ಬೊರಿವಲಿ ಚಿಕ್ಕುವಾಡಿಯಲ್ಲಿ ಫೆ. 5ರಂದು ಜರಗಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಸಮಾಲೋಚನಾ ಸಭೆ
ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಬದುಕನ್ನು ಪಾವನಗೊಳಿಸಿ : ಎರ್ಮಾಳ್ ಹರೀಶ್ ಶೆಟ್ಟಿ
(ಚಿತ್ರ, ವರದಿ : ದಿನೇಶ್ ಕುಲಾಲ್)
ಸಂಸದ ಗೋಪಾಲ ಶೆಟ್ಟಿ ತುಳು-ಕನ್ನಡಿಗ ಅಭಿಮಾನಿಗಳ ಬಳಗ ವತಿಯಿಂದ ಜ. 31 ನೇ ಮಂಗಳವಾರದಂದು ಕಾಂದಿವಲಿ ಪಶ್ಚಿಮದ ಮಹಾವೀರ್ ನಗರದಲ್ಲಿರುವ ಕಮಲಾ ವಿಹಾರ್ ಸ್ಪೋರ್ಟ್ಸ್ ಕ್ಲಬ್ (Kamla Vihar Sports Club) ನಲ್ಲಿ ಮುಂಬಯಿ ಬೊರಿವಲಿ ಪಶ್ಚಿಮದ ಚಿಕ್ಕುವಾಡಿಯ ಬಾಳಾ ಸಾಹೇಬ್ ಠಾಕ್ರೆ ಉದ್ಯಾನದಲ್ಲಿ ತಾ.5.02.2023 ನೇ ಭಾನುವಾರದಂದು ಜರಗಲಿರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಬಗ್ಗೆ ಚರ್ಚಿಸಿ ಅದರ ರೂಪುರೇಷೆಗಳನ್ನು ನಿರ್ಮಿಸಲು ತುಳು ಕನ್ನಡಿಗರ ಸಮಾಲೋಚನಾ ಸಭೆಯನ್ನು ನಡೆಸಲಾಯಿತು.
ಸಂಸದ ಗೋಪಾಲ್ ಶೆಟ್ಟಿ ತುಳು ಕನ್ನಡ ಅಭಿಮಾನಿಗಳ ಬಳಗ ಇದರ ಸಂಚಾಲಕರಾದ ಎರ್ಮಾಳ್ ಹರೀಶ್ ಶೆಟ್ಟಿಯವರು ಮಾಹಿತಿ ನೀಡುತ್ತಾ, ಸಂಸದ ಗೋಪಾಲ್ ಶೆಟ್ಟಿ ಅವರ ಮಾರ್ಗದರ್ಶನದಂತೆ ಈ ಪುಣ್ಯಕಾರ್ಯ ನಡೆಯಲು ಆಯೋಜಿಸಿಕೊಂಡಿದ್ದೇವೆ . ಎಲ್ಲರಿಗೂ ಮುಕ್ತವಾಗಿ ಅವಕಾಶವಿದೆ. ದೇಶದ ನಾನಾ ಭಾಷೆಗಳ ಬಂಧುಗಳು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಮಹಾರಾಷ್ಟ್ರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಜಕೀಯ ಮುಖಂಡರುಗಳು, ಸಮಾಜ ಸೇವಕರು, ತಿರುಮಲ ದೇವಸ್ಥಾನದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಳ್ಳುವುದೇ ಸೌಭಾಗ್ಯವಾಗಿದೆ. ಪ್ರಸಾದಕ್ಕೆ ಬೇಕಾದ ಲಡ್ಡು ಈಗಾಗಲೇ ತಯಾರಾಗುತ್ತಿದ್ದು, ಸುಮಾರು ತುಳು ಕನ್ನಡಿಗರಿಗಾಗಿ 3 ಸಾವಿರ ವಿವಿಐಪಿ ಪಾಸ್ ಹಾಗೂ 5 ಸಾವಿರ ಜನರಿಗೆ ವಿಐಪಿ ಪಾಸನ್ನು ನೀಡುವ ಯೋಜನೆಯಿದೆ.
ಸುಮಾರು ಲಕ್ಷ ಜನರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಪ್ರಥಮ ಬಾರಿಗೆ ಪಶ್ಚಿಮ ವಿಭಾಗದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತಿದೆ. ಎಲ್ಲಾ ಭಕ್ತರಿಗೂ ಶ್ರೀನಿವಾಸನ ವಿವಾಹ ನೋಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಸಂಜೆ 4:30 ರಿಂದ 6:00 ರವರೆಗೆ ಸಂಜೆ ತಿಂಡಿಗಳನ್ನು ಏರ್ಪಡಿಸಿದ್ದೇವೆ ಮತ್ತು ಕಲ್ಯಾಣೋತ್ಸವದ ನಂತರ ಪ್ರಸಾದವನ್ನು ವಿತರಿಸುತ್ತೇವೆ. ಕಲ್ಯಾಣೋತ್ಸವ ಪೂಜೆಯಲ್ಲಿ ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ದಯವಿಟ್ಟು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಇದು ನಮ್ಮೆಲ್ಲರ ಕಾರ್ಯಕ್ರಮವಾಗಿದೆ, ಮುಂದೆ ಪ್ರತಿ ವರ್ಷ ಕಲ್ಯಾಣೋತ್ಸವವನ್ನು ಮಾಡುವ ಆಲೋಚನೆ ಕೂಡ ನಮ್ಮಲ್ಲಿದೆ, ಪ್ರತಿಯೊಬ್ಬ ಭಕ್ತರಿಗೂ ತಿರುಪತಿ ಲಾಡು ಪ್ರಸಾದ ನೀಡುವಲಾಗುವುದು ಎಂದು ನುಡಿದರು.
ಬಂಟರ ಸಂಘದ ಜೊತೆ ಕೋಶಾಧಿಕಾರಿ ಮುಂಡಪ್ಪ ಪಯ್ಯಡೆ ಮಾತನಾಡಿ, ತಿರುಪತಿಯಲ್ಲೂ ನೋಡಲಾಗದಂತ ಈ ಅದ್ದೂರಿಯ ಪೂಜೆ ನಮ್ಮ ಪರಿಸರದಲ್ಲಿ ನಡೆಯುವುದು ಇದೆ. ಆದ್ದರಿಂದ ದೇವರ ಮೇಲೆ ಭಕ್ತಿ ಇಟ್ಟು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮೆಲ್ಲರ ಒಗ್ಗಟ್ಟು ತಿಳಿಸಪಡಿಸುವ ಎಂದು ನುಡಿದರು.
ಬಂಟರ ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಮಾತನಾಡುತ್ತಾ, ತುಳು ಕನ್ನಡಿಗರು ಒಗ್ಗಟ್ಟಾಗಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಯಶಸ್ವಿಗೊಳಿಸೋಣ. ಬೊರಿವಲಿ ಪರಿಸರದಲ್ಲಿ ಪ್ರಥಮ ಬಾರಿ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜನೆ ಆಗುತ್ತಿದೆ. ಒತ್ತಡದ ಕೆಲಸಗಳಿದ್ದರೂ ಅದನ್ನೆಲ್ಲವನ್ನು ಬದಿಗಿಟ್ಟು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀನಿವಾಸನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ನುಡಿದರು.
ಈ ಸಭೆಯ ವೇದಿಕೆಯಲ್ಲಿ ಉಪಸ್ತರಿದ್ದ ಬಂಟರ ಸಂಘದ ಪ್ರಾದೇಶಿಕ ಸಮಿತಿಯ ಪಶ್ಚಿಮ ವಲಯದ ಸಮನ್ವಯಕ್ಕ ಗುಣಪಾಲ್ ಶೆಟ್ಟಿ ಐಕಳ, ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಎಂ. ಜಿ. ಶೆಟ್ಟಿ, ಸಂಚಾಲಕ ರವೀಂದ್ರ ಶೆಟ್ಟಿ, ಕಾರ್ಯದರ್ಶಿ ಅಶೋಕ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯ ಧ್ಯಕ್ಷ ಶೈಲಜಾ ಅಮರನಾಥ್ ಶೆಟ್ಟಿ, ಚಾರ್ಕೋಪ್ ಕನ್ನಡ ಬಳಗದ ಅಧ್ಯಕ್ಷ ಎಂ. ಕೃಷ್ಣ ಶೆಟ್ಟಿ, ಡಾಕ್ಟರ್ ಸತೀಶ್ ಶೆಟ್ಟಿ, ಭಾರತ್ ಬ್ಯಾಂಕಿನ ನಿರ್ದೇಶಕ ಪ್ರೇಮ್ ನಾಥ್ ಕೋಟ್ಯಾನ್, ಬಿಜೆಪಿ ಸೌತ್ ಇಂಡಿಯನ್ ಸೆಲ್ಲಿನ ಪ್ರಭಾಕರ್ ಶೆಟ್ಟಿ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ಕಾರ್ಯಕ್ರಮದ ಯಶಸ್ವಿ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಿದರು.
ಸ್ಥಳೀಯ ಮಾಜಿನಗರ ಸೇವಕ ಶಿವ ಶೆಟ್ಟಿ, ಉದ್ಯಮಿಗಳಾದ ಮನೋಹರ್ ಶೆಟ್ಟಿ, ವಿಜಯ ಭಂಡಾರಿ, ತುಳು ಸಂಘ ಬೊರಿವಲಿಯ ಪದಾಧಿಕಾರಿಗಳು, ಮಹಿಷ ಮರ್ದಿನಿ ದೇವಸ್ಥಾನದ ಟ್ರಸ್ಟಿ ಪ್ರದೀಪ್ ಶೆಟ್ಟಿ, ಇತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಚಾರ್ಕೋಪ್ ಕನ್ನಡ ಬಳಗದ ಕಾರ್ಯದರ್ಶಿ ರಘುನಾಥ್ ಶೆಟ್ಟಿ ನಿರೂಪಿಸಿ
ಈ ಪುಣ್ಯ ಕಾರ್ಯಕ್ರಮ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರವನ್ನು ನೀಡಬೇಕಾಗಿ ವಿನಂತಿ ವಿನಂತಿಸಿಕೊಂಡರು.




Post a Comment