".

Header Ads

ಕಾಪು: ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಸ್ಕೂಟಿ ಯುವತಿ ಸಾವು

 


ಮೃತ ಯುವತಿಯನ್ನು ರೋಶಿನಿ ಡಿಸೋಜ ಎಂದು ಗುರುತಿಸಲಾಗಿದೆ. ರೋಶಿನಿ ತನಗೆ ವಿವಾಹ ನಿಶ್ಚಯವಾಗಿದ್ದ ಯುವಕ ಜೊಯೇಲ್ ಎಂಬವರ ಜೊತೆ ಮಂಗಳೂರಿನಿಂದ ಕಲ್ಮಾಡಿ ಚರ್ಚಿಗೆ ಭೇಟಿ ನೀಡಿ ಮಂಗಳೂರಿಗೆ ವಾಪಾಸಾಗುತ್ತಿದ್ದ ವೇಳೆ ಕಟಪಾಡಿ ಸಮೀಪದ ಮೂಡಬೆಟ್ಟು ಬಳಿ ರಸ್ತೆಯ ಬಲಬದಿಯಲ್ಲಿ ಡಿವೈಡರ್‌ ಪಕ್ಕದಲ್ಲಿ ಸ್ಕೂಟಿ ಚಲಾಯಿಸುತ್ತಿದ್ದಾಗ ಉಡುಪಿ ಕಡೆಯಿಂದ ಬಂದ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದು ಏಕಾಏಕಿಯಾಗಿ ಬಸ್ಸನ್ನು ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಸ್ಕೂಟಿ ಹಿಂದೆ ಕುಳಿತಿದ್ದ ರೋಶನಿಯವರ ಎಡ ಕಾಲಿಗೆ ಬಸ್ಸಿನ ಹಿಂಬದಿ ಡಿಕ್ಕಿ ಹೊಡೆದು ಬಸ್ಸನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ.
Powered by Blogger.