".

Header Ads

ಮೊಗವೀರ ಸಮಾಜದ ಯುವ ಉದ್ಯಮಿ ಸಾಯಿಪ್ರಸಾದ್ ಕಾಂಚನ್ ಅವರಿಗೆ ಭಾರತ್ ಗೌರವ್ ಪ್ರಶಸ್ತಿ


ಫೆ 2. ರಂದು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸೆಮಿನಾರ್‌ನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ವೈಯಕ್ತಿಕ ಕೊಡುಗೆಗಾಗಿ ಮುಂಬಯಿಯ  ಪಂಚವಟಿ ವಾಲ್ವ್ಸ್ ಮತ್ತು  ಫ್ಲೇಂಜಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಮೊಗವೀರ ಸಮಾಜದ ಹಿರಿಯ   ಉದ್ಯಮಿ, ದಾನಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈಯ ಮತ್ತು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಹಿರಿಯ ಸದಸ್ಯರಾಗಿರುವ ಶ್ರೀನಿವಾಸ್ ಕಾಂಚನ್ ಅವರ ಪುತ್ರ  ಸಾಯಿಪ್ರಸಾದ್ ಅವರಿಗೆ "ಭಾರತ್ ಗೌರವ್" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಶ್ರೀನಿವಾಸ್ ಕಾಂಚನ್ ಅವರು ಕಳೆದ 32 ವರ್ಷಗಳಿಂದ ನಾಸಿಕ್‌ನಲ್ಲಿ ಉದ್ಯಮವನ್ನು ನಡೆಸುತ್ತಿದ್ದು ಅವರ ಉದ್ದಿಮೆಯಲ್ಲಿ ಅವರ ಪುತ್ರನ ಸಾಯಿಪ್ರಸಾದ್ ಅವರ ಕೊಡುಗೆಯನ್ನು ಗಮನಿಸಿ ಜ. 30 ರಂದು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸೆಮಿನಾರ್ ನಲ್ಲಿ ಈ ಪ್ರಶಸ್ತಿಯನ್ನು ಪ್ರಧಾನಿಸಲಾಯಿತು.

ಸಾಯಿ ಪ್ರಸಾದ್ ಅವರ ಸಾಧನೆಗೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಪದಾಧಿಕಾರಿಗಳು ಮತ್ತು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ ಅಧ್ಯಕ್ಷ ರಾಜು  ಮೆಂಡನ್ ವನ್ಸ್. ಗೋಪಾಲ್ ಪುತ್ರನ್. ಸಂತೋಷ್ ಪುತ್ರನ್ .ಅಭಿನಂದನೆ ಸಲ್ಲಿಸಿರುವರು
Powered by Blogger.