".

Header Ads

ಕೊಲೆ ಪ್ರಕರಣ; -  ಚಾರ್ಮಾಡಿ ಘಾಟ್‌ ನಲ್ಲಿ ಶವಕ್ಕಾಗಿ ಹುಡುಕಾಟ

 


ಸುಮಾರು 9 ತಿಂಗಳ ಹಿಂದೆ  ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಕಾರು ಕೊಡಿಸುವುದಾಗಿ ಹೇಳಿದ್ದ ಶರತ್, ಚಿಕ್ಕಬಳ್ಳಾಪುರ
ಹಾಗೂ ಯಲಹಂಕದ ಹಲವರಿಂದ ಹಣ ಪಡೆದಿದ್ದರು. ಕಾರು ಕೊಡಿಸದೇ ಜನರನ್ನು ವಂಚಿಸಿದ್ದರು. ಈ ಸಂಬಂಧ ಶರತ್ ವಿರುದ್ಧ  ಪ್ರಕರಣವೂ ದಾಖಲಾಗಿತ್ತು. ಇದರ ನಡುವೆಯೇ ಶರತ್ ಅವರನ್ನು ಅಪಹರಿಸಿದ್ದ ಆರೋ ಪಿಗಳು, ಹತ್ಯೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.  

ಕೋಣನಕುಂಟೆ ನಿವಾಸಿಯಾದ ಶರತ್‌ ಎಂಬಾತ ಸಾಲ ಪಡೆದು ಹಿಂತಿರುಗಿಸದೆ ಓಡಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ಗ್ಯಾಂಗ್‌ ಕಿಡ್ನಾಪ್‌ ಮಾಡಿ ಶರತ್‌ ನನ್ನು ಕೊಲೆ ಮಾಡಿದ್ದರು. ಕೊಲೆಯಾದ ಎಚ್‌. ಶರತ್‌ ಚಿಕ್ಕಬಳ್ಳಾಪುರ ಹಾಗೂ ಯಲಹಂಕ ನಿವಾಸಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಸಬ್ಸಿಡಿ ದರದಲ್ಲಿ ವಾಹನ ಕೊಡಿಸುವುದಾಗಿ ನಂಬಿಸಿದ್ದ. ಆದರೆ ಕಾರು ಕೊಡಿಸದೆ ಅಲ್ಲಿನ ಜನರಿಗೆ ವಂಚಿಸಿದ್ದ.
























 

 ಇದರಿಂದ ಹಣ ಕೊಟ್ಟು ಜನ ಎಚ್‌. ಶರತ್‌ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಅಷ್ಟೇ ಅಲ್ಲದೆ ಚಿಕ್ಕಬಳ್ಳಾಪುರದ ಮಖಂಡರೊಬ್ಬರಿಗೆ ಹಣ ವಾಪಸ್‌ ಕೊಡಿಸುವಂತೆ ಜನ ಕೇಳಿಕೊಂಡಿದ್ದಾರೆ. ಜನರ ಮನವಿ ಮೇರೆಗೆ ಅವರು ತನ್ನ ಪುತ್ರನಿಗೆ ಹಣ ವಸೂಲಿ ಮಾಡುವಂತೆ ಹೇಳಿದ್ದ. ಇದರಿಂದ ಇಲ್ಲಿಂದ ಶರತ್‌ ಕಿಡ್ನಾಪ್‌ ಅ್ಯಂಡ್‌ ಮರ್ಡರ್‌ ಪ್ಲಾನ್‌ ಆರಂಭವಾಯಿತು ಎಂದು ಕೇಳಿ ಬರುತ್ತಿದೆ.

ಮುಖಂಡರ ಹಾಗೂ ಆತನ ಸ್ನೇಹಿತರು, ಜತೆಗೆ ಹಣ ಪಡೆದುಕೊಂಡ ಕೆಲವರು ಸೇರಿ ಶರತ್‌ ನನ್ನು ಕಿಡ್ನಾಪ್‌ ಮಾಡಿ ಆತನ ಮೊಬೈಲ್‌ ನಿಂದಲೇ ಯುವಕನ ತಂದೆ ತಾಯಿಗೆ “ನಾನು ದುಡಿಯಲು ಹೋಗುತ್ತಿದ್ದೇನೆ ಹುಡುಕಬೇಡಿ ಎಂದು ಮೆಸೇಜ್‌" ಹಾಕಿ ಬಳಿಕ ಮೊಬೈಲನ್ನು ಲಾರಿಯೊಂದರ ಮೇಲೆ ಎಸೆದಿದ್ದಾರೆ. ಲಾರಿ ಮೈಸೂರು ಮಾರ್ಗವಾಗಿ ಸಾಗಿ ಹೊರ ರಾಜ್ಯಕ್ಕೆ ಪ್ರಯಾಣವಾಗಿದ್ದು ಬಳಿಕ ಮೊಬೈಲ್‌ ಸ್ಟಿಚ್‌ ಆಫ್‌ ಆಗಿತ್ತು. ಇಷ್ಟರಲ್ಲಿ ಶರತ್‌ ನನ್ನು ಬನಶಂಕರಿಯಿಂದ ಅಪಶರಿಸಿದ ಗ್ಯಾಂಗ್‌ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ವಾಟದ ಹೊಸಹಳ್ಳಿಯ ಮಾವಿನ ತೋಟದ ಮನೆಯೊಂದರಲ್ಲಿ ಬಂಧನದಲ್ಲಿ ಇಡಲಾಗಿತ್ತು. ಬಳಿಕ ಆತನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಎಂದು ಹೇಳಲಾಗಿದೆ. ಆತನಿಗೆ ಹಿಂಸೆ ನೀಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.   ಕೊಲೆಯಾದ ಯುವಕನ ಶವವನ್ನು ಚಾರ್ಮಾಡಿ ಘಾಟಿ ಪರಿಸರದಲ್ಲಿ ಎಸೆಯಲಾಗಿದೆ. ಎಂದು ಆರೋಪಿಗಳು ತಿಳಿಸಿದ್ದು ಅದರಂತೆ ಬೆಂಗಳೂರು ಕಬ್ಬನ್‌ ಪಾರ್ಕ್‌ ಪೊಲೀಸರು ಡಿಸಿಪಿ ನೇತೃತ್ವದಲ್ಲಿ ಇನ್ಸ್‌ ಪೆಕ್ಟರ್‌, ಪಿಎಸ್‌ ಐ ಮತ್ತು ಸಿಬ್ಬಂದಿಗಳು ಶವ ಹತ್ತೆ ಹಚ್ಚುವ  ಕಾರ್ಯಾಚರಣೆಗೆ ಮಂಗಳವಾರ ಆಗಮಿಸಿದ್ದಾರೆ.
 
 ಕೊಲೆಯಾದ ಶರತ್‌ ನ ಶವನನ್ನು ಚಾರ್ಮಾಡಿ ಘಾಟ್‌ನಲ್ಲಿ ಎಸೆದು ಯಾರಿಗೂ ಶವದ ಸುಳಿವು ಸಿಗದಂತೆ ಮಾಡಿದ್ದರು.  ‘ಅಪಹರಣ ಹಾಗೂ ಹತ್ಯೆ ಸಂಬಂಧ ದಾಖಲಾದ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳಾದ ಎಚ್.ಜಿ. ವೆಂಕಟಾಚಲಪತಿ, ಅವರ ಪುತ್ರ ಎ.ವಿ.ಶರತ್ ಕುಮಾರ್, ಸಹಚರರಾದ ಆರ್.ಶ್ರೀಧರ್, ಕೆ. ಧನುಷ್, ಯಲಹಂಕದ ಎಂ.ಪಿ.ಮಂಜುನಾಥ್, ಉದಯ, ನವೀನ್, ಸಂಕೇತ್, ಭೋ ಗೇಶ್, ಗೋ ವಿಂದ್ ಅವರನ್ನು ಬಂಧಿಸಲಾಗಿತ್ತು. ಶರತ್ ಅವರನ್ನು ಕೊಂದಿರುವುದಾಗಿ ಹೇಳಿದ್ದ ಆರೋ ಪಿಗಳು, ಚಾರ್ಮಾಡಿ ಘಾಟಿಯಲ್ ಲಿಮೃತದೇಹ ಬಿಸಾಕಿರುವುದಾಗಿ ಮಾಹಿತಿ ನೀಡಿದ್ದರು.’ಸದ್ಯ ಕಬ್ಬನ್‌ ಪಾರ್ಕ್‌ ಪೊಲೀಸರು ಸಮೊಟೋ ಪ್ರಕರಣವನ್ನು ದಾಖಲಿಸಿ 10 ಮಂದಿ ಆರೋಪಿಗಳನ್ನು ಬಂಧಿಸಿ ಅವರ ಮೇಲೆ ಕೊಲೆ ಪ್ರಕರಣ ಎಫ್‌ಐಆರ್‌ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

Powered by Blogger.