ಅಂಕಪಟ್ಟಿ ಕೊಡಲು ವಿಳಂಬ ಮಾಡಿದ್ರು ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಮಹಿಳಾ ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಫೆಬ್ರವರಿ 20 ರಂದು ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ವಿಮುಕ್ತ ಶರ್ಮಾ ಮೇಲೆ ಮಾಜಿ ವಿದ್ಯಾರ್ಥಿ ಅಶುತೋಷ್ ಶ್ರೀವಾಸ್ತವ (24) ಎಂಬಾತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.
ಈ ವೇಳೆ ದೇಹ ಶೇ. 90ರಷ್ಟು ಸುಟ್ಟ ಗಾಯಗಳಾಗಿತ್ತು. ಕೂಡಲೇ ಅವರನ್ನು ಚೋಯಿತ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಇಂದು (ಶನಿವಾರ) ಮುಂಜಾನೆ 4 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅವರ ಸಹೋದರ ಅರವಿಂದ್ ತಿವಾರಿ ತಿಳಿಸಿದ್ದಾರೆ.
Post a Comment