ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಅಜ್ದೇಗಾಂವ್, ಡೊಂಬಿವಲಿ - 33 ನೇ ವಾರ್ಷಿಕ ಶ್ರೀ ಶನಿ ಮಹಾಪೂಜೆ
ಚಿತ್ರ : ಧನಂಜಯ ಪೂಜಾರಿ
ವರದಿ : ಇನ್ನಂಜೆ ಜಯರಾಮ್
ಮಹಾರಾಷ್ಟ್ರದ ಮಿನಿ ತುಳುನಾಡು ಎಂದೇ ಬಿಂಬಿತವಾಗಿರುವ ಡೊಂಬಿವಲಿಯ ಅಜ್ದೇಗಾಂವ್ ನ ಶ್ರೀ ಜೈ ಭವಾನಿ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ಜೈ ಭವಾನಿ ಶನೀಶ್ವರ ಮಂದಿರ ದ 33 ನೇ ವಾರ್ಷಿಕ ಮಂಗಳೋತ್ಸವ ಫೆಬ್ರವರಿ 11 ರ ಶನಿವಾರ ಮಂದಿರದ ಪ್ರಧಾನ ಅರ್ಚಕ ಪ್ರಕಾಶ್ ಭಟ್ ಕಾನಂಗಿ ಅವರ ಪೌರೋಹಿತ್ಯ ದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ದೆ ಭಕ್ತಿಯಿಂದ ಜರುಗಿತು.
ಬೆಳಿಗ್ಗೆ ತೋರಣ ಮಹೂರ್ತ, ಗಣಹೋಮ, ನಡೆದು ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿ, ಅನ್ನ ಸಂತರ್ಪಣೆ ಯಲ್ಲಿ ಪಾಲ್ಗೊಂಡರು.
ನಂತರ ಶನಿ ದೇವರ ಕಲಶ ಪ್ರತಿಷ್ಠೆ ನಡೆದು ಗ್ರಂಥ ಪಾರಾಯಣ ನಡೆಯಿತು.
ನಗರದ ಪ್ರಸಿದ್ಧ ವಚಕರು ಹಾಗೂ ಆರ್ಥಧಾರಿಗಳು ಶನಿದೇವರ ಮಹಿಮೆಯನ್ನು ತಮ್ಮ ವಾಕ್ ಚಾತುರ್ಯ ದ ಮೂಲಕ ಪ್ರಸ್ತುತ ಪಡಿಸಿದರು.
ನಂತರ ಶ್ರೀ ಶನೀಶ್ವರ ದೇವರಿಗೆ ಮಂಗಳಾರತಿ ಬೆಳಗಿ, ತೀರ್ಥ ಪ್ರಸಾದ ವಿತರಿಸಲಾಯಿತು.
ರಾಜಕೀಯ ಧುರೀಣರು, ವಿವಿಧ ಧಾರ್ಮಿಕ, ಸಾಮಾಜಿಕ ಸಂಸ್ಥೆಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಕಾರ್ಯಕಾರಿ ಸಮಿತಿಯ ಮೋಹನ್ ಪಿ ಪಾಲನ್, ರಘು ಎಸ್ ಶೆಟ್ಟಿ, ವಿಶ್ವನಾಥ್ ಜಿ ಸಾಲ್ಯಾನ್, ಜಯಂತ್ ಬಿ ಪೂಜಾರಿ, ಸತೀಶ್ ಜಿ ಪೂಜಾರಿ, ಸಂತೋಷ್ ಜಿ ಪೂಜಾರಿ, ಜೈಕಿಶ್ ಆರ್ ಸನಿಲ್, ಹರೀಶ್ ಎಸ್ ಸಫಲಿಗ, ಕಿಶೋರ್ ಬಂಗೇರ, ಪ್ರಶಾಂತ್ ಶೆಟ್ಟಿ, ಕಿಶೋರ್ ಶೆಟ್ಟಿ, ಪ್ರವೀಣ್ ಪೂಜಾರಿ, ಸಚಿನ್ ಪೂಜಾರಿ,
ಮಹಿಳಾ ವಿಭಾಗದ ಅಧ್ಯಕ್ಷೆ ದಯಾ ಶೆಟ್ಟಿ, ಕಾರ್ಯದರ್ಶಿ ಪಾರ್ವತಿ ಸಾಲ್ಯಾನ್, ಜೊತೆ ಕಾರ್ಯದರ್ಶಿ ರೇವತಿ ಅಮೀನ್, ಕೋಶಾಧಿಕಾರಿ ಪುಷ್ಪ ಪಾಲನ್, ಸದಸ್ಯರುಗಳಾದ ಶಶಿಕಲಾ ಶೆಟ್ಟಿ, ಆಶಾ ಸುವರ್ಣ, ಶೋಭಾ ಶೆಟ್ಟಿ, ಲಾಯಿತಾ ಸಫಲಿಗ ಕುಶಲ ಶೆಟ್ಟಿ, ಸುಜಾತ ಶೆಟ್ಟಿ, ಸಾವಿತ್ರಿ ಸಾಲ್ಯಾನ್, ಗೀತಾ ಸಾಲ್ಯಾನ್, ಗೀತಾ ಆರ್ ಶೆಟ್ಟಿ, ಸುನಂದಾ ಸನಿಲ್, ಶಾರದಾ ಪೂಜಾರಿ, ಸುಮತಿ ಸಾಲ್ಯಾನ್, ಶುಭ ಶೆಟ್ಟಿ, ಇಂದಿರಾ ಶೆಟ್ಟಿ, ಶ್ಯಾಮಲಾ ಪೂಜಾರಿ, ಲತಾ ಪಿ ಪೂಜಾರಿ, ಅರುಣಾ ಶೆಟ್ಟಿ, ಗೀತಾ ಏನ್ ಶೆಟ್ಟಿ, ಶುಭ ಶೆಟ್ಟಿ, ಯುವ ವಿಭಾಗದ ದೀಕ್ಷಾ ಸುವರ್ಣ, ಸಾಗರ್ ಪೂಜಾರಿ, ಸಾಯಿನಾಥ್ ಪೂಜಾರಿ, ಧೀರೇಶ್ ಸಾಲ್ಯಾನ್, ಬಿಪಿನ್ ಅಮೀನ್, ಕಿರಣ್ ಶೆಟ್ಟಿ, ರೋಷನ್ ಪೂಜಾರಿ, ಹರ್ಷಿತ ಪೂಜಾರಿ, ಮೇಘನಾ ಪಾಲನ್, ದೀಕ್ಷಾ ಸಾಲ್ಯಾನ್, ಪೂಜಾ ಸಫಲಿಗ, ರೇಣುಕಾ ಪೂಜಾರಿ, ರಾಶಿ ಶೆಟ್ಟಿ, ಸಪ್ನಾ ಶೆಟ್ಟಿ, ದೀಪ್ತಿ ಪೂಜಾರಿ, ಸುಶ್ಮಿತಾ ಪೂಜಾರಿ, ಮಯೂರಿ ಸಾಲ್ಯಾನ್, ಅನುಪ್ರಿಯಾ ಪೂಜಾರಿ, ಮತ್ತು ಭಕ್ತರು 33 ನೇ ವಾರ್ಷಿಕ ಮಂಗಳೋತ್ಸವ ಯಶಸ್ವಿಯಾಗಿ ನೆರವೇರಿವಲ್ಲಿ ಸಹಕರಿಸಿದರು.
ಕಳೆದ 33 ವರ್ಷಗಳಿಂದ ಸಣ್ಣ ಕೊಠಡಿಯಲ್ಲಿನ ಮಂದಿರದಲ್ಲಿ ಶ್ರೀ ಜೈ ಭವಾನಿ ಹಾಗೂ ಶನೀಶ್ವರ ದೇವರನ್ನು ಆರಾಧಿಸಿ ಕೊಂಡು ಬರುತ್ತಿರುವ ಭಕ್ತರು, ಇದೀಗ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಜಾಗದ ಸಮಸ್ಯೆ ಎದುರಿಸುತ್ತಿರುವ ಈ ಮಂಡಳಿಯ ಸದಸ್ಯರು ನೂತನ ಮಂದಿರದ ಸಂಕಲ್ಪ ಹೊಂದಿದ್ದು, ಸಹೃದಯಿ ಭಕ್ತಾಭಿಮಾನಿಗಳ ತುಂಬು ಹೃದಯದ ಸಹಕಾರ ತುಂಬಾ ಅಗತ್ಯವಾಗಿದೆ.
ಮಂದಿರದ ಅಧ್ಯಕ್ಷ ರವಿ ಎಂ ಸುವರ್ಣ ಅವರ ಮುತುವರ್ಜಿ ಯಲ್ಲಿ ಉಪಾಧ್ಯಕ್ಷ ಸಂಜೀವ ಪಿ ಪಾಲನ್, ಕಾರ್ಯದರ್ಶಿ ರಂಜಿತ್ ಕೆ ಶೆಟ್ಟಿ, ಕೋಶಾಧಿಕಾರಿ ಸೂರಜ್ ಡಿ ಸಫಲಿಗ, ಜೊತೆ ಕಾರ್ಯದರ್ಶಿ ಪ್ರದೀಪ್ ಎಸ್ ಸಾಲ್ಯಾನ್, ಜೊತೆ ಕೋಶಾಧಿಕಾರಿ ದಿನೇಶ್ ಎಸ್ ಬಂಗೇರ, ಪ್ರಧಾನ ಅರ್ಚಕ ಕಾನಂಗಿ ಪ್ರಕಾಶ್ ಭಟ್, ಸಹ ಅರ್ಚಕ ಪ್ರವೀಣ್ ಪೂಜಾರಿ ಹಾಗೂ ಪದಾಧಿಕಾರಿಗಳ, ಮಹಿಳಾ ವಿಭಾಗದ ಹಾಗೂ ಯುವ ವಿಭಾಗದ ಸದಸ್ಯರ ಮತ್ತು ಎಲ್ಲಾ ಭಕ್ತರ ಸಹಕಾರ ದಿಂದ ಶೀಘ್ರದಲ್ಲೇ ನೂತನ ಭವ್ಯ ಮಂದಿರ ನಿರ್ಮಾಣ ವಾಗಲಿ ಎಂಬ ಆಶಯ ನಮ್ಮದು.
.jpeg)


.jpeg)
.jpeg)



Post a Comment