".

Header Ads

ನಿಟ್ಟೆ : ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು


ಕಾರ್ಕಳ ತಾಲೂಕಿನ ಪಾದೆಮನೆ ಕೈಲಾಜೆಯ ಮನೆಯೊಂದರಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ದೋಚಿದ ಘಟನೆ ನಡೆದಿದೆ.

ರಾಘವೇಂದ್ರ ಭಟ್ ಎಂಬುವವರ ಮನೆಗೆ  ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ 4,92,000/- ರೂಪಾಯಿ ಮೌಲ್ಯದ ಸುಮಾರು 164 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 5,500/- ರೂಪಾಯಿ ನಗದು ಹಣ ಕಳವುಗೈದಿದ್ದಾರೆ.

ಬೆಳಿಗ್ಗೆ 10:30 ಗಂಟೆಯಿಂದ 11:30 ಗಂಟೆಯ ನಡುವೆ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.

ಇತ್ತೀಚೆಗೆ ಹಲವು ಕಡೆ ಕಳ್ಳತನ, ಮೋಸ ದಂತಹ ಘಟನೆಗಳು ನಡೆಯುತ್ತಿದ್ದು ಜನತೆ ಭಯದಿಂದ ಬದುಕುವಂತಾಗಿದೆ. ಸಾರ್ವಜಕರು ಜಾಗರೂಕತೆಯಿಂದ ಜೀವನ ನಡೆಸಬೇಕಾಗಿದೆ...

Powered by Blogger.