ಸಜಿಪ ಹೇಮಲತಾ ರವೀಂದ್ರ ಭಂಡಾರಿ ಸಭಾಗೃಹ ಉದ್ಘಾಟನೆಗೆ ಒಡಿಯೂರು ಶ್ರೀ ಗಳಿಗೆ ಆಹ್ವಾನ
ಬಂಟ್ವಾಳದ ಸಚಿಪ ಗ್ರಾಮದ ಕೋಟೆಕಣಿಯ ಶ್ರೀರಾಮ ನಗರ ದ ಶ್ರೀ ರಾಮ ಭಜನಾ ಮಂದಿರ ಟ್ರಸ್ಟ್ (ರಿ), ಯವರ ನೂತನವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಅಣಿಯಾಗಿರುವ ಶ್ರೀ ರಾಮ ಸಮುದಾಯ ಭವನ ಹಾಗೂ ಹೇಮಲತಾ ರವೀಂದ್ರನಾಥ್ ಭಂಡಾರಿ ಸಭಾಗೃಹ ಅನಾವರಣಗೊಳಿಸಲಿರುವ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಆಮಂತ್ರಣ ಪತ್ರ ನೀಡಲು ಮುಂಬೈಯ ಕೈಗಾರಿಕೋದ್ಯಮಿ, ಮುಂಬೈ ಬಂಟರ ಸಂಘದ ಬಂಟರ ವಾಣಿಯ ಕಾರ್ಯಧ್ಯಕ್ಷ ರವೀಂದ್ರನಾಥ್ ಎಮ್. ಭಂಡಾರಿ ಪುಣ್ಕೆಮಜಲು, ಮೋರ್ಲ ಚಂದ್ರಹಾಸ ಶೆಟ್ಟಿ, ಭಜನಾ ಮಂಡಳಿಯ ಅಧ್ಯಕ್ಷ ರಾಮ್ ದಾಸ್ ಅಂಚನ್ ನಟ್ಟಿಲು, ಪ್ರಭಾತ್ ಆಳ್ವ ಮಯ್ಯಲ ಮತ್ತು ಹರೀಶ್ ನಾೃಕ್ ಕಾರಾಜೆ ತೆರಳಿ ಫಲ ಪುಷ್ಪ ನೀಡಿ ಆಶೀರ್ವಾದ ಪಡೆದುಕೊಂಡರು.
ಮುಂಬೈಯ ಉದ್ಯಮಿ ರವೀಂದ್ರನಾಥ್ ಭಂಡಾರಿಯವರು ಹುಟ್ಟೂರು ಸಜಿಪ ಗ್ರಾಮದಲ್ಲಿ ಶ್ರೀರಾಮ ಭಜನಾ ಮಂದಿರದ ನಿರ್ಮಾಣ ಕಾರ್ಯಕ್ಕೆ ಮತ್ತು ಅಲ್ಲಿ ನಡೆಯುವ ಧಾರ್ಮಿಕ ಸಾಮಾಜಿಕ ಸೇವಾಕಾರಿಗಳಿಗೆ ಸದಾ ಸಹಕಾರವನ್ನು ನೀಡುತ್ತಾ ಬಂದವರು. ಇದೀಗ ಅವರ ದೇಣಿಗೆಯಲ್ಲಿ ಹೇಮಲತಾ ರವೀಂದ್ರ ಭಂಡಾರಿ ಸಭಾಗ್ರಹ ಲೋಕಾರ್ಪಣೆಗೊಳ್ಳಲಿದೆ.

Post a Comment