".

Header Ads

ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿದ ವಿರುದ್ಧ ಪಕ್ಷದ ಸಿದ್ದರಾಮಯ್ಯ

 


 
ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಕಲಬುರಗಿ ಹಾಗೂ ಯಾದಗಿರಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಆಗಮಿಸಿದ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ 12 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಪಿಎಸ್‌ಐ ಹಗರಣ ಸೇರಿದಂತೆ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿಗೆ ʻನ್ಯಾಯ ಬೇಕು ಮೋದಿʼ ಎಂದು ಪೋಸ್ಟರ್‌ಗಳನ್ನು ಪ್ರಕಟ ಮಾಡಿದ್ದಾರೆ.

‘ನ್ಯಾಯಬೇಕು ಮೋದಿ’ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಗುತ್ತಿಗೆದಾರ ಸಂತೋಷ್​ ಪಾಟೀಲ್ ಬದುಕಿದ್ದಾಗಲಂತೂ ನ್ಯಾಯ ಸಿಗ್ಲಿಲ್ಲ. ಸತ್ತ ಮೇಲಾದರೂ ನ್ಯಾಯ ಸಿಗುವುದು ಬೇಡವೇ ಮೋದಿಯವರೇ? ಮೆಟ್ರೋ ಪಿಲ್ಲರ್​ನ ಚೌಕಟ್ಟು ಬಿದ್ದು ತಾಯಿ, ಮಗು ಮೃತಪಟ್ಟಿದ್ದಾರೆ. ಚೀಫ್ ಇಂಜಿನಿಯರ್ ಮೇಲೆ ಕ್ರಮ ಯಾವಾಗ ಮೋದಿಯವರೇ? ಕಮಿಷನ್​ ನೀಡಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರ ಪ್ರಸಾದ್ ಮೃತಪಟ್ಟ. ಈ ಸಾವಿನ ಸರಣಿ ಕೊನೆಗಾಣಿಸುವವರು ಯಾರು ಮೋದಿಯವರೇ? ನಮ್ಮ ರೈತನ ನಂದಿನಿ ಮೇಲೆ ಗುಜರಾತ್​ನ ಅಮುಲ್​ ಕಣ್ಣು ಬಿದ್ದಿದೆ. ರೈತರ ಅನ್ನದ ತಟ್ಟೆಗೆ ಮಣ್ಣು ಹಾಕುವ ಬುದ್ಧಿ ಬಿಡುವುದು ಯಾವಾಗ? ಶರಾವತಿ ಸಂತ್ರಸ್ತ ಕುಟುಂಬಗಳ ಸಮಸ್ಯೆಗೆ ಸಂದಿಸಿ ಪ್ರಧಾನಿಗಳೇ? ಎಂದು ಟ್ವೀಟ್​ ಮೂಲಕ ಮೋದಿಗೆ ಸಿದ್ದರಾಮಯ್ಯ ಹಲವು ಪ್ರಶ್ನೆ ಕೇಳಿದ್ದಾರೆ.


Powered by Blogger.