".

Header Ads

ಬಂಟರವಾಹಿನಿ ಮಾಸಪತ್ರಿಕೆಯ ಸಂಪಾದಕ ಪ್ರದೀಪ್ ಕುಮಾರ್ ರೈ ಐಕಳಬಾವ ಅವರಿಗೆ ಶ್ರೀ ಹರಿಹರಪೀಠ ಪ್ರಶಸ್ತಿ


ಮಂಗಳೂರು:   ತೀರ್ಥಹಳ್ಳಿ ಸಮೀಪದ ಶ್ರೀ ಕ್ಷೇತ್ರ ಬೆಜ್ಜವಳ್ಳಿಯಲ್ಲಿ ಪರಮಪೂಜ್ಯ ವಿದ್ಯಾವಾಚಸ್ಪತಿ ಡಾ. ಶ್ರೀ ಶ್ರೀ ಶ್ರೀ ವಿಶ್ವಸಂತೋಷ ಭಾರತಿ ಶ್ರೀಪಾದರ ನೇತೃತ್ವದಲ್ಲಿ ವರ್ಷಂಪ್ರತಿ ನಡೆಯುತ್ತಿರುವ ಮಕರ ಸಂಕ್ರಾಂತಿ ಉತ್ಸವ ಸಂದರ್ಭದಲ್ಲಿ ನೀಡಲಾಗುತ್ತಿರುವ ಪ್ರತಿಷ್ಠಿತ ರಾಜ್ಯಮಟ್ಟದ   ಶ್ರೀ ಹರಿಹರ ಪ್ರಶಸ್ತಿಯನ್ನು ಮಂಗಳೂರಿನ ಬಂಟರ ವಾಹಿನಿ ಸುದ್ದಿ ಮಾಸಪತ್ರಿಕೆಯ ಸಂಪಾದಕ ಪ್ರದೀಪ್ ಕುಮಾರ್ ರೈ ಐಕಳಬಾವ, ಮೈಸೂರಿನ ಖ್ಯಾತ ಇತಿಹಾಸಕಾರ  ಪ್ರೊ. ನಂಜರಾಜ ಅರಸ್ ಮತ್ತು ಶಿವಮೊಗ್ಗ ಟೈಮ್ಸ್ ಸಂಪಾದಕರಾದ  ಚಂದ್ರಕಾಂತ್  ಅವರಿಗೆ ಪ್ರದಾನ ಮಾಡಲಾಯಿತು. 

ಪರಮಪೂಜ್ಯ ವಿದ್ಯಾವಾಚಸ್ಪತಿ ಡಾ. ಶ್ರೀ ಶ್ರೀ ಶ್ರೀ ವಿಶ್ವಸಂತೋಷ ಭಾರತಿ ಶ್ರೀಪಾದರು, ಚಿತ್ರದುರ್ಗದ ಮಾದಾರ ಚೆನ್ನಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಕಾಯಕಯೋಗಿ ಡಾ. ಶ್ರೀ ಶ್ರೀ ಶಾಂತವೀರ ಮಹಾಸ್ವಾಮೀಜಿ,  ಕೇಂದ್ರ ರಕ್ಷಣಾ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ್, ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಕುಸ್ತಿ ಸಂಸ್ಥೆಯ ಅಧ್ಯಕ್ಷ ಗುಣರಂಜನ್ ಶೆಟ್ಟಿ, ಕರಕುಶಲ ನಿಗಮದ ಮಾಜಿ ಅಧ್ಯಕ್ಷ ರಾಘವೇಂದ್ರ ಸಹಿತ ಹಲವಾರು ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. 
Powered by Blogger.