".

Header Ads

ನಶ್ವರವಾಯ್ತು ಜೀವನ, ಹಣವನ್ನೆಲ್ಲಾ ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ಪಡೆದ ಇಡೀ ಕುಟುಂಬ


ಜೈನ ಧರ್ಮ ತ್ಯಾಗ, ಶಾಂತಿ,ಅಹಿಂಸೆಗೆ ಬದ್ಧ. ಎಲ್ಲ ಧರ್ಮಗಳಿಗಿಂತಲೂ ಕಟ್ಟು ನಿಟ್ಟಿನ ನಿಯಮ ಜೈನ ಧರ್ಮದಲ್ಲಿದೆ. ಈ ಧರ್ಮ ದಾನ ಮಾಡವುದನ್ನು ಪುಣ್ಯ ಎಂದು ಬೋಧಿಸಿದೆ. ಹೀಗಾಗಿ ಜೈನರು ಜನರಿಗೆ ಆಹಾರ, ದನಕರುಗಳಿಗೆ ಮೇವು ದಾನ ಮಾಡುತ್ತಾರೆ. ಸಣ್ಣಪುಟ್ಟ ಕ್ರಿಮಿ, ಕೀಟಗಳ ಕೊಲ್ಲುವುದು ಕೂಡ ಪಾಪ ಎಂದು ಭಾವಿಸಿದ್ದಾರೆ , ಹಿಂದೆ ಜೈನರು ಸಾಕಷ್ಟು ದಾನ, ಧರ್ಮ ಮಾಡುತ್ತಿದ್ದರು. ಈಗ ಕಡಿಮೆಯಾಗಿದೆ. ಜೈನ್ ಹಾಗೂ ಬೌದ್ಧ ಧರ್ಮ ವಿಶ್ವ ಮಾನ್ಯತೆ ಪಡೆದಿವೆ.

  ಅಹಿಂಸೆ ಪಾಲನೆಯೇ ಜೈನ ಧರ್ಮದ ಜೀವಾಳ   ‘ವಿಕಾರಗೊಂಡಿರುವ ಮನುಷ್ಯನ ಮನಸ್ಸನ್ನು ಬದಲಾಯಿಸಿ ಸಂಸ್ಕಾರ ನೀಡಲು  ಕರ್ಮದ ಕಟ್ಟನ್ನು ಮುರಿದು ,ಕರ್ಮ ಬಂಧಗಳಿಂದ ಮುಕ್ತವಾಗಲು  ಗುಜರಾತಿನ ಭುಜ್​ಗೆ ಸೇರಿದ ಒಂದು ಜೈನ ಕುಟುಂಬ ಆಸ್ತಿ-ಪಾಸ್ತಿಯನ್ನೆಲ್ಲಾ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಲು ಹೊರಟಿದೆ 

ಸಾಕಷ್ಟು ಸಿರಿ ಸಂಪತ್ತನ್ನು ಹೊಂದಿದ ಈ ಕುಟುಂಬ ಸಾಕಷ್ಟು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಕೂಡ ಸಂಪಾದಿಸಿದೆ. ಇಡೀ ಕುಟುಂಬ ಸಂತೋಷವಾಗಿದೆ. ಆದರೆ ಇದ್ಯಾವುದೂ ಅವರಿಗೆ ತೃಪ್ತಿ ನೀಡುತ್ತಿಲ್ಲವಂತೆ. ಆದ್ದರಿಂದಲೇ ತಮ್ಮ ಆಸ್ತಿ-ಪಾಸ್ತಿಯನ್ನೆಲ್ಲಾ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುತ್ತಿದ್ದಾರೆ.

ಭುಜ್‌ನ ವಗಡ ಪ್ರದೇಶದ ಪಿಯೂಷ್ ಕಾಂತಿಲಾಲ್ ಮೆಹ್ತಾ ಮತ್ತು ಪೂರ್ವಿಬೆನ್ ದಂಪತಿ ಹಾಗೂ ಅವರ ಮಕ್ಕಳಾದ ಮೇಘಕುಮಾರ ಸನ್ಯಾಸ ಧೀಕ್ಷೆ ಪಡೆಯಲು ಸಜ್ಜಾಗಿದ್ದಾರೆ. ಪಿಯೂಷ್ ಭುಜ್‌ನಲ್ಲಿ ರೆಡಿಮೇಡ್ ಬಟ್ಟೆಗಳ ಸಗಟು ವ್ಯಾಪಾರವನ್ನು ಹೊಂದಿದ್ದು, ಇದರ ವಾರ್ಷಿಕ ವಹಿವಾಟು ಸುಮಾರು ಕೋಟಿ ಗಟ್ಟಲೇ ಇದೆ.


ಇಷ್ಟು ಹಣವಿದ್ದರೂ ಕೂಡ ಅದೆಲ್ಲವನ್ನೂ ತೊರೆದು, ಇಡೀ ಕುಟುಂಬ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲಿದೆ. ಪಿಯೂಷ್ ಅವರ ಪತ್ನಿ ಪೂರ್ವಿಬೆನ್ ಅವರು ಮಹಾಸತಿ ಜಿ ಅವರ ಸಮ್ಮುಖದಲ್ಲಿ ಮೊದಲು ಈ ಆಲೋಚನೆ ಮಾಡಿದ್ದಾರೆ. ನಂತರ ಪತಿ ಮತ್ತು ಮಗನಿಗೆ ವಿಷಯ ತಿಳಿಸಿ ಅವರನ್ನು ಒಪ್ಪಿಸಿದ್ದಾರೆ.

ಪೂರ್ವಿಬೆನ್ ಅವರ ಸಹೋದರನ ಮಗ ಕೃಷ್ಣಕುಮಾರ್ ಕೂಡ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ನಾಲ್ವರೂ ಶೀಘ್ರದಲ್ಲೇ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಸನ್ಯಾಸತ್ವ ಬಯಸುವ ವ್ಯಕ್ತಿಗಳು ತಮ್ಮ ಎಲ್ಲಾ ಆಸ್ತಿಯನ್ನು ತ್ಯಜಿಸಬೇಕು. ಎಲ್ಲವನ್ನೂ ದಾನ ಮಾಡಬೇಕು. ಇವರೆಲ್ಲರೂ ಔಪಚಾರಿಕವಾಗಿ ಶ್ರೀ ಕೋಟಿ ಸ್ಥಾನವಾಸಿ ಜೈನ ಸಂಘದ ಆಶ್ರಯದಲ್ಲಿ ಭಗವತಿ ದೀಕ್ಷೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಪಿಯೂಷ್ ಕುಟುಂಬಸ್ಥರು ತಮ್ಮ ಆಸ್ತಿಯನ್ನೆಲ್ಲ ದಾನ ಮಾಡಿ ಸನ್ಯಾಸ ದೀಕ್ಷೆ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಏರ್ಪಾಡು ಮಾಡುತ್ತಿದ್ದಾರೆ. ಅಜರಾಮರ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ನಾಲ್ವರು ಸನ್ಯಾಸ ಸ್ವೀಕರಿಸಲು ನಿರ್ಧರಿಸಿರುವುದು ಕ್ಷೇತ್ರದ ಜೈನ ಸಮುದಾಯದಲ್ಲಿ ಸಂತಸ ಮೂಡಿಸಿದೆ. 

 

Powered by Blogger.