ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಗೋರೆಗಾಂವ್, 58ನೇ ವಾರ್ಷಿಕ ಮಹೋತ್ಸವ ಸಂಭ್ರಮದೊಂದಿಗೆ ಸಂಪನ್ನ
ಮುಂಬಯಿ : ಗೋರೆಗಾಂವ್ ಪೂರ್ವದ ಸಹಕಾರ್ ವಾಡಿ, ವಿರ್ವಾಣಿ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ನಿತ್ಯಾನಂದ ಆಶ್ರಮದ 58ನೇ ವಾರ್ಷಿಕ ಮಹೋತ್ಸವ ಹಾಗೂ ಗುರುಮೂರ್ತಿ ಅಭಿಷೇಕ ಕಾರ್ಯಕ್ರಮವು ಜ. 24 ಮತ್ತು 25ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಜನವರಿ 25ರಂದು ಬೆಳಿಗ್ಗೆ ಮಂಗಳಾರತಿ ಮಧ್ಯಾಹ್ನ ಸಂತರ್ಪಣೆ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶ್ರಮದ ಅಧ್ಯಕ್ಷರಾದ ರಘು ಮೂಲ್ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಭಕ್ತಾಭಿಮಾನಿಗಳು ಇಂದಿನ ಕಾರ್ಯಕ್ರಮಕ್ಕೆ ಸಹಕರಿಸಿದ್ದು ಇನ್ನು ಮುಂದೆಯೂ ಇದೇ ರೀತಿ ಸಹಕರಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಣ್ಯರನ್ನು ಹಾಗೂ 58ನೇ ವಾರ್ಷಿಕ ಮಹೋತ್ಸವ ಕ್ಕೆ ವಿವಿಧ ರೀತಿಯಲ್ಲಿ ಪ್ರೋತ್ಸಾಹಿಸಿದ ಎಲ್ಲರಿಗೂ ಕೃತಜ್ನತೆ ಸಲ್ಲಿಸಿದರು.
ಅತಿಥಿಯಾಗಿ ಉಪಸ್ಥಿತರಿದ್ದ ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್ ಮಾತನಾಡುತ್ತಾ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಗೋರೆಗಾಂವ್ ಇದರ ಅಭಿವೃಗೆ ದಿ. ಜಯ ಸುವರ್ಣರ ವಿಶೇಷ ಕೊಡುಗೆಯಿದೆ. ಇದೀಗ ಅವರ ಪರಿವಾರದವರು ಕ್ಷೇತ್ರದ ಮಾತ್ರವಲ್ಲದೆ ಸಮಾಜದ ಅಬಿವೃದ್ದಿಯ ಬಗ್ಗೆ ಜಯ ಸುವರ್ಣರ ಹಾದಿಯಲ್ಲೇ ನಡೆಯುತ್ತಿರುವುದು ಅಭಿನಂದನೀಯ.ಸದ್ಗುರು ನಿತ್ಯಾನಂದ ಸ್ವಾಮಿ ಯವರು ಮರಿಸುತ್ತಾ ಈ ಆಶ್ರಮದ ಮೂಲಕ ಅಪಾರ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸೇವೆಗಳು ನಡೆಯುತ್ತಿರುವುದು ಅಭಿನಂದನೆಯ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಭಾರತ್ ಬ್ಯಾಂಕಿನ ನಿರ್ದೇಶಕ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಗೌರವ ಅತಿಥಿಗಳಾಗಿ , ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ ಸಾಲ್ಯಾನ್, ನಗರಸೇವಕ ಸ್ವಪ್ನಿಲ್ ತೆಂಬಾವಲ್ಕರ್ ಮತ್ತು ಮಾಜಿ ನಗರ ಸೇವಕಿ ವರ್ಷ ತೆಂಬಾವಲ್ಕರ್, ಮುಂತಾದವರು ಮಾತನಾಡಿ ದೀರ್ಘ್ ಕಾಲದಿಂದ ನಡೆಯುತ್ತಿರುವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಗೋರೆಗಾಂವ್ ಇದರ ಎಲ್ಲಾ ಕಾರ್ಯಕರ್ತರಿಗೆ ಶುಭ ಹಾರೈಸಿದರು.
ಎರಡು ತಿಂಗಳು ನಡೆದ ಪೂಜಾ ಕಾರ್ಯದಲ್ಲಿ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ನಿತ್ಯಾನಂದ ಸ್ವಾಮಿಗಳ ಭಕ್ತರು ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ ಅಮೀನ್ ಮತ್ತು ಪದಾಧಿಕಾರಿಗಳು.
ಸಮಾಜ ಸೇವಕ ನ್ಯಾ ಶಶಿಧರ್ ಕಾಪು. ಮತ್ತಿತರರು ಪಾಲ್ಗೊಂಡ ಪ್ರಸಾದ ಅನ್ನಸಂತರ್ಪಣೆಯನ್ನು ಸ್ವೀಕರಿಸಿದರು.
ಜ. 24ರಂದು ದಿನಪೂರ್ತಿ ಮತ್ತು ರಾತ್ರಿ ಏಕಹಾ ಭಜನೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು, 25ರಂದು ಏಕಹಾ ಭಜನೆ ಮಂಗಳೋತ್ಸವ, ನಂತರ ಸ್ವಾಮಿ ಮೂರ್ತಿ ಅಭಿಷೇಕ ಮತ್ತು ಪಾದುಕ ಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಿತು. ರವೀಂದ್ರ ಸುಂದರ್ ಶೆಟ್ಟಿ ಸಹೋದರರ ಮತ್ತು ಪರಿವಾರದವರ ಪ್ರಾಯೋಜಕತ್ವದಲ್ಲಿ ಮಧ್ಯಾಹ್ನ ಮಹಾಪ್ರಸಾದ ಸಂತರ್ಪಣೆ ನಡೆಯಿತು. ಸಂಜೆ ಸತ್ಯ ನಾರಾಯಣ ಮಹಾಪೂಜಾ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು. ಅನಂತರ ಶ್ರೀ ನಾರಾಯಣಗುರು ಯಕ್ಷಗಾನ ಮಂಡಳಿ ಇವರಿಂದ ತುಳು ಯಕ್ಷಗಾನ "ಅಮರಶಿಲ್ಪಿ ಶಂಭು ಕಲ್ಕುಡ" ಪ್ರದರ್ಶನವಿತ್ತು.
ಪೂಜಾ ಕಾರ್ಯ ಯಶಸ್ವಿಯಾಗುವಲ್ಲಿ ಆಶ್ರಮದ ಗೌರವಾಧ್ಯಕ್ಷರಾದ ಮೋಹನ್ ಜಿ ಪೂಜಾರಿ, ಮುಖ್ಯ ಸಂಚಾಲಕರಾದ ಡಾ. ಶೈಲೇಶ್ ಜಿ, ಉಪಾಧ್ಯಕ್ಷ ಬಾಲಕೃಷ್ಣ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲ್ಯಾನ್, ಕೋಶಾಧಿಕಾರಿ ಗಣೇಶ್ ಮೂಲ್ಯ, ಜೊತೆ ಕಾರ್ಯದರ್ಶಿ ಶಶಿಕಲಾ ಎಸ್. ಕೋಟ್ಯಾನ್, ಜೊತೆ ಕೋಶಾಧಿಕಾರಿ ಬಬಿತಾ ಜೆ ಕೋಟ್ಯಾನ್ ಹಾಗೂ ಸಮಿತಿಯ ಮತ್ತು ಉಪಸಮಿತಿಗಳ ಸರ್ವ ಸದಸ್ಯರು ಎರಡೂ ದಿನಗಳ ಕಾರ್ಯಕ್ರಮಕ್ಕೆ ಸಹಕರಿಸಿದರು.


Post a Comment