".

Header Ads

ಫೋನ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್

 


ಭಾರತದ ಅತಿ ದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾದ ಫೋನ್ ಪೇ ವಿದೇಶಗಳಲ್ಲಿಯೂ ತನ್ನ ಸೇವೆ ಆರಂಭಿಸಿದೆ.

ಯುಪಿಐ ಆಧಾರಿತ ಹಣ ವರ್ಗಾವಣೆ ಆಪ್ ಫೋನ್ ಪೇ ವಿದೇಶದಲ್ಲೂ ಹಣ ಪಾವತಿಸುವ ವೈಶಿಷ್ಟವನ್ನು ಬಳಕೆದಾರರಿಗೆ ಪರಿಚಯಿಸಿದೆ.

ಈ ಮಾದರಿಯ ಸೇವೆ ಒದಗಿಸುತ್ತಿರುವ ದೇಶದ ಮೊದಲ ಆಪ್ ಎಂಬ ಹಿರಿಮೆಗೆ ಫೋನ್ ಪೇ ಪಾತ್ರವಾಗಿದೆ.

ಅಂತರರಾಷ್ಟ್ರೀಯ ಡೆಬಿಟ್ ಕಾರ್ಡ್ ರೀತಿಯಲ್ಲಿಯೇ ಫೋನ್ ಪೇ ಕಾರ್ಯ ನಿರ್ವಹಿಸಲಿದೆ. ಈ ಅಪ್ಲಿಕೇಶನ್ ಬಳಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿದೇಶಗಳಲ್ಲಿ ಹಣ ಪಾವತಿಸಿದಾಗ ಅಲ್ಲಿನ ಹಣದ ಮೌಲ್ಯವೇ ಸಂದಾಯವಾಗುತ್ತದೆ. ಇದರಿಂದ ವಿದೇಶಿ ಪ್ರಯಾಣ ಕೈಗೊಳ್ಳುವ ಭಾರತೀಯರಿಗೆ ಅನುಕೂಲವಾಗಲಿದೆ. ಆರಂಭಿಕವಾಗಿ ಸಿಂಗಾಪುರ, ಮಾರಿಷಸ್, ನೇಪಾಳ, ಯುಎಇ ಹಾಗೂ ಭೂತಾನ್ ದೇಶಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ.

Powered by Blogger.