".

Header Ads

ಫೆ 11 ರಂದು ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಅಜ್ದೇಗಾಂವ್, ಡೊಂಬಿವಲಿ 33 ನೇ ವಾರ್ಷಿಕ ಶ್ರೀ ಶನಿ ಮಹಾಪೂಜೆ


ಡೊಂಬಿವಲಿ ಅಜ್ದೇಗಾಂವ್ ನ ಶ್ರೀ ಜೈ ಭವಾನಿ ಶನೀಶ್ವರ ಮಂದಿರ ದ 33 ನೇ ವಾರ್ಷಿಕ ಮಂಗಳೋತ್ಸವ   ಫೆಬ್ರವರಿ 11 ರ  ಶನಿವಾರ  ಜರುಗಲಿದೆ. ಪ್ರಾತಃಕಾಲ 6.00 ಗಂಟೆಗೆ ತೋರಣ ಮಹೂರ್ತ, ಗಣಹೋಮ, 10.00 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆನಡೆದು ಮದ್ಯಾಹ್ನ 1-30 ಗೆ ಶ್ರೀ ಶನಿ ದೇವರ ಕಲಶ ಪ್ರತಿಷ್ಠೆ ನಡೆದು ಗ್ರಂಥ ಪಾರಾಯಣ ನಡೆಯಲಿದೆ, ರಾತ್ರಿ 8.00 ಗಂಟೆಗೆ ಮಂಗಳಾರತಿ, ತೀರ್ಥ ಪ್ರಸಾದ ನೆರವೇರಲಿದೆ.

ಭಕ್ತಾಭಿಮಾನಿಗಳು ಬಂಧು ಮಿತ್ರರೊಡಗೂಡಿ ಚಿತ್ತೈಸಿ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಮಂದಿರದ ಅಧ್ಯಕ್ಷ ರವಿ ಎಂ ಸುವರ್ಣ, ಉಪಾಧ್ಯಕ್ಷ ಸಂಜೀವ ಪಿ ಪಾಲನ್, ಕಾರ್ಯದರ್ಶಿ ರಂಜಿತ್ ಕೆ ಶೆಟ್ಟಿ, ಕೋಶಾಧಿಕಾರಿ ಸೂರಜ್ ಡಿ ಸಫಲಿಗ, ಜೊತೆ ಕಾರ್ಯದರ್ಶಿ ಪ್ರದೀಪ್ ಎಸ್ ಸಾಲ್ಯಾನ್, ಜೊತೆ ಕೋಶಾಧಿಕಾರಿ ದಿನೇಶ್ ಎಸ್ ಬಂಗೇರ, ಪ್ರಧಾನ ಅರ್ಚಕ ಕಾನಂಗಿ ಪ್ರಕಾಶ್ ಭಟ್, ಸಹ ಅರ್ಚಕ ಪ್ರವೀಣ್ ಪೂಜಾರಿ ಹಾಗೂ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು  ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Powered by Blogger.