".

Header Ads

ಬಲು ಶ್ರೇಷ್ಠ ತಂಗಳನ್ನ .ತಿನ್ನುವುದರಿಂದ ಆಗುವ ಲಾಭವೇನು ಗೊತ್ತಾ.?


ಸುಮಾರು ವರ್ಷಗಳ ಹಿಂದೇ, ಅಮ್ಮಾ ತಾಯೀ.. ಕವಳ ಇದ್ರೇ ಕೊಡ್ರವ್ವಾ.. ಎಂದು ಮನೆ ಮನೆಗಳ ಮುಂದೆ ಪಾತ್ರೆಗಳನ್ನು ಹಿಡಿದುಕೊಂಡು ಬಂದು ಕೂಗಿ ಭಿಕ್ಷೇ ಬೇಡುತ್ತಿದ್ದದ್ದನ್ನು ನೋಡಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಆಹಾರದ ಹಾಹಾಕಾರವು ಕಡಿಮೆಯಾಗಿ ಅಂದಿನಂತೆ ಯಾರೂ ಸಹಾ ತಂಗಳನ್ನವನ್ನು ತಿನ್ನಲು ಬಯಸದ ಕಾರಣ ಅವುಗಳನ್ನು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಹತ್ತುರೂಪಾಯಿ ಕೊಟ್ಟು ಬಿಡಿ ಹೋಟೆಲ್ನಲ್ಲಿ ಬಿಸಿ ಬಿಸಿ ಆಹಾರವನ್ನೇ ಸೇವಿಸುತ್ತೇವೆ ಎನ್ನುವವರೇ ಹೆಚ್ಚು.

 ತಂಗಳನ್ನದ ಸೇವನೆಯಿಂದ ದೇಹವು ತಂಪಾಗುತ್ತದೆ ಹಾಗಾಗಿಯೇ ರೈತರು, ಬಿಸಿಲಿನಲ್ಲಿ ದುಡಿಯುವ ಕಾರ್ಮಿಕರು ತಂಗಳನ್ನವನ್ನೇ ಬುತ್ತಿಯಲ್ಲಿ ಕಟ್ಟಿ ಉಣ್ಣುತ್ತಾರೆ.

ಮೊದಲು ಸೂಕ್ಷ್ಮಾಣುಜೀವಿಗಳನ್ನು ನಾಶಪಡಿಸಲು ಆಹಾರವನ್ನು ಕುದಿಸಿ ಬೇಯಿಸುವುದು ಮುಖ್ಯವಾಗಿತ್ತು. ಆದರೆ ನಮ್ಮ ಆರೋಗ್ಯಕ್ಕೆ ಕೆಲವೊಂದು ಸೂಕ್ಷ್ಮಾಣುಗಳು ಮುಖ್ಯವಾಗಿರುವುದರಿಂದ ತಂಗಳನ್ನವು ಅತ್ಯುತ್ತಮವಾಗಿದೆ. ತಂಗಳನ್ನದಲ್ಲಿ ಸೂಕ್ಷ್ಮಜೀವಿಗಳು, ಯೀಸ್ಟ್ ಹಾಗೂ ಪೋಷಕಾಂಶಗಳ ಆಗರವಾಗಿದ್ದು ನಮ್ಮ ದೈನಂದಿನ ಆರೋಗ್ಯಕ್ಕೆ ಪ್ರಮುಖವಾಗಿವೆ.

ತಂಗಳನ್ನದ ಪರಿಕಲ್ಪನೆ ಇಂದು ನಿನ್ನೆಯದಲ್ಲ. ನಮ್ಮ ಪೂರ್ವಜರ ಕಾಲದಿಂದ ತಂಗಳನ್ನದ ಸೇವನೆ ಹಾಗೂ ಅನುಷ್ಠಾನ ನಿತ್ಯದ ಬಳಕೆಯಲ್ಲಿದೆ. ಅಕ್ಕಿ ಬೆಳೆಯುವ ಪ್ರತಿ ಮನೆಯಲ್ಲಿ ತಂಗಳನ್ನದ ಬಳಕೆಯನ್ನು ಮಾಡುತ್ತಿದ್ದರು.

ಭಾರತೀಯರ ಈ ರೀತಿಯ ಆಹಾರ ಪದ್ದತಿಯ ಕುರಿತಾಗಿ ಸಂಶೋಧನೆ ನಡೆಸಿರುವ ಇಂಗ್ಲೆಂಡ್‌ನ ಕ್ವೀನ್ಸ್ ವಿಶ್ವವಿದ್ಯಾಲಯದ ಬೆಲ್‌ಫಾಸ್ಟ್‌ನ ಸಂಶೋಧಕರ ಪ್ರಕಾರ, ರೈತರು ತಮ್ಮ ಬೆಳೆಗಳಿಗೆ ರಾಸಾಯಿನಿಕ ಕೀಟನಾಶಕಗಳನ್ನು ಉಪಯೋಗಿಸುವ ಕಾರಣ, ಮಣ್ಣು ಸಹಾ ತನ್ನ ಸತ್ವವನ್ನು ಕಳೆದುಕೊಂಡು ಅದರಲ್ಲಿರುವ ಆರ್ಸೆನಿಕ್ ಅಕ್ಕಿಯನ್ನು ಕಲುಷಿತಗೊಳಿಸುತ್ತದೆ, ಇದರಿಂದಾಗಿ ಆ ರೀತಿಯ ಅನ್ನವನ್ನು ಸೇವಿಸುವುದರಿಮ್ದ ಹೆಚ್ಚಿನವರ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಅದೇ ಅನ್ನವನ್ನು ರಾತ್ರಿಯಿಡೀ ನೆನೆಸಿಡುವ ಮೂಲಕ ಜೀವಾಣು ಮಟ್ಟವನ್ನು ಶೇಕಡಾ 80 ರಷ್ಟು ಕಡಿಮೆ ಮಾಡಬಹುದಾಗಿದೆ ಎನ್ನುತ್ತಾರೆ. ಹಾಗೆಯೇ ಈ ರೀತಿ ಅನ್ನವನ್ನು ನೆನಸಿಡುವುದರಿಂದ ಆ ಅನ್ನದಲ್ಲಿ ಪೊಟ್ಯಾಸಿಯಂ ಮತ್ತು ಕ್ಯಾಲ್ಸಿಯಂ ನಂತಹ ಪೋಷಕಾಂಶಗಳು ಸೇರಿಕೊಂಡು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ ಎಂದೂ ಸಹಾ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವು ಅಕ್ಕಿಯಲ್ಲಿನ ಪೌಷ್ಟಿಕಾಂಶ-ವಿರೋಧಿ ಅಂಶಗಳನ್ನು ಒಡೆಯುತ್ತದೆ, ಇದರ ಪರಿಣಾಮವಾಗಿ ಸೂಕ್ಷ್ಮ ಪೋಷಕಾಂಶಗಳು ಮತ್ತು ಖನಿಜಗಳಾದ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನ ಜೈವಿಕ ಲಭ್ಯತೆಯು ದೇಹಕ್ಕೆ ಒದಗಿ ಆರೋಗ್ಯ ಸುಧಾರಿಸುತ್ತದೆ. ಇದನ್ನೇ ಅಂಕಿ ಅಂಶಗಳ ಪ್ರಕಾರ ಹೇಳಬೇಕೆಂದರೆ, 100 ಗ್ರಾಂ ಅನ್ನವನ್ನು ರಾತ್ರಿ ಇಡೀ ಸುಮಾರು 12 ಗಂಟೆಗಳ ನೆನೆಸಿಟ್ಟರೆ, ಸಾಧಾರಣ ಅನ್ನದಲ್ಲಿ ಇರಬಹುದಾದ ಕಬ್ಬಿಣದ ಅಂಶದ ಲಭ್ಯತೆಯು 3.4 ಮಿಗ್ರಾಂನಿಂದ 73.91 ಮಿಗ್ರಾಂಗೆ ಅಂದರೆ ಸುಮಾರು 2073% ಹೆಚ್ಚಳವಾಗಿರುವುದನ್ನು ಸಂಶೋಧನೆಯಲ್ಲಿ ಕಂಡು ಕೊಳ್ಳಲಾಗಿದೆ.
ದೇಶದ ಕೆಲವೊಂದು ಭಾಗಗಳಲ್ಲಿ ಕೆಲವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ತಂಗಳನ್ನವನ್ನು ಮೆನುವಿನಲ್ಲಿ ಸೇರಿಸಿದ್ದಾರೆ ಮತ್ತು ಈ ಅನ್ನವನ್ನು ಸೇವಿಸುವ ಜನರು ಅಪಾರ ಸಂಖ್ಯೆಯಲ್ಲಿದ್ದಾರೆ. ಮಧ್ಯಾಹ್ನದೂಟಕ್ಕೆ ಕೂಡ ತಂಗಳನ್ನದ ಬುತ್ತಿ, ಉಪ್ಪಿನಕಾಯಿ ಈಗಲೂ ಮೆಚ್ಚಿನ ಆಹಾರ ಎಂಬುದು ಕೊಟ್ಟಾಯಮ್‌ನ ರೇಗಿಯ ಮಾತಾಗಿದೆ.

 ರೀತಿಯಾಗಿ ಪ್ರತಿದಿನವೂ ನಿಯಮಿತವಾಗಿ ಒಂದು ಬಟ್ಟಲು ತಂಗಳನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ಈ ರೀತಿಯಾಗಿವೆ

    ಇದು ದೇಹಕ್ಕೆ ಶಕ್ತಿಯನ್ನು ಕೊಡುವುದಲ್ಲದೇ ಸದಾ ಕಾಲವೂ ತಾಜಾತನದಿಂದ ಇರಿಸಲು ಸಹಾಯ ಮಾಡುತ್ತದೆ
    ಈ ರೀತಿಯಾದ ತಂಗಳನ್ನ ಅಪರೂಪದ ಬಿ 6 ಬಿ 12 ಜೀವಸತ್ವಗಳನ್ನು ಹೊಂದಿದೆ.
    ಮಲಬದ್ಧತೆಯಿಂದ ನರಳುತ್ತಿರುವವರಿಗೆ ಈ ಅನ್ನದಲ್ಲಿರುವ ಅಧಿಕ ನಾರಿನಂಶವು ರಾಮಬಾಣವಾಗಿ ಮಲಬದ್ಧತೆಯನ್ನು ನಿವಾರಿಸುತ್ತದೆ.
    ಅಲ್ಸರ್ ನಿಂದ ಬಳಲುತ್ತಿರುವವರು, ವಾರದಲ್ಲಿ ಮೂರು ದಿನ ಬೆಳಿಗ್ಗೆ ತಂಗಳನ್ನ ತಿನ್ನುವುದರಿಂದ ಅಲ್ಸರ್ ರೋಗವು ಬಹುಬೇಗ ಕಡಿಮೆಯಾಗುತ್ತದೆ.
    ಈ ರೀತಿಯಾದ ತಂಗಳನ್ನ ಜೀರ್ಣಕ್ರಿಯೆಗೆ ಸಹಾಯ ಮಾಡುವ ಟ್ರಿಲಿಯನ್ಗಟ್ಟಲೆ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸುವುದರಿಂದ ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
    ವಯಸ್ಸಾದವರಲ್ಲಿ ಕಾಣ ಸಿಗುವ ಮೂಳೆ ಸಂಬಂಧಿತ ಕಾಯಿಲೆಗಳು ಮತ್ತು ಸ್ನಾಯು ನೋವುಗಳನ್ನು ಇದು ನಿವಾರಿಸುತ್ತದೆ.
    ಪಾಲೀಷ್ ಮಾಡದ ಬ್ರೌನ್ ರೈಸ್ ಅನ್ನದಲ್ಲಿ ಹೆಚ್ಚಿನ ಪೋಷಕಾಂಶಗಳು ಹಾಗೇ ಉಳಿದಿರುವ ಕಾರಣ ಕೆಂಪಕ್ಕಿಯ ತಂಗಳನ್ನ ಹೆಚ್ಚಿನ ಪ್ರಯೋಜನಕಾರಿಯಾಗಿದೆ.
    ಅಧಿಕ ರಕ್ತದೊತ್ತಡವೂ ಸಹಾ ಕಡಿಮೆಯಾಗುತ್ತದೆ.
    ಇದು ಅಲರ್ಜಿ ಸಂಬಂಧಿತ ಸಮಸ್ಯೆಗಳನ್ನು ಮತ್ತು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ.
    ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ಹೆಚ್ಚಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
    ಪ್ರತಿದಿನ ಬೆಳಿಗ್ಗೆ ತಂಗಳನ್ನ ತಿನ್ನುವುದರಿಂದ ನೀವು ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸದಿಂದ ತಪ್ಪಿಸಿಕೊಳ್ಳಬಹುದು.

ತಂಗಳನ್ನು ತಿನ್ನುವುದು ಬಡತನದ ಪ್ರತೀಕ ಎಂದೇ ಭಾವಿಸಿದ್ದವರಿಗೆ ನಮ್ಮ ಪೂರ್ವಜರು ಎಂದೋ ಕಂಡು ಹಿಡಿದುಕೊಂಡಿದ್ದ ಅಪೂರ್ವವಾದ ಸತ್ಯ ಈಗ ಸಂಶೋಧನೆಯ ಮೂಲಕ ಮತ್ತೊಮ್ಮೆ ಬೆಳಕಿಗೆ ಬಂದಿದೆ.

 

                                🖊ಉಡುಪಿ ನ್ಯೂಸ್

Powered by Blogger.