ಅಂಧೇರಿಯ ಬೆಂಗ್ರೆ ಜಿ ಪಿ ಸುವರ್ಣ ಪ್ರಾಥಮಿಕ ಶಾಲೆ ಮತ್ತು ಸ್ವಾಮಿ ಮುಕ್ತಾನಂದ ಪ್ರಾಢಶಾಲೆಯ ವಾರ್ಷಿಕ ಕ್ರೀಡಾಕೂಟ
ಬೆಂಗ್ರೆ ಜಿ ಪಿ ಸುವರ್ಣ ಪ್ರಾಥಮಿಕ ಶಾಲೆ ಮತ್ತು ಸ್ವಾಮಿ ಮುಕ್ತಾನಂದ ಪ್ರಾಢಶಾಲೆಯ ವಾರ್ಷಿಕ ಕ್ರೀಡಾಕೂಟವು ಜನವರಿ 9 ಮತ್ತು 10, 2023 ರಂದು ಅಂಧೇರಿಯ ಎಂ ವಿ ಎಂ ಶೈಕ್ಷಣಿಕ ಕ್ಯಾಂಪಸ್ ನಲ್ಲಿ ನಡೆಯಿತು. ಶಾಲೆಯ ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ಪುರಂದರ ಎಸ್.ಸಾಲಿಯಾನ್ ,ನಿವೃತ್ತ ಸಹಾಯಕ ಆಯುಕ್ತರು,ಕಸ್ಟಮ್ಸ್ , ಮುಂಬೈ ಇವರು ಕ್ರೀಡಾ ಕೂಟವನ್ನು ಉದ್ಘಾಟಿಸಿದರು. ಇವರು ಮಾಜಿ ಕ್ರಿಕೆಟ್ ನಾಯಕ ಮತ್ತು ಕಸ್ಟಮ್ ನ ಫುಟ್ಬಾಲ್ ಟೀಮ್ ನಲ್ಲಿ ಭಾಗವಹಿಸಿದ್ದರು.
ಶಾಲಾ ಮಕ್ಕಳು ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಬ್ಯಾಂಡಿನ ಮೂಲಕ ಅದ್ಭುತವಾದ ಮೆರವಣಿಗೆಯನ್ನು ಪ್ರದರ್ಶಿಸಿದರು. ನಂತರ ಸ್ವಾಮಿ ಮುಕ್ತಾನಂದ ಪ್ರಾಢಶಾಲೆಯ ವಿದ್ಯಾರ್ಥಿಗಳಿಂದ ಲೆಜಿಮ್ ಮತ್ತು ಬೆಂಗ್ರೆ ಜಿ ಪಿ ಸುವರ್ಣ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ವಿಜೇತರು, ರನ್ನರ್ ಆಫ್ ಮತ್ತು ಭಾಗವಹಿಸಿದವರಿಗೆ ಶಾಲೆಯ ಟ್ರೋಪಿ, ಪದಕ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಸ್ವಾಮಿ ಮುಕ್ತಾನಂದ ಪ್ರಾಢಶಾಲೆಯ ಉನ್ನತ ದರ್ಜೆಯ ಬಾಲಕ ಬಾಲಕಿಯರು ಅಥ್ಲೆಟಿಕ್ , ಲಾಂಗ್ ಜಂಪ್, ಶಾರ್ಟ್ ಪುಟ್, ರಿಲೇ ರೆಸ್, ಟಗ್ ಆಫ್ ವಾರ್, ಮತ್ತು ರನ್ನಿಂಗ್ ರೆಸ್ ನಲ್ಲಿ ಭಾಗವಹಿಸಿದರು. ಪ್ರಾಥಮಿಕ ದರ್ಜೆಯ ವಿದ್ಯಾರ್ಥಿಗಳಿಗೆ ಚೆಂಡು ಓಟ , ಒಂಟೆ ನಡಿಗೆ, ಹರ್ಡಲ್ ಓಟ, ನಿಂಬೆ ಮತ್ತು ಚಮಚ ಓಟ, ಲೆಮನ್ ಅಂಡ್ ಸ್ಪೂನ್, ಕೋಲಿನಿಂದ ಕೋನ್ ಸಂಗ್ರಹಿಸುವುದು, ಗೆಟ್ ರೆಡಿ ಫಾರ್ ಆಫೀಸ್ ಪಾರ್ಟಿ ಇತ್ಯಾದಿ ಆಟಗಳನ್ನು ನಡೆಸಲಾಯಿತು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಟ್ರಸ್ಟಿ ದೇವರಾಜ್ ಜಿ ಬಂಗೇರ, ಶೈಕ್ಷಣಿಕ ಸಮಿತಿ ಕಾರ್ಯಾಧ್ಯಕ್ಷರಾದ ಸಂಜೀವ ಕೆ.ಸಾಲ್ಯಾನ್, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರಾದ ಗೋವಿಂದ ಪುತ್ರನ್, ಮಂಡಳಿಯ ಜತೆ ಕಾರ್ಯದರ್ಶಿಗಳಾದ ವಿಶ್ವನಾಥ ಪುತ್ರನ್, ಶ್ರೀಮತಿ ಪ್ರೀತಿ ಶ್ರೀಯಾನ್ ಮತ್ತು ಶ್ರೀಮತಿ ದಯಾವತಿ ಸುವರ್ಣ ಹಾಗೂ ಸದಸ್ಯರುಗಳಾದ ರವಿ ಸಾಲಿಯಾನ್, ಪ್ರಶಾಂತ್ ಎ ತಿಂಗಳಾಯ, ಚಂದ್ರಶೇಖರ ಕರ್ಕೇರ ಉಪಸ್ಥಿತರಿದ್ದರು.
ಡಾ.ಗೋಪಾಲ್ ಕಲ್ಕೋಟಿ, ಶ್ರೀಮತಿ ರುತಾಕ್ಷಿ ಉಪಾಧ್ಯಾಯ, ವಿದ್ಯಾ ಸಂಕುಲದ ಅಡ್ಮಿನಿಸ್ಟ್ರೇಷನ್ ಹೆಡ್ ಜೀತು ರೋಹಿರ, ಪೋಷಕರು ಮತ್ತು ಸಿಬ್ಬಂದಿ ವರ್ಗ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು ಮತ್ತು ಪ್ರೋತ್ಸಾಹಿಸಿದರು.
ಸ್ವಾಮಿ ಮುಕ್ತಾನಂದ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾ ಕರ್ಕೇರ ಸ್ವಾಗತಿಸಿದರು.


Post a Comment