ಮುಂಬೈ :- ಪತ್ನಿ ಕೊಂದು ವಾಸನೆ ಬಾರದಂತೆ ಅಗರಬತ್ತಿ ಹಚ್ಚಿದ್ದ ಪತಿ
ಪಾಲ್ಗರ್ ಜಿಲ್ಲೆಯ ವಿಜಯನಗರದಲ್ಲಿ ಹಾರ್ದಿಕ್ ಶಾ ಎಂಬಾತ, ಪತ್ನಿಯನ್ನು ಕೊಂದು, ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿಟ್ಟಿದ್ದ. ವಾಸನೆಯಿಂದಾಗಿ ಶವವಿರುವುದು ಯಾರಿಗೂ ಗೊತ್ತಾಗಬಾರದು ಎಂಬ ಉದ್ದೇಶದಿಂದ ಆರೋಪಿಯು ಅಗರಬತ್ತಿಗಳನ್ನು ಹಚ್ಚಿಟ್ಟಿದ್ದ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.ಆರೋಪಿಯನ್ನು ಫೆ.14ರಂದು ಮಧ್ಯಪ್ರದೇಶದ ನಾಗದಾ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮನೆಯಲ್ಲಿನ ವಸ್ತುಗಳನ್ನು ಮಾರಿ ಹರಿದ್ವಾರಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದ ಹಾರ್ದಿಕ್, ಖರೀದಿದಾರರನ್ನು ಮನೆಗೆ ಆಹ್ವಾನಿಸಿದ್ದ. ಅವರಿಗೆ, ಕೊಳೆತ ಶವದ ವಾಸನೆ ಬಾರದಂತೆ ಮಾಡುವ ಸಲುವಾಗಿ ಈ ಉಪಾಯ ಮಾಡಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.
ಹಣದ ವಿಚಾರವಾಗಿ ಪತ್ನಿ ಮೇಘಾ ಹಾಗೂ ಹಾರ್ದಿಕ್ ನಡುವೆ ಜಗಳವಾಗಿ, ಜಗಳ ವಿಕೋಪಕ್ಕೆ ಹೋದಾಗ, ಕುತ್ತಿಗೆಗೆ ನೇಣು ಬಿಗಿದು ಪತ್ನಿಯನ್ನು ಕೊಲೆ ಮಾಡಿದ್ದ , ಶವವನ್ನು ಹಾಸಿಗೆಯಲ್ಲಿ ಸುತ್ತಿಟ್ಟಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.

Post a Comment