".

Header Ads

ತುಳುಕೂಟ ಫೌಂಡೇಶನ್ ನಾಲಾಸೋಪಾರ ಮತ್ತು ಶ್ರೀದೇವಿ ಯಕ್ಷಕಲಾ ನಿಲಯ ಇದರ ಜಂಟಿ ಆಶ್ರಯದಲ್ಲಿ.. ನಾಲಾಸೋಪಾರದಲ್ಲಿ ಸಾಂಸ್ಕೃತಿಕ ಕಲಾ ವೈಭವ ಉದ್ಘಾಟನೆ


ತುಳುಕೂಟ ಫೌಂಡೇಶನ್ ತುಳು ಭಾಷೆ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವಲ್ಲಿ ಶ್ರಮಿಸುತ್ತಿದೆ - ಶಶಿಧರ ಕೆ. ಶೆಟ್ಟಿ ಇನ್ನಂಜೆ   

 ಚಿತ್ರ ವರದಿ ದಿನೇಶ್ ಕುಲಾಲ್ 


ಮುಂಬಯಿ ; ಕರ್ನಾಟಕ ತುಳು ಸಾಹಿತ್ಯ ಅಕಾಡಿಮಿ ಪ್ರಶಸ್ತಿ ವಿಜೇತ  ತುಳುಕೂಟ ಫೌಂಡೇಶನ್ ನಾಲಾಸೋಪಾರ ಮತ್ತು  ಶ್ರೀದೇವಿ ಯಕ್ಷಗಾನ ಕಲಾನಿಲಯ ದ ಜಂಟಿ ಆಶ್ರಯದಲ್ಲಿ ಫೆ. 11ರಂದು ಸಾಂಸ್ಕೃತಿಕ ಕಲಾ ವೈಭವ,  ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರಧಾನ  ಕಾರ್ಯಕ್ರಮಗಳು   ನಲಾಸೋಪಾರ ಪೂರ್ವ  , ಫಯರ್ ಬ್ರಿಗೆಡ್ ಹತ್ತಿರ, ಬೃಂದಾವನ ಗಾರ್ಡನನ ವದುರ್ಗ ಮೈದಾನ,   ಕಾಶಿ ಬಾಬು ಶೆಟ್ಟಿ ಸಭಾಂಗಣದ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ಎರಡು ಸಂಸ್ಥೆಗಳ ಅಧ್ಯಕ್ಷರಾದ ಶಶಿಧರ ಕೆ. ಶೆಟ್ಟಿ ಇನ್ನಂಜೆ   ಅಧ್ಯಕ್ಷತೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು .















ಅಧ್ಯಕ್ಷತೆಯನ್ನು ವಹಿಸಿದ ಎರಡೂ ಸಂಘಟನೆಗಳ ಅಧ್ಯಕ್ಷರಾದ ಶಶಿಧರ ಕೆ. ಶೆಟ್ಟಿ ಮಾತನಾಡುತ್ತಾ ನಮ್ಮ ಸಂಸ್ಥೆಯನ್ನು ಪರಿಸರದ ತುಳು ಕನ್ನಡಿಗರು ಬೆಳೆಸಿದ್ದಾರೆ. ಸ್ವಂಥ ಕಾರ್ಯಾಲವನ್ನು ಮಾಡಲು ನಿರ್ಣಯ ತೆಗೆದುಕೊಂಡ ಕೂಡಲೇ ಪರಿಸರದ ದಾನಿಗಳಿಂದ 30 ಲಕ್ಷ ರೂಪಯಿ ದೇಣಿಗೆ ಸಂಗ್ರಹಗೊಂಡಿದೆ. ಇದು ನಮ್ಮ ಸಂಘಟನೆಗಳ ಮೇಲಿಟ್ಟ ಅಭಿಮಾನವಾಗಿದೆ. ನಮಗೆ ಈ ಕಾರ್ಯಕ್ರಮದಲ್ಲಿ ಸಾಧಕರು ಬೇಕಾಗಿತ್ತು. ಅವರೆಲ್ಲರೂ ಇಂದು ಸೇರಿಕೊಂಡಿದ್ದಾರೆ. ದೇಣಿಗೆ ಸಂಗ್ರಕ್ಕಾಗಿ ಉನ್ನತ ಮಟ್ಟದ ವ್ಯಕ್ತಿಗಳನ್ನು ಕರೆಸಿಲ್ಲ. ಎಲ್ಲರೂ ಸಮಯವನ್ನು ಮಾಡಿಕೊಂಡು ನಮ್ಮ ತುಳುವರ ಮೇಲಿನ ಅಭಿಮಾನದಿಂದ ಬಂದಿದ್ದರೆ. ಈ ಪರಿಸರದ ಮಕ್ಕಳು ಯಕ್ಷಗಾನ, ಭಜನೆ , ಕಲಿಯುದಕ್ಕೆ ಬರಬೇಕಿದ್ದರೆ ಅದಕ್ಕೆ ಪಾಲಕರು ಪ್ರೋತ್ಸಹ ನೀಡಿದ್ದಾರೆ ಅವರೆಲ್ಲರಿಗೂ ನಾವು ಕೃತಜ್ನತೆ ಸಲ್ಲಿಸುತ್ತಿರುವೆವು ಎಂದರು.
 
ಮುನಿಯಾಲು ಉದಯಕೃಷ್ಣ ಚಾರೀಟೀಬಲ್ ಟ್ರಷ್ಟ ನ ಪ್ರವರ್ಥಕ ಉದಯಶೆಟ್ಟಿ ಮುನಿಯಾಲು ಮಾತನಾಡುತ್ತಾ ನಾವು ಮಹಾರಾಷ್ಟ್ರದಲ್ಲಿದ್ದೇವೋ ಅಥವಾ ಊರಲ್ಲಿದ್ದೇವೋ ಅಂತಹ ವಾತಾವರಣವನ್ನು ನಿರ್ಮಿಸಿದ್ದಾರೆ. ಶಶಿಧರ ಶೆಟ್ಟಿಯವರು ಊರಿನ ಉಂಡಾರು ವಿಷ್ನುಮೂರ್ತಿ ದೇವಸ್ಥಾನದಲ್ಲಿಯೂ ಕೂಡಾ ದೊಡ್ಡ ಮಟ್ಟದ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಪರಿಸರದಲ್ಲಿ ಕೂಡಾ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ತುಳುವಿನಷ್ಟು ಶಕ್ತಿ ಯಾವ ಬಾಷೆಗಿಲ್ಲ ಅದು ನಮ್ಮನ್ನು ಒಗ್ಗೂಡಿಸುತ್ತದೆ. ಅದು ನಮ್ಮ ಹಿರಿಯರಿಂದ ಬಂದಿದೆ ಎಂದರು. 

ತುಂಗಾ ಹಾಶ್ಪಿಟಲಿನ ಆಡಳಿತ ನಿರ್ದೇಶಕ ಡಾ, ಸತೀಷ್ ಶೆಟ್ತಿ ಮಾತನಾಡುತ್ತಾ ತುಳು ಬಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿದ್ದು ತುಳು ಸಂಘಟನೆ. ನಮ್ಮ ಹಾಶ್ಪಿಟಲ್ ಎತ್ತರಕ್ಕೆ ಬೆಳೆಯಲು ತುಳು ಕನ್ನಡಿಗರ ಕೊಡುಗೆಯಿದೆ. ಶಶಿಧರ ಶೆಟ್ತಿಯವರ್ ಬಾಂದವ್ಯ ನಮ್ಮ ಮನೆಯಲ್ಲಿ ಸದಾ ನೆನಪಾಗಿ ಉಳಿದಿದೆ.ಈ ಪರಿಸರದ ತುಳುವರಿಗೆ ವೈದ್ಯಕೀಯ ಸೇವೆ ನೀಡಲು ನಮ್ಮ ಬೆಂಬಲವಿದೆ ಎಂದರು.
 
ಅತಿಥಿಯಾಗಿ ಪಾಲ್ಗೊಂಡಿದ್ದ ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ. ಎ. ಸುರೇಂದ್ರ ಶೆಟ್ಟಿ  ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ತುಳುವರನ್ನು ಒಗ್ಗೂಡಿಸಿ ಅವರ ಶ್ರಮಿಸುತ್ತಿದೆ ಈ ಪರಿಸರದ ಮಕ್ಕಳಿಗೆ ಭಜನೆ ಯಕ್ಷಗಾನ ಗಳನ್ನು ತರಬೇತಿಗೊಳಿಸಿ ಅವರನ್ನು ಪ್ರಬುದ್ಧ ಕಲಾವಿದರನ್ನಾಗಿ ಮಾಡಿಸಿದರ ಮೂಲಕ ಅವರಿಗೆ ನಮ್ಮ ಸಂಸ್ಕಾರವನ್ನು ತಿಳಿಯಪಡಿಸುತ್ತಿದ್ದಾರೆ ಎಂದು ನುಡಿದರು, 

 ಬಿಲ್ಲವರ ಅಸೋಸಿಯೇಷನ್ ಮುಂಬಯಿ ಹರೀಶ್ ಅಮೀನ್ ಮಾತನಾಡುತ್ತಾ ಶಶಿಧರ್ ಶೆಟ್ಟಿ ಅವರು ಈ ಪರಿಸರದಲ್ಲಿ ಎಲ್ಲಾ ಜಾತಿ ಬಾಂಧವರಿಗೆ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ ,ನಮ್ಮ ಸಮಾಜದ ಬಂಧುಗಳು ಈ ಪರಿಸರದಲ ಬಹಳಷ್ಟು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅವರಿಗೆ ಸಹಕಾರವನ್ನು ಶಶಿಧರ್ ಶೆಟ್ಟಿ ನೀಡುತ್ತಾ ಬಂದಿದ್ದಾರೆ. ಬಿಲ್ಲವರ   ಅಸೋಸಿಯೇಷನ್ ಈ ಪರಿಸರದ ಸಲಿಯ  ಕಚೇರಿಯ ಸದಸ್ಯರು ಸದಾ ನಿಮ್ಮೊಂದಿಗೆ ಇದ್ದಾರೆ ಎಂದರು.

 ಕ್ಲಾಸಿಕ್ ಗ್ರೂಪ್ ಆಫ್ ಹೋಟೆಲ್ ಸುರೇಶ್ ಕಾಂಚನ್ ಮಾತನಾಡುತ್ತಾ ಗ್ರಾಮೀಣ ಪ್ರದೇಶವಾಗಿರುವ ವಸಯ್ಈ  ಪರಿಸರದಲ್ಲ  ತುಳು ನಾಡಿನ ಜಾತ್ರೆಯನ್ನು ಹೆಚ್ಚಿಸಿದ್ದಾರೆ, ಶಶಿಧರ್ ಶಶಿಧರ್ ಶೆಟ್ಟಿ ಅವರ ಪ್ರೀತಿ ನೀತಿ ಅವರ ಸೇವಾಕಾರಿಗಳು ಈ ಸಂಘಟನೆಗೆ ಬಲತಂದಿದೆ ಈ ಕಾರ್ಯಕ್ರಮವನ್ನು ನೋಡಿದಾಗ ಮಂಗಳೂರು ಉಡುಪಿಯ ನೆನಪಾಗುತ್ತಿದೆ ,  ಮಹಾನಗರದಲ್ಲಿ ನಮ್ಮವರು ಸಂಘಟನೆಗಳನ್ನು ಕಟ್ಟಿ ಸಮಾಜದ ಕೆಲಸಗಳನ್ನು ಬಹಳ ಅರ್ಥಪೂರ್ಣವಾಗಿ ಮಾಡುತಿದ್ದಾರೆ , ಬಹಳಷ್ಟು ಜನ ಉದ್ಯಮಿಗಳು ಮನೆಯನ್ನು ಕುಟುಂಬವನ್ನು ಬಲಿಷ್ಠವಾಗಲು ಬಯಸುತ್ತಿದ್ದಾರೆ. ಆದರೆ ಸಮಾಜದ ಬಂಧುಗಳಿಗೆ ಸಹಕಾರ ನೀಡುವ ಜವಾಬ್ಧಾರಿ ಕಡಿಮೆ, ನಾವೆಲ್ಲರೂ ಸಮಾಜದ ಋಣ ಸಂದಾಯದ ಕೆಲಸವನ್ನು ಮಾಡಬೇಕು.

  ಕರ್ನಾಟಕ ಮಲ್ಲ ಪತ್ರಿಕೆ ಸಂಪಾದಕರು ಚಂದ್ರಶೇಖರ ಪಾಲೇತಾಡಿ  ನಮ್ಮ ನಾಡಿನ ಭಾಷೆ ಸಂಸ್ಕೃತಿಯನ್ನು ಉಳಿಸುವಲ್ಲಿ ಈ ಪರಿಸರದ ಶಶಿಧರ್ ಶೆಟ್ಟಿ ಅವರು ಪರಿಶ್ರಮ ಬಹಳಷ್ಟಿದೆ. ನಾವು ನಾವು ನಮ್ಮತನವನ್ನು ಉಳಿಸುವಲ್ಲಿ ಹೆಚ್ಚು ಸಕ್ರಿಯರಾಗಬೇಕು ಎಂದು ನುಡಿದರು.

  ಉದಯವಾಣಿ ಪತ್ರಿಕೆ ಮುಂಬಯಿ ಸಂಪಾದಕರು  ಡಾ. ದಿನೇಶ್ ಶೆಟ್ಟಿ ರೆಂಜಾಳ ಈ ಪರಿಸರಕ್ಕೆ ನಾನು ಮೊದಲ ಬಾರಿ ಬಂದಿದ್ದೇನೆ ಇಲ್ಲಿಯ ಜನ ಸಾಗರವನ್ನು ಕಂಡಾಗ ಬಹಳ ಸಂತೋಷವಾಗಿದೆ, ಶಶಿಧರ್ ಶೆಟ್ಟಿ ಯವರು ಪರಿಸರದ ಜನರಿಗೆ ಸಿಎಂ ಆಗಿದ್ದಾರೆ ಅಂದರೆ ಕೋಮನ್ ಮ್ಯಾನ್ ಸಾಮಾನ್ಯ ಸೇವಕರಾಗಿ ಸಂಸ್ಥೆಯ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ನುಡಿದರು.
 
ವೇದಿಕೆಯಲ್ಲಿ ಅಶೋಕ್ ಇಂಡಷ್ಟ್ರೀಸ್ ನ ಮಾಲಕರಾದ ಅಶೋಕ ಶೆಟ್ತಿ, ಸಂಸ್ಥೆಯ ಗೌರವಧ್ಯಕ್ಷರುಗಳಾದ ರಮೇಶ್ ಶೆಟ್ಟಿ ಕಾಪು, ಓಮಯ್ಯ ಪೂಜಾರಿ, ಸಲಹಾ ಸಮಿತಿಯ ಹರೀಶ್ ಶೆಟ್ಟಿ ಗುರ್ಮೆ, ಉಪಾಧ್ಯಕ್ಷ ಮಂಜುನಾಥ ಶೆಟ್ಟಿ ಕೊಡ್ಲಾಡಿ, ಕಾರ್ಯದರ್ಶಿ ಲ. ಕೃಷ್ಣಯ್ಯ ಹೆಗ್ಡೆ, ಕೋಶಾಧಿಕಾರಿ ಜಗನ್ನಾಥ ಡಿ. ಶೆಟ್ಟಿ ಪಳ್ಳಿ,  ಜೊತೆ ಕಾರ್ಯದರ್ಶಿ ನಾರಾಯಣ್ ಎಂ ಶೆಟ್ಟಿ, ಜೊತೆ ಕೋಶಾಧಿಕಾರಿ ರಾಜೇಶ್  ವೈ ಕರ್ಕೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ  ಉಮಾ ಸತೀಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಹರ್ಷಿತ್ ಕುಂದರ್, ಶ್ರೀನಿವಾಸ ನಾಯ್ಡು, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರ್, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ  ದೇವೇಂದ್ರ ಬುನ್ನನ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಅಡ್ವೆ,  ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ  ಗಣೇಶ್ ಸುವರ್ಣ, ತುಳುಕೂಟ ಫೌಂಡೇಶನ್ ನಾಲಾಸೋಪಾರ ಇದರ ಟ್ರಸ್ಟಿಗಳು,  ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ದೇವೇಂದ್ರ ಬುನ್ನನ್ ಸ್ವಾಗತಿಸಿದರು. ಪ್ರವೀಣ್ ಶೆಟ್ಟಿ ಕಣ್ಂಜಾರ್ ಮತ್ತು ವಿಜಯ್ ಶೆಟ್ಟಿ ಕುತ್ತೆತ್ತುರು ಕಾರ್ಯಕ್ರಮ ನಿರೂಪಿಸಿದರು. 


===

ಎಲ್ಲ ಸಮುದಯಗಳಿಗೆ ತುಳು ಕೂಟ ಫೌಂಡೇಶನ್ ಆಶಯವಾಗಿದೆ - ಐಕಳ ಹರೀಶ್ ಶೆಟ್ಟಿ

 ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದ  ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಯವರು ಮಾತನಾಡುತ್ತಾ ಈ ಎರಡು ಸಂಸ್ಥೆಗಳನ್ನು ನನ್ನಿಂದಲೇ ಉದ್ಘಾಟಿಸ ಲಾಗಿದೆ ಇದು ಈಗ ಈ ಪರಿಸರದ ಎಲ್ಲಾ ಸಮಾಜದ ಎಲ್ಲಾ ಭಾಷೆಗರ ಬಂಧುಗಳಿಗೆ ಆಶ್ರಯವಾಗಿ ಅವರ ಆಶೋತ್ತರಗಳಿಗೆ ಸ್ಪಂದಿಸುವ ಸಂಸ್ಥೆಯಾಗಿ ನಮ್ಮ ನಾಡಿನ ತುಳು ಭಾಷೆ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವಲ್ಲಿ ಶ್ರಮಿಸುತ್ತಿರುವ ಇದನ್ನು ಕಂಡಾಗ ಸಂತಸವಾಗುತ್ತಿದೆ, ಶಶಿಧರ್ ಶೆಟ್ಟಿ ಅಂತ ಸಂಘಟನಾ ಶಕ್ತಿ ನಿಮ್ಮೊಂದಿಗೆ ಎಲ್ಲಾ ಸೇವಾ ಕಾರ್ಯಗಳಲ್ಲಿ ಭಾಗಿಯಾಗುವುದನ್ನು ಕಂಡಾಗ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠ ವಾಗಲಿದೆ, ಈ ಪರಿಸರದ ತುಳು ಕನ್ನಡಿಗರಿಗೆ ಈ ಸಂಸ್ಥೆ ಇನ್ನಷ್ಟು ಸೇವ ಮಾಡುವ ಸಂಸ್ಥೆಯಾಗಿ ಬೆಳೆಯಲಿ ಶಶಿಧರ್ ಶೆಟ್ಟಿ ಅಂತ ದಾನಿ ಈ ಪರಿಸರದಲ್ಲಿ ಇನ್ನಷ್ಟು ಬೆಳೆದು ನಿಲ್ಲಲಿ ದಿನಪೂರ್ತಿ ನಡೆಯುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಆಶಿಸಿದರು.

==

ತುಳು ಭಾಷೆ ತುಳುವರನ್ನು ಒಟ್ಟುಗೂಡಿ- ಶಶಿಧರ ಶೆಟ್ಟಿ ಬರೋಡ 

ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಮಾತನಾಡುತ್ತಾ  ಈ ಗ್ರಾಮೀಣ ಪ್ರದೇಶದ ತುಳುವರಿಗೆ ಆಶ್ರಯವಾಗಿ ನಿಂತಿರುವ ತುಳುಕೋಟ ಫೌಂಡೇಶನ್ ತುಳುವರಿಗೆ ಸಹಕಾರ ನೀಡುತ್ತಾ ಸ್ವಂತ ಜಾಗವನ್ನು ಖರೀದಿಸಿದೆ . ಜಾತೀಯ ಸಂಘಟನೆಗಳಿಗೆ ಸ್ವಂತ ಕಚೇರಿಯನ್ನು ಖರೀದಿಸಲು ಸುಲಭ ಆದರೆ ತುಳು ಸಂಘಟನೆಗಳಿಗೆ ಸ್ವಂತ ಜಾಗವನ್ನು ಖರೀದಿಸಲು ಬಹಳ ಕಷ್ಟ ಅದಕ್ಕೆ ದಾನಿಗಳು ಅಗತ್ಯವಾಗಿ ಬೇಕಾಗುತ್ತದೆ ಆದ್ದರಿಂದ ಈ ಸಂಸ್ಥೆ ಸ್ವಂತ ಜಾಗವನ್ನು ಖರೀದಿಸಿ ತಮ್ಮ ಸೇವ ಕಾರ್ಯಗಳನ್ನು ಅಲ್ಲಿ ನಡೆಸಲು ಅನುಕೂಲ ಮಾಡಿದೆ. ಜಾತಿಯ ಸಂಘಟನೆಗಳು ಬಲಿಷ್ಠಗೊಳ್ಳಲು ಸಮಾಜ ಬಂದುಗಳು ಸಹಕಾರಿ ಆಗುತ್ತಾರೆ ಆದರೆ ತುಳು ಸಂಘ  ಬೆಳೆಯಬೇಕಾದರೆ ತುಳುವರು ಸಹಕಾರ ನೀಡಬೇಕು . ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಭಾಷೆಗಳು ಒಂದು ತುಳು ಮತ್ತೊಂದು ಕನ್ನಡ ನಾವು ಬಾಲ್ಯದಲ್ಲಿ ಇರುವಾಗ ತುಳು ಭಾಷೆಯ ಮೇಲೆ ನಮಗೆ ಅಪಾರವಾದ ಗೌರವಿರುತ್ತದೆ ಬೆಳೆದಂತೆ ನಾವು ಬೇರೆ ಬೇರೆ ಸಂಘಟನೆಯಲ್ಲಿ ತೊಡಗಿಕೊಂಡ ಮೇಲೆ ನಮ್ಮ ಭಾಷೆ  ಮಾತುಗಳು ಕುಂಠಿತವಾಗುತ್ತದೆ ಆದರೆ ನಮ್ಮೆಲ್ಲರನ್ನು ಒಟ್ಟುಗೂಡಿಸುವ ಭಾಷೆ ಎಂದರೆ ತುಳು ಭಾಷೆ . ತುಳು ಭಾಷೆಯನ್ನು ಎರಡನೇ ರಾಜ್ಯ ಭಾಷೆಯಾಗಿ ಸರಕಾರ ಪರಿಗಣಿಸುವ ಸಿದ್ದತೆ ಮಾಡಿದೆ ಎಂದರು.
Powered by Blogger.