ಫೆಬ್ರವರಿ 5 ರಂದು ಐಕಳ ಹರೀಶ್ ಶೆಟ್ಟಿ ಪರಿವಾರದ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಚಿನ್ನದ ರಥೋತ್ಸವದ ಸೇವೆ
ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಸನ್ನಿಧಿಯಲ್ಲಿ ದೇವರ ಚಿನ್ನದ ರಥೋತ್ಸವ ಸೇವೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಹರೀಶ್ ಶೆಟ್ಟಿ ಅವರು ಸೇವಾ ರೂಪದಲ್ಲಿ ನಡೆಸುತ್ತಾ ಬಂದಿದ್ದು ಈ ವರ್ಷದ ಸೇವೆ ಫೆಬ್ರವರಿ 5 ರಂದು ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆಯಲಿದೆ.
ಕಟೀಲು ದುರ್ಗಾಪರಮೇಶ್ವರಿಯ ಮೇಲೆ ಅಪಾರ ಭಕ್ತಿ ಇರುವ ಐಕಳ ಹರೀಶ್ ಶೆಟ್ಟಿ ಅವರು ಯಾವುದೇ ಸೇವಾ ಕಾರ್ಯಗಳನ್ನು ನಡೆಸುವಾಗ ಅವರ ಆರಾಧ್ಯ ದೇವರಾಗಿರುವ ದುರ್ಗಾಪರಮೇಶ್ವರಿ ಮುಂದಿಟ್ಟು ನಡೆಸುತ್ತಾ ಬಂದಿದ್ದಾರೆ. ಅದರಂತೆ ವರ್ಷಪೂರ್ತಿ ದೇವರಿಗೆ ವಿಶೇಷ ಸೇವೆಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ವರ್ಷ ನಡೆಯುವ ಶ್ರೀದೇವಿಯ ಚಿನ್ನದ ರಥೋತ್ಸವ ಮತ್ತು ಬಲಿ ಸೇವೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀದೇವಿಯ ಸಿರಿಮುಡಿ ಶ್ರಿ ಗಂಧ ಪ್ರಸಾದ ಮತ್ತು ಅನ್ನಸಂತರ್ಪಣೆ ಪ್ರಸಾದವನ್ನು ಸ್ವೀಕರಿಸಬೇಕಾಗಿ ಐಕಳ ಹರೀಶ್ ಶೆಟ್ಟಿ, ಚಂದ್ರಿಕಾ ಐಕಳ ಹರೀಶ್ ಶೆಟ್ಟಿ ಮತ್ತು ಕುಟುಂಬಿಕರು ಕೃತಾರ್ಥರಾಗಬೇಕೆಂದು ವಿನಂತಿಸಿಕೊಂಡಿದ್ದಾರೆ.


Post a Comment