".

Header Ads

ಪಳ್ಳಿ ಪುತ್ತಿಬೆಟ್ಟು ಮೇಲ್ಮನೆಯಲ್ಲಿ ನೂತನವಾಗಿ ನಿರ್ಮಿಸಿರುವ ವರ್ತೆಕಲ್ಕುಡ ದೈವಸ್ಥಾನದ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಹಾಗೂ ನೇಮೋತ್ಸವದ ಅಕ್ಕರೆಯ ಕರೆಯೋಲೆ

 



 ದಿನಾ೦ಕ 21-02-2923ನೇ ಮಂಗಳವಾರದಂದು ಪಳ್ಳಿ  ಶ್ರೀ ಮಹಾಕಾಳಿ ಮಠದಲ್ಲಿ ನವಕಪ್ರಧಾನ ಹೋಮ ಹಾಗೂ ಮಧ್ಯಾಹ್ನ 12-30ಕ್ಕೆ ಅನ್ನಸಂತರ್ಪಣೆ ನಡೆಯಲಿರುವುದು  ಹಾಗೂ ರಾತ್ರಿ ಘಂಟೆ 8-00ಕ್ಕೆ ಶ್ರೀ ಕ್ಷೇತ್ರದಲ್ಲಿ ದೇವರಿಗೆ ದೀಪಾರಾಧನೆ, ರಂಗಪೂಜೆ ನಡೆಯಲಿರುವುದು.

 ದಿನಾಂಕ 22-02-2023ನೇ ಬುಧವಾರದಂದು
ಬೆಳಿಗ್ಗೆ ಶ್ರೀ ನಾಗದೇವರಿಗೆ ತನು ತಂಬಿಲ ಮತ್ತು ಪರಿವಾರ ದೈವಗಳಿಗೆ ಫಣಿಯಾರ ಸೇವೆ ಮತ್ತು ಸಂಜೆ ನಾವು ನೂತನವಾಗಿ ನಿರ್ಮಿಸಿರುವ ಕಲ್ಕುಡ ವರ್ತೆ ದೈವಸ್ಥಾನದಲ್ಲಿ ವಾಸ್ತು ಪೂಜೆ ರಕ್ಷೋಘ್ನ ಹೋಮ, ಅಧಿವಾಸ ಪೂಜೆ ಮತ್ತು ಪ್ರಕಾರ ಬಲಿ


ದಿನಾಂಕ 23-02-2023ನೇ ಗುರುವಾರದಂದು ಬೆಳಿಗ್ಗೆ ಘಂಟೆ 10-00ಕ್ಕೆ ಪ್ರಾರ್ಥನೆ, ಸ್ವಸ್ತಿ ಪುಣ್ಯಃ, ಪ್ರಧಾನ ಹೋಮ, ಕಲಶ ಪೂಜೆ, ಕಲಶಾಭಿಷೇಕ ಮತ್ತು 

 ವರ್ತೆ ಕಲ್ಕುಡ ದೈವದ ಪ್ರತಿಷ್ಠೆ  ಪಸನ್ನ ಪೂಜೆ 

 ರಾತ್ರಿ ಘಂಟೆ 7-00ಕ್ಕೆ ಅನ್ನಸ೦ತರ್ಪಣೆ ನಡೆಯಲಿರುವುದು.

ರಾತ್ರಿ ಘಂಟೆ 9-00ಕ್ಕೆ ಧರ್ಮ
ದೈವಗಳ ನೇಮೋತ್ಸವವು ನಡೆಯಲಿದೆ. ಈ ಎಲ್ಲಾ ದೇವತಾ ಸತ್ಕರ್ಮಗಳನ್ನು ದೈವಜ್ಞರಾದ ಶ್ರೀದೇವಿ ಪ್ರಸನ್ನ ಭಟ್‌, ಅಲೆವೂರು ಇವರ ಮಾರ್ಗದರ್ಶನದಲ್ಲಿ ಮಹಾಕಾಳಿ ಮಠದ ಅರ್ಚಕರಾದ ವೇದಾಮೂರ್ತಿ ಪಳ್ಳಿ ಶ್ರೀ ಗಣಪತಿ ಭಟ್‌ ಇವರ ನೇತೃತ್ವದಲ್ಲಿ ನಡೆಸುವುದೆಂದು ನಿಶ್ಚಯಿಸಿರುತ್ತೇವೆ. 

 

ಆ ಪ್ರಯುಕ್ತ ಈ ದೇವತಾ ಕಾರ್ಯಕ್ಕೆ ತಾವೆಲ್ಲರೂ ಆಗಮಿಸಿ, ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ  ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ
ಶ್ರೀಮತಿ ಮತ್ತು ಶ್ರೀ ರಾಜು ಶೆಟ್ಟಿ, ಶ್ರೀಮತಿ ಸುಶೀಲ ಶೆಟ್ಟಿ ,ಶ್ರೀಮತಿ ಮತ್ತು ಶ್ರೀ ಮೋಹನ್‌ ಶೆಟ್ಟಿ
,ಶ್ರೀ ಜಯರಾಮ ಶೆಟ್ಟಿ,  ಶ್ರೀ ವಿನಾಯಕ ಶೆಟ್ಟಿ .

 

Powered by Blogger.