ಅಮುಲ್ ಹಾಲಿನ ದರ ಹೆಚ್ಚಳ, 10 ತಿಂಗಳಲ್ಲಿ 12 ರೂ. ಏರಿಕೆ
ಮುಲ್ ಬ್ರಾಂಡ್‌ಗೆ ಹೆಸರುವಾಸಿಯಾದ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಮಾಹಿತಿ ನೀಡಿದೆ.
"ಅಮುಲ್ ಹಾಲಿನ ಪ್ಯಾಕ್‌ಗಳ ಎಲ್ಲಾ ವಿಧಗಳಲ್ಲಿಯೂ ಬೆಲೆಯನ್ನು ಲೀಟರ್‌ಗೆ 3 ರೂಪಾಯಿಗೆ ಹೆಚ್ಚಿಸಲಾಗಿದೆ.
ಇಂದಿನಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ " ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ 10 ತಿಂಗಳಲ್ಲಿ ಹಾಲಿನ ದರ 12 ರೂಪಾಯಿಯಷ್ಟು ಏರಿಕೆಯಾಗಿದೆ. ಅದಕ್ಕೂ ಮುನ್ನ ಸುಮಾರು ಏಳು ವರ್ಷಗಳ ಕಾಲ ಹಾಲಿನ ದರ ಏರಿಕೆಯಾಗಿರಲಿಲ್ಲ. ಏಪ್ರಿಲ್ 2013 ಮತ್ತು ಮೇ 2014 ರ ನಡುವೆ ಹಾಲಿನ ಬೆಲೆ ಲೀಟರ್‌ಗೆ 8 ರೂಪಾಯಿಗೆ ಏರಿಕೆಯಾಗಿತ್ತು.
ಬೇಸಿಗೆಯಲ್ಲಿ ಹಾಲಿನ ಉತ್ಪಾದನೆಯು ಕಡಿಮೆಯಾಗುವುದರಿಂದ ಹಾಲು ಮಾರಾಟ ಮಾಡುವ ಕಂಪನಿಗಳು ಹೈನುಗಾರಿಕೆ ಮಾಡುವ ರೈತರಿಗೆ ಹೆಚ್ಚಿನ ದರ ನೀಡಬೇಕಾಗಿದೆ. ಅದಕ್ಕಾಗಿಯೇ ಮುಂದಿನ ದಿನಗಳಲ್ಲಿ ಇನ್ನು ಹಾಲಿನ ದರದಲ್ಲಿ ಹೆಚ್ಚಳ ಉಂಟಾಗಬಹುದು ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
ಮಾರ್ಚ್ 5 ಮತ್ತು ಡಿಸೆಂಬರ್ 27, 2022 ರ ನಡುವೆ ಮದರ್ ಡೈರಿಯ ಬೆಲೆ ಪ್ರತಿ ಲೀಟರ್‌ಗೆ 57 ರೂಪಾಯಿಯಿಂದ 66 ರೂಪಾಯಿಗೆ ಏರಿಕೆಯಾಗಿದೆ. ಟೋನ್ಡ್ ಹಾಲಿನ ಬೆಲೆ ಪ್ರತಿ ಲೀಟರ್‌ಗೆ 6 ರೂಪಾಯಿ ಹೆಚ್ಚಾಗಿದೆ.

Post a Comment