ಫೆ 18 ರಂದು ಬಿಲ್ಲವರ ಎಸೋಸಿಯೇಶನ್ ನ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಸಾಮೂಹಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ
ಬಿಲ್ಲವರ ಎಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಸಾಮೂಹಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ ವು ಶನಿವಾರ ದಿನಾಂಕ 18-02-2023 ರಂದು ಅಪರಾನ್ಹ 12 ರಿಂದ ರಾತ್ರಿ 8 ರ ತನಕ ಜರಗಲಿದೆ.
ತದ ನಂತರ ಮಹಾ ಮಂಗಳಾರತಿ, ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆ ಜರಗಲಿದೆ. ಡೊಂಬಿವಲಿ ಪರಿಸರದ ಸಮಾಜ ಬಾಂಧವರು , ಹಿತೈಸಿಗಳು, ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ತೀರ್ಥಪ್ರಸಾದ ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಡೊಂಬಿವಿಲಿ ಸ್ಥಳೀಯ ಸಮಿತಿ, ಮಹಿಳಾ ವಿಭಾಗ, ಯುವಬ್ಯೂದಯ ಉಪ ಸಮಿತಿಯ ಪರವಾಗಿ ಗೌರವ ಕಾರ್ಯದರ್ಶಿ ಸಚಿನ್ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Post a Comment