".

Header Ads

ದೆಹಲಿಯಲ್ಲಿ ನಡೆದ ಜೆಸಿಐ ನ ರಾಷ್ಟ್ರೀಯ ಸಮ್ಮೇಳನದಲ್ಲಿ ಅರುಣಾ ಕುಲಾಲ್ ಗೆ ರಾಷ್ಟ್ರಮಟ್ಟದ ಔಟ್ ಸ್ಟ್ಯಾಂಡಿಂಗ್ ಟಾಪ್ - 1 ವಲಯಾಧಿಕಾರಿ ಮನ್ನಣೆ

ಅಂತರಾಷ್ಟ್ರೀಯ ಸಂಸ್ಥೆ ಪ್ರತಿಷ್ಠಿತ ಭಾರತೀಯ ಜೆಸಿಐನ ರಾಷ್ಟ್ರೀಯ ಸಮ್ಮೇಳನವು ದೆಹಲಿಯ ಲೀಲಾ ಆಂಬಿಯನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಇತ್ತೀಚೆಗೆ ನಡೆಯಿತು. 

ಈ ಸಂದರ್ಭ ಜೆಸಿಐನ ವಲಯ 15 ರ ಗೋ ಗ್ರೀನ್ ವಿಭಾಗದ ವಲಯಾಧಿಕಾರಿ ಜೇಸಿ ಹೆಚ್ ಜಿ ಎಫ್ ಅರುಣಾ ಕುಲಾಲ್ ಗೆ ಗೋ ಗ್ರೀನ್ ವಿಭಾಗದಲ್ಲಿ ಮಾಡಿರುವ ಸಾಧನೆಗಾಗಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದ ವೇದಿಕೆಯಲ್ಲಿ ಗೋ ಗ್ರೀನ್ ವಿಭಾಗದ ರಾಷ್ಟ್ರೀಯ ಸಂಯೋಜಕರಾದ ಜೆಸಿಐ ಸೆನೆಟರ್ ಪ್ರಶಾಂತ್ ದೊಡ್ಡಮನೆಯವರಿಂದ ಕೊಡಲ್ಪಟ್ಟಿರುವ ರಾಷ್ಟ್ರಮಟ್ಟದ ಔಟ್ ಸ್ಟ್ಯಾಂಡಿಂಗ್ ಟಾಪ್ 1 ವಲಯಾಧಿಕಾರಿ ಮನ್ನಣೆಯನ್ನು ರಾಷ್ಟ್ರಾಧ್ಯಕ್ಷ ಜೆಎಫ್ಎಸ್ ಅನುಷ್ ಸರಫ್ ನೀಡಿ ಗೌರವಿಸಿದರು. 

ಈ ಸಂದರ್ಭ ವೇದಿಕೆಯಲ್ಲಿ ಕಾರ್ಯಕ್ರಮ ವಿಭಾಗದ ರಾಷ್ಟ್ರೀಯ ನಿರ್ದೇಶಕ ಜೆಎಫ್ಎಸ್ ಲಕ್ಷ್ಮಣ್ ಶರ್ಮ, ವಲಯ 15ರ ವಲಯಾಧ್ಯಕ್ಷ ಜೆಸಿಐ ಸೆನೆಟರ್ ರೋಯನ್ ಉದಯ ಕ್ರಾಸ್ತ, ವಲಯ 15ರ ವಲಯಾಡಳಿತ ಮಂಡಳಿ, ಸ್ಪಾರ್ಕ್ಲಿಂಗ್ ಘಟಕಾಧ್ಯಕ್ಷರು ಹಾಗೂ ಹಿರಿಯ ಕಿರಿಯ ಜೇಸಿ ಸದಸ್ಯರು ಉಪಸ್ಥಿತರಿದ್ದರು. 

ಸಾಧನೆಯ ಹಾದಿಯಲ್ಲಿ ಇವರು ಜೆಸಿಐ ನ ಘಟಕ, ವಲಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುತ್ತಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ತಮ್ಮ ಕಾರ್ಯ ಕ್ಷಮತೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾದವರು. ಪ್ರಸ್ತುತ ಇವರು ಮಂಗಳೂರಿನ ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ & ಕಾಲೇಜ್ ನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Powered by Blogger.