ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಡೆಲಿವರಿ ಕೊಡಲು ಬಂದಿದ್ದವನು ೨ ವಸ್ತುಗಳನ್ನು ತಂದು ಕೊಟ್ಟಿಲ್ಲ ಎಂದು ಕ್ಯಾತೆ ತೆಗೆದ ಮಹಿಳೆಯೊಬ್ಬಳು ಆತನಿಗೆ ಚಪ್ಪಲಿಯಿಂದ ಹೊಡೆದಿರುವ ಪ್ರಕರಣವು ಹೆಬ್ಬುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೆಸ್ಟೀಜ್ ಸನ್‌ರೈಸ್ ಪಾರ್ಕ್ ನಾರ್ವುಡ್ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.
ಈ ಪ್ರಕರಣವು ಕನ್ನಡ-ಹಿಂದಿ ಸಂಘರ್ಷಕ್ಕೂ ಕಾರಣವಾಗಿದೆ. ಉತ್ತರ ಭಾರತದ ಮಹಿಳೆ ಅವಾಚ್ಯವಾಗಿ ನಿಂದಿಸಿದ್ದಾಳೆ ಎಂದು ಆರೋಪ ಕೇಳಿಬಂದಿದ್ದು, ಪೊಲೀಸ್ ಠಾಣೆ ಮುಂದೆ ಪ್ರತಿಭಟನೆಯೂ ನಡೆದಿದೆ.
ವೀರೇಶ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ಮಹಿಳೆ ಶ್ರೀನಿ ಎಂಬಾಕೆ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಡೆಲಿವರಿ ಬಾಯ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಹಿಳೆ ಕ್ಷಮೆ ಕೋರಬೇಕೆಂದು ಆಗ್ರಹಿಸಿ, ಅಪಾರ್ಟ್ಮೆಂಟ್ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಇದರಿಂದ ಹೆದರಿದ ಮಹಿಳೆ ಅಪಾರ್ಟ್ಮೆಂಟ್‌ನಿಂದ ಕಾಲ್ಕಿತ್ತಿದ್ದಾರೆ.

Post a Comment