ಉಡುಪಿ :-paytm ಫಾಸ್ಟ್ ಟ್ಯಾಗ್ ಸರಿಪಡಿಸಿ ಕೊಡುವುದಾಗಿ ಆನ್‌ಲೈನ್ ಮೂಲಕ ವ್ಯಕ್ತಿಗೆ 99,997ರೂ. ವಂಚನೆ
ಫ್ರಾನ್ಸಿಸ್ ಪಿಯುಸ್ ಪುಟಾಡೋ ಅಧಿಕಾರಿ ಎಂದು ನಂಬಿಸಿ ವ್ಯಕ್ತಿಯೋರ್ವರಿಗೆ ಸಾವಿರಾರು ರೂ. ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ
ಅವರು ತಮ್ಮ ಪೆಟಿಎಂ ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಂಡ ಬಗ್ಗೆ ಗೂಗಲ್‌ನಲ್ಲಿ ಪೆಟಿಎಂ ಫಾಸ್ಟ್ ಟ್ಯಾಗ್ ಎಪ್ಲಿಕೇಶನ್ ಹುಡುಕಿದಾಗ ಗೂಗಲ್‌ನಲ್ಲಿ ಪೆಟಿಎಂ ಹೆಲ್ಪ್ ಸಪೋರ್ಟ್ ನಲ್ಲಿ ಕಂಡುಬಂದ ಮೊಬೈಲ್ ನಂಬ್ರ +918249255475 ಈ ನಂಬರ್ ಗೆ ಕರೆ ಮಾಡಿದಲ್ಲಿ ಆ ವ್ಯಕ್ತಿ ತಾನು ಪೆಟಿಎಂ ಫಾಸ್ಟ್ ಟ್ಯಾಗ್ ವೆಬ್‌ಸೈಟ್ ಅಧಿಕಾರಿಯಾಗಿ ಎಂಬುದಾಗಿ ನಂಬಿಸಿ, ಪೆಟಿಎಂ ಫಾಸ್ಟ್ ಟ್ಯಾಗ್ ಸರಿಪಡಿಸಿ ಕೊಡುವುದಾಗಿ ಅವರಿಂದ ಮೊಬೈಲ್‌ಗೆ ಬಂದ ಒಟಿಪಿ ಪಡೆದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಸ್.ಬಿ. ಖಾತೆಯಿಂದ ಹಂತ ಹಂತವಾಗಿ ಒಟ್ಟು 99,997ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ಮೋಸ ಹೋಗಿದ್ದರೆ,ಈ ಕುರಿತು ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment