ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ವತಿಯಿಂದ ಅರಸಿನ ಕುಂಕುಮ ಮತ್ತು ಪ್ರತಿಭಾ ಪುರಸ್ಕಾರ
ಮಹಿಳೆಯರ ಒಗ್ಗಟ್ಟಿನಿಂದ ಸಮಿತಿ ಬಲಿಷ್ಠಗೊಂಡಿದೆ :ನ್ಯಾಯವಾದಿ ಜಗನ್ನಾಥ್ ಶೆಟ್ಟಿ
ಮುಂಬಯಿ : ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಪೂರ್ವ ಇದರ ವತಿಯಿಂದ ಜ. 29ರಂದು ಅರಸಿನ ಕುಂಕುಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎಸ್. ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾವತಿ ದಿನೇಶ್ ಕುಲಾಲ್ ಇವರ ನೇತೃತ್ವದಲ್ಲಿ, ಟೋಪಿವಾಲ ಬಿಎಂಸಿ ಮಾಧ್ಯಮಿಕ ಶಾಲೆ, ತಳ ಬಹಡಿ, ಬಚ್ಚಾಣಿ ನಗರ ರೋಡ್, ಹೋಟೆಲ್ ಪ್ರಭು ನಿಕೇತನದ ಹತ್ತಿರ, ಪುಷ್ಪ ಪಾರ್ಕ್, ಮಲಾಡ್ ಪೂರ್ವ ಇಲ್ಲಿ ನಡೆಯಿತು.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನ್ಯಾ, ಜಗನ್ನಾಥ್ ಶೆಟ್ಟಿ ಯವರು ಮಾತನಾಡುತ್ತಾ ಧಾರ್ಮಿಕ ,ಸೇವೆ ಮಾಡಿದಲ್ಲಿ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಸಂಸ್ಕೃತಿ ಉಳಿದಲ್ಲಿ ನಮ್ಮ ಧರ್ಮ ಉಳಿಯುತ್ತದೆ ಧರ್ಮ ಉಳಿದಲ್ಲಿ ದೇಶ ಬಲಿಷ್ಠ ವಾಗುತ್ತದೆ. ಪೂಜಾ ಸಮಿತಿ ಕೇವಲ ಪೂಜೆಗೆ ಸೀಮಿತವಾಗಿರದ ಈ ಪರಿಸರದ ತುಳು ಕನ್ನಡಿಗರನ್ನು ಒಗ್ಗೂಡಿಸಿ ಅವರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಸಮಿತಿ ಬೆಳೆದಿದೆ ಮಹಿಳಾ ವಿಭಾಗದ ಸದಸ್ಯರು ಒಗ್ಗಟ್ಟಿನಿಂದ ಸಮಿತಿ ಬಲಿಷ್ಠಗೊಂಡಿದೆ ಎಂದರು.
ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ರತ್ನಾವತಿ ಕುಲಾಲ್ ಮಾತನಾಡುತ್ತಾ ಪರಿಸರದ ಮಹಿಳೆಯರು ಬಹಳ ಉತ್ಸಾಹದಿಂದ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ ,ನಾವು ಇದೇ ರೀತಿ ಒಗ್ಗಟ್ಟಿನಿಂದ ಸಮಿತಿಯ ಎಲ್ಲಾ ಕಾರ್ಯಕ್ರಮದಲ್ಲಿ ಸೇರೋಣ, ಸಾಮಾಜಿಕ ಧಾರ್ಮಿಕ ಸೇವೆಯ ಅನುಭವ ಪಡೆಯಲು ಇದು ಸರಿಯಾದ ವೇದಿಕೆ. ಮಹಿಳೆಯರು ಕೇವಲ ಮನೆ ಕೆಲಸ ಮಾತ್ರ ಅಲ್ಲ ಸಮಾಜ ಸೇವೆಯನ್ನು ಮಾಡುತ್ತಿರುವುದನ್ನು ಇಲ್ಲಿ ನಾವು ಕಾಣಬಹುದು, ಇದು ಮಹಿಳೆಯರನ್ನು ಒಗ್ಗೂಡಿಸುವ ಕಾರ್ಯಕ್ರಮ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭಾ ಸುನಿಲ್ ಆಚಾರ್ಯ ಮಾತನಾಡುತ್ತಾ ಎಲ್ಲಾ ಸಮುದಾಯದ ಬಂಧುಗಳು ಒಗ್ಗಟ್ಟಾಗಿ ಸೇವೆಯನ್ನು ಮಾಡು ವುದನ್ನು ನೋಡುವಾಗ ಸಂತೋಷವಾಗಿದೆ. ಮನೆ ಕುಟುಂಬ ನೋಡುವುದರೊಂದಿಗೆ ಸಾಮಾಜಿಕ ಸೇವೆಗಲ್ಲೋ ಮಹಿಳೆಯರು ಸೇರಿಕೊಳ್ಳಬೇಕು ಎಂದರು.
ಅಪ್ಪಾಜಿಬೀಡು ಪೌಂಡೇಶನ್ ವರ್ಲಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕವಿತಾ ಗೋಪಾಲ್ ಶೆಟ್ಟಿ ಯವರು ಉಪಸ್ಥಿತರಿದ್ದು ಮಾತನಾಡುತ್ತಾ ಇದೇ ರೀತಿ ವರಮಹಾಲಕ್ಷ್ಮಿ ಪೂಜೆ ಸಮಿತಿಯ ಮೂಲಕ ಪರಿಸರದ ಮಹಿಳೆಯರು ಒಂದೆಡೆ ಸೇರುವಂತಾಗಲಿ. ಇದು ಅರ್ಥಪೂರ್ಣವಾದ ಕಾರ್ಯಕ್ರಮ ವಾಗಿದ್ದು ಮಹಾರಾಷ್ಟ್ರದಲ್ಲಿ ನಮ್ಮವರು ಕೂಡ ಇದನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.
ಯುವ ವಿಭಾಗದ ಕಾರ್ಯಾಧ್ಯಕ್ಷರಾದ ಸೌಮ್ಯ ಮೆಂಡನ್ ಮಾತನಾಡುತ್ತಾ ಮುಂದೆ ಯುವ ವಿಭಾಗದಿಂದ ಮಕ್ಕಳ ಉತ್ಸವ ನಡೆಯಲಿದ್ದು ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು.
ವೇದಿಕೆಯಲ್ಲಿ ಸಮಿತಿಯ ಕಾರ್ಯಕೋಶಧಿಕಾರಿ ಜಗನ್ನಾಥ್ ಮೆಂಡನ್ ಸಾಲಿಗ್ರಾಮ ,ಮಹಿಳಾ ವಿಭಾಗದ ಸಲಹೆಗಾತಿ ಮೋಹಿನಿ ಜಗನ್ನಾಥ್ ಶೆಟ್ಟಿ. ಉಪ ಕಾರ್ಯ ಅಧ್ಯಕ್ಷರುಗಳಾದ ಲಲಿತ ಸಿದ್ದರಾಮ ಗೌಡ, ಸಂದ್ಯ ಪ್ರಭು, ಜೊತೆ ಕೋಶಧಿಕಾರಿ ಗಳಾದ ನಳಿನಿ ಕರ್ಕೇರ, ಜಯಲಕ್ಷಿ ನಾಯಕ್, ಮೊದಲಾದವರು ಉಪಸ್ಥಿತರಿದ್ದರು.
ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರೀತಿ ಪೂಜಾರಿಯವರನ್ನು ಸನ್ಮಾನಿಸಲಾಯಿತು. ನಳಿನಿ ಕರ್ಕೇರ ಇವರನ್ನು ಪರಿಚಯಿಸಿದರು.
ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷ ಗೀತಾ ಮೆಂಡನ್ ಹಳದಿ ಕುಂಕುಮ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಶೋಭಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಶ್ರೀಮತಿ ಕುಮರೇಶ್ ಆಚಾರ್ಯ ಸ್ವಾಗತ ಮಾಡಿದರು.ಮಹಿಳಾ ವಿಭಾಗದ ಸಲಹೆಗಾರರಾದ ಭಾರತಿ ವಾಗ್ಲೆ ದಾನಿಗಳ ಯಾದಿಯನ್ನು ವಾಚಿಸಿದರು.ಕೋಶ ಧಿಕಾರಿ ಶೀಲಾ ಎಂ ಪೂಜಾರಿ ಧನ್ಯವಾದವಿತ್ತರು. ಅತಿಥಿಗಳನ್ನು ಭಾರತಿ ಆಚಾರ್ಯ, ವಿದ್ಯಾ ಆಚಾರ್ಯ ಪರಿಚಯಿಸಿದರು.
ಪ್ರಾರಂಭದಲ್ಲಿ ಭಜನೆ ಭುವಜಿ ಶ್ರೀಧರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಭಜನೆ, ಕುಣಿತ ಭಜನೆ ನಡೆಯಿತು, ಕೊನೆಯಲ್ಲಿ ಪಾಲ್ಗೊಂಡ ಎಲ್ಲಾ ಮಹಿಳೆಯರಿಗೆ ಅರಸಿನ ಕುಂಕುಮದೊಂದಿಗೆ ಉಡುಗೊರೆಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದ ಯಶಸ್ವಿಯಲ್ಲಿ ಪೂಜಾ ಸಮಿತಿಯ ಕಾರ್ಯದರ್ಶಿ ದಿನೇಶ್ ಪೂಜಾರಿ. ಕುಮರೇಶ್ ಆಚಾರ್ಯ, ಸುಂದರ್ ಪೂಜಾರಿ, ಲಕ್ಷ್ಮಣ್ ರಾವ್, ದಿನೇಶ್ ಕಾಮತ್, ಸುರೇಂದ್ರ ಆಚಾರ್ಯ, ಜಯ ಪೂಜಾರಿ, ಈಶ್ವರ್ ಕುಲಾಲ್, ಬೋಜ ಮುಲ್ಯ. ಮಹಿಳಾ ವಿಭಾಗದ ಸದಸ್ಯರು ಮತ್ತು ಯುವ ವಿಭಾಗದ ಸುದೀಪ್ ಪೂಜಾರಿ ಡಾಕ್ಟರ್ ಶಶಿನ್ ಆಚಾರ್ಯ. ದಿವ್ಯ ಪೂಜಾರಿ., ದಿಶಾ ಪಿ ಕರ್ಕೇರ (ಕೋಶಾಧಿಕಾರಿ), ಪವನ್ ಎಲ್ ರಾವ್ (ಜೊತೆ ಕಾರ್ಯದರ್ಶಿ), ಶಿವಾನಿ ಎಸ್ ಪ್ರಭು (ಜೊತೆ ಕೋಶಾಧಿಕಾರಿ) ಲಾಸ್ಯ ಕುಲಾಲ್, ಹರ್ಷ ಕುಂದರ್, ಸಿ ಎ ರಾಜೇಶ್ ಮೂಲ್ಯ . ನಿಧಿ ನಾಯಕ್, ವಿನೀತ್ ಪೂಜಾರಿ, ಋತ್ವಿ ಕುಂದರ್, ಶಿವಾನಿ ನಾಯಕ್, ಪ್ರಥಮ್ ಪೂಜಾರಿ ಮತ್ತಿತರರು ಸಹಕರಿಸಿದರು.








Post a Comment