ವಸಯಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ದೇವೇಂದ್ರ ಬುನ್ನನ್ ಪೆರ್ಮುದೆ ಆಯ್ಕೆ
ವಸಯಿ : ವಸಯಿ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಸಮಾಜಸೇವಕ, ಹೋಟೆಲ್ ಉದ್ಯಮಿ ದೇವೇಂದ್ರ ಬುನ್ನನ್ ( ಕುಟ್ಟಿನ್ನ) ಪೆರ್ಮುದೆ ಆಯ್ಕೆಯಾಗಿದ್ದಾರೆ.
ವಸಯಿ ಪರಿಸರದ ತುಳು ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೇವೇಂದ್ರ ಬುನ್ನನ್ , ಕಲಾಪೋಷಕ. ಶ್ರೀ ರಜಕ ಸಂಘ ಮುಂಬಯಿಯ ವಸಯಿ - ವಿರಾರ್ ವಲಯದ ಕಾರ್ಯಧ್ಯಕ್ಷರಾಗಿ ರಜಕ ಸಮಾಜದ ಬಂಧುಗಳನ್ನು ಒಗ್ಗಟ್ಟಿಸಿದವರು.
ವಸಯಿ ತಾಲೂಕ ಹೋಟೆಲ್ ಅಸೋಸಿಯೇಷನ್ ನಲ್ಲಿ ಸುಧೀರ್ಘ ಕಾಲದಿಂದ ವಿವಿಧ ಜವಾಬ್ದಾರಿತ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದವರು,ಇವರು ವಸಯಿ ಪರಿಸರದಲ್ಲಿ ತುಳು ಕನ್ನಡಿಗರ ಕೆಲವು ಸಂಘಟನೆಗಳಲ್ಲಿ ಪ್ರಮುಖ ಜವಾಬ್ದಾರಿಯೊಂದಿಗೆ ಕಾರ್ಯನಿರ್ಸುತ್ತಿದ್ದಾರೆ. ಕಲೆಗೆ ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವ ಇವರು ಊರಿನಿಂದ ಆಗಮಿಸುವ ನಾಟಕ ಕಲಾವಿದರಿಗೆ ಮತ್ತು ಯಕ್ಷಗಾನ ಕಲಾವಿದರಿಗೆ ಸದಾ ಸಹಕಾರವನ್ನು ನೀಡುತ್ತಾ ಬಂದವರು. ಸುದೀರ್ಘಕಾಲದಿಂದ ಹೊಸ ಈ ಪರಿಸರದಲ್ಲಿ ಬದುಕು ಕಟ್ಟಿಕೊಂಡು ಉದ್ಯಮವನ್ನು ಬೆಳೆಸುತ್ತಾ ಇಲ್ಲಿಯ ಎಲ್ಲಾ ಸಾಮಾಜಿಕ. ಧಾರ್ಮಿಕ ,ಶೈಕ್ಷಣಿಕ ಸೇವಾ ಕಾರ್ಯಗಳಿಗೆ ದಾನ ರೂಪದ ದೆಲ್ಲಿಗೆಯನ್ನು ನೀಡುತ್ತಾ ಪ್ರೋತ್ಸಾಹವನ್ನು ನೀಡಿದವರು,
ದೇವೇಂದ್ರ ಬುನ್ನನ್ ಅವರು ಕಟೀಲು ಸಮೀಪದ ಪೆರ್ಮುದೆ ಗ್ರಾಮದವರು ರಾಗಿದ್ದು . ಪೆರ್ಮುದೆ ಗ್ರಾಮದಲ್ಲಿ ಕೂಡ ಸಾಮಾಜಿಕ ಶೈಕ್ಷಣಿಕ ಸೇವೆಗಳನ್ನು ಸದ್ದಿಲ್ಲದೆ ಮಾಡಿಕೊಂಡು ಬಂದವರು ಇವರ ಸೇವಾ ಕಾರ್ಯಗಳನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದೆ.
ಇವರ ಸಾಮಾಜಿಕ ಸೇವಾ ಕಾರ್ಯಗಳಿಗೆ ಪತ್ನಿ ಅನಿತಾ ಡಿ ಬುನ್ನನ್ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಪುತ್ರಿ ಶ್ರದ್ಧ ಐರ್ಲೆಂಡ್ ನಲ್ಲಿ ಉನ್ನತ ವ್ಯಾಸಂಗವನ್ನು ಮಾಡಿ ಉದ್ಯೋಗದಲ್ಲಿದ್ದಾರೆ. ಮತ್ತೊಬ್ಬಳು ಪುತ್ರಿ ಭಕ್ತಿ ಉನ್ನತ ವ್ಯಾಸಂಗವನ್ನು ಮಾಡುತ್ತಿದ್ದಾರೆ.

Post a Comment