ಬಿಲ್ಲವರ ಅಸೋಸಿಯೇಷನ್ ಮುಂಬಯಿ ಮಲಾಡ್ ಸ್ಥಳೀಯ ಸಮಿತಿ ಜಾತಿ ಪ್ರಮಾಣ ಪತ್ರದ ಮಾಹಿತಿ ಶಿಬಿರ ಮತ್ತು ಅರಸಿನ ಕುಂಕುಮ
ಅಸೋಸಿಯೇಷನ್ ನ ಒಗ್ಗಟ್ಟಿನಲ್ಲಿ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯ : ಜಯಂತಿ ಉಲ್ಲಾಳ್
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಉಪಾಧ್ಯಕ್ಷೆ ಜಯಂತಿ ವರದ್ ಉಳ್ಳಾಲ್ ಮಾತನಾಡುತ್ತಾ ಒಬಿಸಿ ಪ್ರಮಾಣ ಪತ್ರವನ್ನು ಮಾಡಿಸುಕೊಳ್ಳುದರಿಂದ ಅನೇಕ ಪ್ರಯೋಜನವಿದೆ. . 92 ವರ್ಷಗಳ ಇತಿಹಾಸವನ್ನು ಹೊಂದಿದ ನಮ್ಮ ಸಂಘಟನೆ ಜಯಸುವರ್ಣರ ಸಮಯದಲ್ಲಿ ಉನ್ನತ ಅಭಿವೃದ್ದಿಯನ್ನು ಕಂಡಿದ್ದು ಈಗಿರುವ ಅಧ್ಯಕ್ಷರು ಅವರ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ . ನಾವೆಲ್ಲರೂ ಒಗ್ಗಟ್ಟಿನಿಂದ ಅಸೋಸಿಯೇಷನ್ ಯನ್ನು ಬಲಪಡಿಸುವುದು ಅಗತ್ಯವಿದೆ. ಈ ಪರಿಸರದ ಮಹಿಳೆಯರು ಸಮಾಜದ ಸೇವಾ ಕಾರ್ಯಗಳಲ್ಲಿ ಉತ್ಸಾಹದಲ್ಲಿ ಕಾರ್ಯಗಳನ್ನು ಮಾಡುತ್ತಾರೆ. ಮಹಿಳೆಯರೆಲ್ಲರೂ ಸಮಾಜದ ಸೇವಾಕಾರಿಗಳಲ್ಲಿ ಹೆಚ್ಚು ತೊಡಗಿಕೊಳ್ಳಬೇಕು ಎಂದರು.
ಜಾತಿ ಪ್ರಮಾಣ ಪತ್ರದ ಬಗ್ಗೆ ಮೀರಾ-ಭಾಯಂಧರ್ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ರೋಹಿತ್ ಸುವರ್ಣ ಅವರು ಮಾರ್ಗದರ್ಶನ ನೀಡುತ್ತಾ ನಮ್ಮ ಸಮಾಜದವರಿಗೆ ಉನ್ನತ ಶಿಕ್ಷಣ ಮಾತ್ರವಲ್ಲದೆ ಐಪಿಎಸ್, ಐ.ಎ.ಎಸ್ ಇಂತಹ ಉನ್ನತ ಉದ್ಯೋಗ ಗಳಿಸಲು ಒಬಿಸಿ ಪ್ರಮಾಣ ಪತ್ರದ ಅಗತ್ಯವಿದೆ. ರಾಜಕೀಯದಲ್ಲಿ ಉನ್ನತ ಸ್ಥಾನದಲ್ಲಿ ಸಕ್ರಿಯವಾಗಲು ಇದು ಪ್ರಯೋಜನಕಾರಿಯಾಗಿದೆ. ಈಗಾಗಲೇ ನಮ್ಮ ಸಮಾಜದ ಹಲವಾರು ಯುವ ಜನಾಂಗವು ಒಬಿಸಿ ಪ್ರಮಾಣ ಪತ್ರವನ್ನು ಪಡೆದು ಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಸಮಾಜ ಬಾಂಧವರು ಜಾತಿ ಪ್ರಮಾಣ ಪತ್ರವನ್ನು ಪಡೆಯುವಲ್ಲಿ ಕಾರ್ಯ ಪ್ರವರ್ತ ರಾಗಬೇಕು. ವಿದ್ಯಾರ್ಥಿಗಳಿಗೆ ಇದು ಹೆಚ್ಚು ಉಪಯೋಗವಾಗುತ್ತದೆ ಎಂದು ಒಬಿಸಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಸ್ಥಳೀಯ ನಗರ ಸೇವಕರಾದ ದಕ್ಷಾ ಪಾಟೀಲ್ ಅವರು ಮಾತನಾಡುತ್ತಾ ಗುಜರಾಥ್ ನ ಕೆಲವೊಂದು ಸಮುದಾಯದ ಜನರು ಮೊದಲು ಒಬಿಸಿ ಪ್ರಮಾಣ ಪತ್ರವನ್ನು ನಿರಾಕರಿಸುತ್ತಿದ್ದರು ನಂತರ ಅದರ ಅಗತ್ಯದ ಬಗ್ಗೆ ತಿಳಿದ ಜನರು ಒಬಿಸಿ ಪ್ರಮಾಣ ಪತ್ರವನ್ನು ಮಾಡತೊಡಗಿದರು. ಸಮಾಜದ ಕೆಲಸಕ್ಕೆ ಮಹಿಳೆಯರು ಒಟ್ಟಾಗುತ್ತಾ ಹಳದಿ ಕುಂಕುಮದಂತಹ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ಮಹಿಳಾ ಶಕ್ತಿಗೆ ಪೂರಕ ಎಂದರು.
ಅಸೋಸಿಯೇಷನ್ನ ಉಪಾಧ್ಯಕ್ಷ ಶಂಕರ್ ಡಿ ಪೂಜಾರಿ ಅವರು ಅಸೋಸಿಯೇಷನ್ ನಡೆಸುತ್ತಿರುವ ಸೇವಾ ಕಾರ್ಯಗಳನ್ನು ಮತ್ತು ಫೆಬ್ರವರಿ 12ರಂದು ನಡೆಯಲಿರುವ ಕ್ರೀಡಾ ಉತ್ಸವದ ಬಗ್ಗೆ ಸಂಪೂರ್ಣ ಮಾಹಿತಿ
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉದ್ಯಮಿ ಮೋಹಿನಿ ಭಾಸ್ಕರ್ ಸನಿಲ್ ಹಾಗೂ ಗೌರವ ಅತಿಥಿಯಾಗಿ ಬಾಲಾಜಿ ಆಟೋ ಕಮರ್ಷಿಯಲ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್‌ನ ಮಮತಾ ಶಿವರಾಮ್ ಪೂಜಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ರತ್ನ ಕುಲಾಲ್ ಮಾತನಾಡುತ್ತಾ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಮಲಾಡ್ ಸಮಿತಿ ಪರಿಪಾಲಿಸುತ್ತಾ ಬಂದಿದೆ ,ಈ ಪರಿಸರದ ತುಳು ಕನ್ನಡಿಗರ ಒಗ್ಗಟ್ಟಿನಲ್ಲಿ ಎಲ್ಲಾ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ನುಡಿದರು
ಮಲಾಡ್ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷರಾದ ಸಂತೋಷ್ ಕೆ ಪೂಜಾರಿ ಮಾತನಾಡುತ್ತಾ ಬಿಲ್ಲವ ಸಮಾಜದ ಬಂಧುಗಳು ಎಲ್ಲಾ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಸಂಘಟನಾ ಚತುರತೆಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಈ ಪರಿಸರದ ಎಲ್ಲಾ ಸಮುದಾಯದ ಬಂಧುಗಳು ಬಿಲ್ಲವ ಸಮಾಜದ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳುತ್ತಾರೆ ಇದು ನಮ್ಮ ಸಮಿತಿಗೆ ಶಕ್ತಿ ತುಂಬಿದೆ ಮುಂದಿನ ದಿನಗಳಲ್ಲಿ ತುಳು ಕನ್ನಡಿಗರ ಒಗ್ಗಟ್ಟು ಬಲಿಷ್ಠವಾಗಲಿ ಎಂದರು.
ವೇದಿಕೆಯಲ್ಲಿ ಅಸೋಸಿಯೇಷನ್ನ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ರೇಖಾ ಸದಾನಂದ, ಮಲಾಡ್ ಸ್ಥಳೀಯ ಸಮಿತಿಯ ಮಹಿಳಾ ಸದಸ್ಯರಾದ ವಿಜಯ ಸುರೇಂದ್ರ ಪೂಜಾರಿ, ಆಶಾ ಉಮೇಶ್ ಅಂಚನ್, ರಾಜಶ್ರೀ ಸಂತೋಷ್ ಪೂಜಾರಿ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಈ ವರ್ಷ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರೀತಿ ರಘು ಪೂಜಾರಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಪ್ರಾರಂಭದಲ್ಲಿ ಜಯ ಪೂಜಾರಿ ಗುರು ಪೂಜೆ ನಡೆಸಿದರು, ಕಾರ್ಯಕ್ರಮದ ಬಳಿಕ ಹೇಮಲತ ಕೇಶವ ಪೂಜಾರಿ ಅವರ ಸೇವಾ ರೂಪದ ಅನ್ನಸಂತರ್ಪಣೆ ನಡೆಯಿತು.
ಅಪಾರ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಸ್ಥಳೀಯ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು
ಕಾರ್ಯಕ್ರಮದ ಯಶಸ್ವಿಯಲ್ಲಿ ಸಮಿತಿಯ ಗೌರವ ಕಾರ್ಯ ಧ್ಯಕ್ಷ ಸುರೇಂದ್ರ ಪೂಜಾರಿ, ಮತ್ತಿತರ ಪದಾಧಿಕಾರಿಗಳು ಮಹಿಳಾ ಸದಸ್ಯರು ಯುವ ವಿಭಾಗದ ಸದಸ್ಯರು ಸಹಕರಿಸಿದರು.






Post a Comment