಬಸವ ಸಾಗರ ಜಲಾಶಯದ ಗೇಟುಗಳ ಸ್ಕಾಡಾ ಉದ್ಭಾಟಿಸಿ ಅವರು ಪ್ರಧಾನಿ ಮೋದಿ ಮಾತನಾಡಿದ್ರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಕರ್ನಾಟಕದ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ವಂದನೆಗಳು ಅಂದ್ರು. ಹೆಲಿಪ್ಯಾಡ್, ಪೆಂಡಾಲ್ ಬಳಿ ನಾನು ದೃಷ್ಟಿ ಹಾಯಿಸಿದ್ದಷ್ಟೂ ಜನರೇ ಕಾಣುತ್ತಿದ್ದಾರೆ. ಪೆಂಡಾಲ್‌ನ ಹೊರಗೂ ಸಾವಿರಾರು ಜನ ಸೇರಿದ್ದೀರಿ. ನಿಮ್ಮ ಆಶೀರ್ವಾದವೇ ನಮಗೆ ಬಹಳ ದೊಡ್ಡ ತಾಕತ್ತು ಎಂದರು. ಮುಂದಿನ 25 ವರ್ಷಗಳು ಪ್ರತಿಯೊಬ್ಬ ನಾಗರಿಕ ಮತ್ತು ರಾಜ್ಯಕ್ಕೆ 'ಅಮೃತ ಕಾಲ'ವಾಗಲಿದೆ. 21ನೇ ಶತಮಾನದ ಭಾರತದ ಅಭಿವೃದ್ಧಿಗೆ ಜಲ ಭದ್ರತೆ ಅಗತ್ಯ ಈ ಅವಧಿಯಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಬೇಕಾಗಿದೆ ಯಾದಗಿರಿ ಮತ್ತು ಉತ್ತರ ಕರ್ನಾಟಕದ ಸುತ್ತಮುತ್ತಲಿನ ಪ್ರದೇಶಗಳನ್ನು ಹಿಂದುಳಿದ ಪ್ರದೇಶಗಳೆಂದು ಘೋಷಿಸುವ ಹಿಂದಿನ ಸರ್ಕಾರಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿವೆ ಎಂದು ಕಾಂಗ್ರೆಸ್ ಅನ್ನು ಹೆಸರಿಸದೆ ಮೋದಿ ಹೇಳಿದರು.

Post a Comment